ಪುಟ:ನಡೆದದ್ದೇ ದಾರಿ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಕವಲು / ಒಂದು ರವಿವಾರ ೧೬೩

ಪರ್ಸನಾಲಿಟಿ. ಆಫೀಸ್ ನಲ್ಲಿ ಕೆಲಸ ಮಾಡುವ ಎಲ್ಲರಿಗಿಂತ ಎತ್ತರ, ಗೋಧಿಬಣ್ಣದ, ನಗುವ ಕಣ್ಣುಗಳ, ಮಿಂಚುಗೂದಲಿನ ತರುಣ. ಅವನು ನಸುಬಾಗಿ 'ಹಲೋ' ಅನ್ನುವ ಸೊಗಸೇ ಸೊಗಸು. ಉಳಿದವರ ಹಾಗೆ ಚೆಲ್ಲು-ಚೆಲ್ಲು ಅಲ್ಲ ಅತ್ತ. ಯಾರೊಂದಿಗೂ, ಯಲ್ಲರಿಗಿಂತ ಚೆಂದ ಇರುವ ವಸುಧಾ ದಾಶರಥಿಯ ಕೂಡ ಸಹ, ಆತ ಮಾತನಾಡುವುದಿಲ್ಲ. ಅವನಾಯಿತು, ಅವನ ಕೆಲಸವಾಯಿತು. ತನಗಂತೂ ಅವನನ್ನು ನೋಡಿದರೆ ಎದೆಯಲ್ಲಿ ಏನೋ ಲಾಗಹಾಕಿ, ಗಂಟಲಿಗೆ ಒಂದು ಕೂತು, ಉಸಿರು ಕಟ್ಟಿಸಿದ ಹಾಗೆ ಅನ್ನಿಸುತ್ತದೆ. ಅವನೋ, ತಾನಾಗಿ ಹೋಗಿ ಮಾತಾಡಿಸುವ ಪ್ರಯತ್ನ ಮಾಡಿದರೂ ಒಮ್ಮೆ ಸಹ ಮಾತಾಡಿಲ್ಲ ತನ್ನ ಕೂಡ....

       ಇನ್ನು ಆ ಜಗನ್ನಾಥನ್. ಶ್ರೀಮಂತ ಅಂತ ಗರ್ವ ಅವನಿಗೆ. ಅವನ ಔಟಿಂಗ್ಗಳ ಕಥೆ ಆಫೀಸಿಗೆಲ್ಲ ಚಿರಪರಿಚಿತ. ಅವನ ಸ್ಪೆಸಿಯಾಲಿಟಿ ಅಂದರೆ ಪ್ರತಿ ವಾರ ಒಬ್ಬ ಹೊಸ ಹುಡುಗಿಯನ್ನು ಕರೆದೊಯ್ಯುವುದು, ಮತ್ತು ಆ ಹುಡುಗಿ ಕಳೆದ ವಾರದ ಹುಡುಗಿಗಿಂತ ಹೆಚ್ಚು ಸುಂದರಿಯಾಗಿರುವುದು. ನೋಡಲು ಸಾದಾ ಇದ್ದ ಹುಡುಗಿಯರು ಅವನ ಕಣ್ಣಲ್ಲೇ ಕಾಣುವುದಿಲ್ಲ..... ಬಹಳ ರಸಿಕನಿದ್ದಿರಬೇಕು ಆತ.  ಒಮ್ಮೆ  ಅವನೊಂದಿಗೆ ಹೋಗಿ ಬಂದ ವಸುಧಾ ಏನೆಲ್ಲ ಹೇಳಿದ್ದಳಲ್ಲ - ಪೂನಾ ರೋಡಿನ  ಗುಂಟ ಇರುವ ಅಡವಿ, ಎತ್ತರ  ಕಂಟಿಗಳು, ನಡುವೆ ಹುಲ್ಲು ಹಾಸಿಗೆ, ಜಗನ್ನಾಥನ್ನ ಪ್ರಾವೀಣ್ಯ - ಛೀ ಛೀ, ನಾಚಿಕೆಯಿಲ್ಲ ಆ ಹಾಳಾದವಳಿಗೆ. ಎಲ್ಲಾ ಹೇಳಿದಳು-ತಾನೇನೋ ಮಹಾ ಜಗತ್ತೇ ಗೆದ್ದು ಬಂದ ಹಾಗೆ.
       ಜಗನ್ನಾಥನ್ ತನ್ನ ಕಡೆ ತಪ್ಪಿ ಸಹ ನೋಡುವುದಿಲ್ಲ. ಅವನೇ ಏಕೆ, ಆಫೀಸ್ನಲ್ಲಿ ಯಾರೂ ನೋಡುವುದಿಲ್ಲ.
      -ತುಂಬ ಬೇಸರದಿಂದ ರೇಖಾ ತನ್ನ ಕಪ್ಪು ಡೊಳ್ಳು ಮೈ, ಮೊಂಡ ಮೂಗು, ಉಬ್ಬಿದ ಹಲ್ಲು ಸವರಿಕೊಂಡಳು.
       ಟ್ಯೂಶನ್ ಗೆ ಹೊತ್ತಾಯಿತು. ಅದು ಮುಗಿಸಿ ಮಾಂಸಿಯ ಮನೆಗೆ ಹೋಗಿ ತಂಗಿಯ ವರದ ವಿಷಯ ಹೇಳಿ, ಆಕೆ ಊಟ ಮಾಡು ಅಂದರೆ ಅಲ್ಲೇ ಊಟ ಮಾಡಿ, ತಿರುಗಿ ರೂಮಿಗೆ ಹೋಗುವಾಗ ೩೦ ಪೈಸೆ ಹೋದರು ಅಡ್ಡಿಯಿಲ್ಲ, ಬಸ್ಸಿನಿಂದ ಹೋಗಬೇಕು.
       *
       ಹೋಟೆಲ್ ಗ್ರೀನ್ಸ್ ಗೆ ಬಂದ ಶಾಂತಾ ಲೌಂಜ್ ನಲ್ಲಿ ನಿಂತು ಅತಿತ್ತ ನೋಡಿದಳು. ಗಂಟೆ ಏಳು. ಅವಳಿಗಿಂತ ಅರ್ಥ ತಾಸು ಮೊದಲೇ ಬಂದಿರಬೇಕಾದ ಡಾ.ಪ್ರಭಾಕರ ಇನ್ನೂ ಪತ್ತೆಯಿಲ್ಲ. ನಿನ್ನೆ ವಾರ್ಡಿನಿಂದ ತಾನು ಹೊರಗೆ ಬಂದಾಗ