ಪುಟ:ನಡೆದದ್ದೇ ದಾರಿ.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ನಡೆದದ್ದೇ ದಾರಿ

ತನ್ನ ಹಿಂದೆಯೇ ಬಂದು ಪಿಸು ಧ್ವನಿಯಲ್ಲಿ ಆದರೂ ಸ್ಪಷ್ಟವಾಗಿ ಹೇಳಿದ್ಧ ಆತ, " ಹೋಟೆಲ್ ಗ್ರೀನ್ಸ್, ಆರುವರೆ. ಹೊರಗೆ ಕೂತಿರುತೀನಿ. ಸ್ವಲ್ಪ ಕತ್ತಲಾದ ಮ್ಯಾಲ ಬಾ."
    ಡಾ. ಪ್ರಭಾಕರ ಬಹಳ ಪ್ರಾಂಪ್ಟ್. ಹಾಗೆಳ ಉಳಿದವರ ಹಾಗೆ ಒಬ್ಬರಿಗೆ ಅಪ್ಪೋಯಿಂಟ್ಮೆಂಟ್ ಕೊಟ್ಟು ಬೇರೊಬ್ಬರ ಜೊತೆ ಹೋಗುವ ಮನುಷ್ಯ ಅಲ್ಲ ಆತ. ಡಾಕ್ಟರಾದವರಿಗೆ ಇಂಥ ಪಂಕ್ಟುಯಾಲಿಟಿ ಬೇಕು. ಇಂಥ ಸೈನ್ಸರಿಟಿ ಬೇಕು. 
    ಆದರೆ ಇವತ್ತೆನಾಯಿತು ಅವನಿಗೆ ?
      "ಮೇಮ್ ಸಾಬ್  ಅಂದರ್ ಬೈಠ ಸಕತೆ ಹಾಯ್ "  - ಯುನಿಫಾರ್ಮ್ಮಿನ ಅಟೆಂಡೆಂಟ್ ಮೃದು ಸ್ವರದಲ್ಲಿ ಹೇಳುತ್ತಾನೆ. ಇನ್ನೇನು ಮಾಡುವುದು, ಈ ಪ್ರಭಾಕರನ ಸಲುವಾಗಿ ಡಾ. ಪಾಟೀಲ್ ಗೂ ಆಗುವುದಿಲ್ಲ ಅಂತ ಹೇಳಿದೆನಲ್ಲ. ಸಂಡೇ ಎಲ್ಲ ವ್ಯರ್ಥ - ಎಂದು ಶಾಂತಾ ಪೇಚಾಡುತ್ತಿದ್ದಾಗ ಮೂಲೆಯ ಟೇಬಲಿನಿಂದ ಬಂತು ಒಂದು ಧ್ವನಿ, "ಹಾಲೋ ಮಿಸ್. ಚಿಟ್ನಿಸ್."
     -ಶಾಂತಾ ತಿರುಗಿ ನೋಡಿದಳು . ಗದ್ದಲದಿಂದ ದೂರ ಒಬ್ಬನೇ ಬಿಆರ್  ಕುಡುಯುತ್ತ ಕೂತಿದ್ದ ಆತ ,ಹೊಸದಾಗಿ ಬಂದಿದ್ದ ತಮ್ಮ ಕಾಲೇಜಿನ ಹಾಸ್ಪಿಟಲಿಗೆ . ಹೆಸರೇನ್ನೋ ಎಂಥದೋ ವರ್ಮಾ .ಉತ್ತರದವನಿರಬೇಕು. ಇನ್ನೂ ಪ್ರೊಬೇಶನರಿ .ಲಗ್ನವಾಗಿಲ್ಲ .ಕಟ್ಟುಮಸ್ತಾಗಿ ಮಿಲಿಟರಿಯವನ ಹಾಗಿದ್ದಾನೆ. ಸಂಜೆ ಇವನೊಂದಿಗೆ ಕಳೆಯುವುದಾದರೆ ಎಷ್ಟು ಸುಂದರವಾದೀತು....
       - ಮುಂದೆ ಹತ್ತು ನಿಮಿಷದ ನಂತರ ಶಾಂತಾ ವರ್ಮಾನೊಂದಿಗೆ ಅವನ ಕಾರಿನಲ್ಲಿ.
       ವೇಗವಾಗಿ ಓದುತಿದ್ದ ಕಾರು ನಡುವೆಲ್ಲೋ ಗಕ್ಕನೆ ನಿಂತಾಗ, ಇದೇನು, ಬಂದೇಬಿಟ್ಟಿತೇ ಇವನ ಮನೆ - ಅಂದುಕೊಂಡು ಹೊರಳಿ ನೋಡಿದ ಶಾಂತಾ ವರ್ಮಾ ಕಾರಿನಿಂದಿಳಿದು ಬದಿಯಲ್ಲಿನ ಮೆಡಿಕಲ್ ಶಾಪ್ ಹೊಕ್ಕದ್ದು ನೋಡಿ 'ಓ' ಅಂದು ಪುನಃ ಸೀಟಿಗೊರೆಗಿದಳು. 
       "ಅಂದಹಾಗೆ ನಿಮ್ಮ ಫಸ್ಟ್ ನೇಮ್ ಏನು ವರ್ಮಾಜೀ?"
       ಬಲಗೈಯಿಂದ ಡ್ರೈವ್ ಮಾಡುತ ಎಡಗೈಯನ್ನು ಫ್ರೀಯಾಗಿ ಅವಳ ಮೇಲೆ ಹರಿಬಿಟ್ಟು ಉತ್ತರಿಸಿದ ಆತ, "ಚಿನ್ಮಯ". 
       ಚಿನ್ಮಯಾನಂದಜೀಯ ಭಾಷಣದ ನೆನೆಪಾಗಿ ಶಾಂತಾ ಕಿಸಕ್ಕನೆ ನಕ್ಕಳು. 
       ಕಾರು ಓಡುತಿತ್ತು