ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ ನಡೆದದ್ದೇ ದಾರಿ

   ನಂತರ ತಾನು ಕೊಡುವ ಐದೋ ಹತ್ತೋ ರೂಪಾಯಿಯ ನೋಟನ್ನು ತೀರ
ನಿರ್ಲಿಪ್ತ ಮುದ್ರೆಯಿಂದ ಸ್ವೀಕರಿಸಿ, ಪಟಕ್ಕನೆ ಪೆಟಿಗೆಯಲ್ಲಿ ಹಾಕಿ, ತನ್ನ
ಬೃಹದಾಕಾರದ ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳೂತ್ತ 'ಹರೇ ರಾಮ ಹರೇ ರಾಮ'
ಅನ್ನುತ್ತಾನೆ.
   ಹಲವು ವರ್ಷಗಳಿಂದ ನಡೆದುಬಂದಿದೆ ಇದು. ಆದರೂ ಪ್ರತಿ ರವಿವಾರ ಸಂಜೆ\
ಅಲ್ಲಿಗೆ ಬಂದಾಗ ತನಗೆ ಹೊಸ ಹುರುಪು ಬರುತ್ತದೆ. ನಡುನಡುವೆ ಅವನು ತನಗಾಗಿ
ನವಗ್ರಹ ಪೂಜೆ,ಮಹಾಕಾಲಿ ಪೂಜೆ ಇತ್ಯಾದಿ ಮಾಡಿ,ಹೆಚ್ಚಿನ ದಕ್ಷಿಣೆ ಪಡೆದು,ಪ್ರಸಾದ
ಕೊಟ್ಟು, 'ಶೀಘ್ರ ಸುಮಂಗಲೀ ಭವ ಅಂತ' ಹರಸಿದಾಗಲಂತೂ ಕೃತಕೃತ್ಯಳಾದಂತಹ
ಅನುಭವ....
   ಅವನ ಕಡೆಗೇ ಮೊದಲು ಹೋಗುವುದು. ಅಲ್ಲಿಂದ ತಿರುಗಿ ಬರುವಾಗ
ಬೇಕಾದರೆ ಜೋಶಿಯ ಮನೆಗೆ ಹೋಗಿ ತಾನೆಂದೂ ಕಾಣದ ರೇಖಾನ ಗೆಳೆಯರ ಬಗ್ಗೆ,
ಶಾಂತಾನ ಸೊಕ್ಕಿನ ಬಗ್ಗೆ, ಮತ್ತೆ ಅವರಿವರ ಚಾಲು ಕೆಟ್ಟ ಇದ್ದ ಬಗ್ಗೆ ಮಾತಾಡಿ
(ಜೋಶಿಗೆ ಅದೆಲ್ಲಾ ಸೇರುವುದಿಲ್ಲ. ಆದರೂ ಒಮ್ಮೊಮ್ಮೆ ಕೇಳುತ್ತಾನೆ
ಸಮಾಧಾನದಿಂದ-) ರಾತ್ರಿ ೯ರ ಸುಮಾರಿಗೆ ಮನೆಗೆ ಹೋದರಾದೀತು.
   -ಗಿರಿಜಾ ಧಪಧಪ ಹೆಜ್ಜೆ ಹಾಕಿದಳು.
   *
   ರೇಖಾ ರೂಮು ಬಿಟ್ಟು ಎರಡು ತಾಸು ಕಳೆದಿದೆ. ಟಿಳಕವಾಡಿಯಲ್ಲಿಯ ತನ್ನ
ಮಾಂಸಿಯ ಮನೆಯ ಹತ್ತಿರವಿರುವ ಡಾಕ್ಟರ್ರ ಮಕ್ಕಳಿಗೆ ಟ್ಯೂಶನ್ ಹೇಳಿ
ಮುಗಿದಿದೆ. ಇನ್ನು ಆಚೆ ಓಣಿಗೆ ಇನ್ನೊಂದು ಟ್ಯೂಶನ್ ಹೇಳಲು ಹೋಗಬೇಕು.
ಹಳ್ಳಿಯಲ್ಲಿರುವ ಮುದುಕಿ ತಾಯಿಗೆ ರೈತರು ಇರುವ ಚೂರು ಹೊಲದ ಉತ್ಪನ್ನ
ಏನೂ ಕೊಡುವುದಿಲ್ಲ. ತಮ್ಮಂದಿರು ಉಢಾಳರಾಗಿ ತಿರುಗುತ್ತಿದ್ದಾರೆ.ತಂಗಿಯ ಲಗ್ನ
ಆಗಬೇಕು.ಹಣದ ಅಡಚಣೆ ಈಗೀಗ ಬಹಳವಾದುದರಿಂದ ಆಫೀಸಿಗೆ ರಜೆ ಇರುವ
ರವಿವಾರ ಸಂಜೆ ಆಕೆ ಎರಡು ಟ್ಯೂಶನ್ ಹೇಳತೊಡಗಿದ್ದಾಳೆ. ಮಾಂಸಿಯ
ಸಹಾಯದಿಂದ ಸಿಕ್ಕಿದ್ದು ಈ ಟ್ಯೂಶನ್. ತಂಗಿಗೆ ವರ ನೋಡಲು ಹೇಳಬೇಕು ಮಾಂಸಿಗೆ.
ತಂಗಿಯ ಲಗ್ನವಾದರೂ ಆಗಲಿ. ತನ್ನನ್ನು ಯಾರೂ ಪಾಸು ಮಾಡಲಿಲ್ಲೆಂದು ಅವಳೂ
ಏಕೆ ಲಗ್ನವಿಲ್ಲದೆ ಕೂಡಬೇಕು?
    ದಣಿವು. ಬಸ್ಸಿಗೆ ಯಾಕೆ ಮೂವತ್ತು ಪೈಸೆ ದಂಡವೆಂದು ಇಷ್ಟು ದೂರ ನಡೆದೇ
ಬಂದದ್ದರಿಂದ ಕಾಲು ನೋಯುತ್ತಿವೆ. ಬ್ಯಾಗಿನಲ್ಲಿಯ ಸೀರೆಯ ಭಾರ ಬೇರೆ....
ಸೀರೆಯ ಜೊತೆಗೇ ನೆನಪಾಗುತ್ತದೆ ಶ್ರೀಧರ ಕುಲಕರ್ಣಿಯ ಹ್ಯಾಂಡಸಮ್