ಪುಟ:ನಡೆದದ್ದೇ ದಾರಿ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವಲು / ಹನುಮಾಪುರದಲ್ಲಿ ಹನುಮ ಜಯಂತಿ ೧೬೭

ಹಳ್ಳಿಯಲ್ಲಿನ ಇತರ ಕೆಲ ಅನ್ಯ ಜಾತಿಯ ತರುಣರು ಒಂದು ವರ್ಷದಿಂದಲೂ ನ್ಯಾಯ ವೆಬ್ಬಿಸಿದ್ದರು-ಉತ್ಸವಮೂರ್ತಿಗೆ ಮೊದಲ ಕಾಯನ್ನು ಯಾವಾಗಲೂ ಬ್ರಾಹ್ಮಣರೇ ಏಕೆ ಒಡೆಯಬೇಕು? ದೇವರ ಪೂಜೆ ಮಾಡುವವರು ಶೆಟ್ಟರು; ದೇವಾಲಯದ ಟ್ರಸ್ಟಿನ ಚೇರ್ಮನ್ರು ಗೌಡರು; ಹಬ್ಬಹುಣ್ಣಿಮೆ- ಉತ್ಸವಗಳೊಂದು ಎಲ್ಲ ವೆಚ್ಚ ಹೊರುವವರು ಅಯ್ಯನವರು ;ದಿನ ಗುಡಿಯ ಕಸ ಬಳಿಯುವ ದೇವದಾಸಿಯರು, ಶನಿವಾರಕೊಮ್ಮೆ ಪಾಲಕಿಯ ನಂತರ ಸಂಗೀತ ಸೇವೆ ಸಲ್ಲಿಸುವವರು, ಹೊಲೆಯರು. ಹೀಗಿದ್ದಾಗ ದೇವರೊಂದಿಗೆ ಏನು ಸಂಭಂದ ವಿಲ್ಲದ ಬ್ರಾಹ್ಮಣರಿಗೇಕೆ ಮೊದಲ ಕಾಯಿ ಹೊಡೆಯುವ ಹಕ್ಕು? ಇಷ್ಟು ವರ್ಷ ಊರಿನ ಬ್ರಾಹ್ಮಣರು ಅಲ್ಪ ಶ್ರಮದಿಂದ ಅತಿ ಲಾಭ ಅನುಭವಿಸಿದ್ದು ಸಾಕು. ಲಿಂಗಾಯತರೇಕೆ ಕಡಿಮೆ? ರಾಮಗೌಡರೇಕೆ ಮೊದಲ ಕಾಯಿ ಒಡೆಯಬಾರದು? ಈಗ ಕಾಲ ಬದಲಾಗಿದೆ. ಮೊದಲಿನ ಹಾಗೆ ಬ್ರಾಹ್ಮಣರು ತಾವೇ ಸ್ರೇಷ್ಟರೆಂದು ಸಾದಿಸುವಹಾಗಿಲ್ಲ ಹಾಗೆನ್ನುವವರನ್ನು ಗುಂಡಿಕ್ಕಿ ಕೊಳ್ಳ ಬೇಕು. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡ ಬೇಕು. ಇಷ್ಟು ದಿನ ನಮಗೆ ಅನ್ಯಾಯವಾಗಿದೆ. ಇನ್ನು ನಾವು ಸುಮ್ಮನಿರುವುದಿಲ್ಲ. ಈಸಲ ರಾಮಗೌಡರಿಂದಲೇ ಮೊದಲು ಕಾಯಿ ಒಡೆಸತಕ್ಕದು. ಇದು ವೀರಭಾದ್ರಗೌಡ ಹಾಗು ಸಂಗಡಿಗರ ಹಟ.

       ಗೋಪಾಲಚಾರ್ಯರ ಏಕಮೇವ ಪುಟ ಕೇಶವಾಚಾರಿಗೆ ಹಾಗು ಉಳಿದ ಬ್ರಹ್ಮನೆರಿಗೆ ಇದು ದೊಡ್ಡ ಅವಮಾನ. ಪ್ರಾಣ ದೇವರುಅಂದ್ರೀನು, ಈ ಶೂದ್ರರು ಪ್ರಾಣದೇವರೊಂದಿಗೆ ತಮ್ಮ ಸಂಭಂದ ಜೋಡಿಸುತ್ತಾರೆಂದರೇನು-ಎಂದು ಅವರು ಕುಡಿಯುತಿದ್ದಾರೆ. ತಲೆತಲಾಂತರದಿಂದ ತಮಗೆ ಸಲ್ಲುತ್ತ ಬಂಡ ಈ ಗೌರವ ಕಸಿಯಲು ಈ ಮಕ್ಕಳು ಎಷ್ಟರವರು? ಇವರ ಯೋಗ್ಯತೆ ಏನು?ಸ್ತೋತ್ರವಿಲ್ಲದೇ, ಮಂತ್ರವಿಲ್ಲದೇ, ಮಂಗಳಾಷ್ಟಕವಿಲ್ಲದೇ, ಮೊಹರಂ ದಲ್ಲಿ ಮುಸಲ್ಮಾನರು ಅಲ್ಲಾ ದೀವರಮುಂದೆ ಹಾರೆಯಿಂದ ತೆಂಗಿನಕಾಯಿ ಒಡೆಯುವ ಹಾಗೆ ಇವರು ಕಾಯಿ ಹೊಡೆದರೆ ಪ್ರಾಣ ದೇವರು ಸ್ವೀಕರಿಸಿಯಾರೇ? ಇಂತ ಅನ್ಯಾಯವನೆಂದ್ದಿಗೂ ಆಗಗೊಡಬಾರದು.ಇದು ಬ್ರಹ್ಮ ಮತ.
       ಹೊತ್ತುಈರುತ್ತ ಬಂದಿತು, ಗುಂಪು ಬಿಟ್ಟು ತುಸು ದೂರ ಕುಳಿತ ಮುದುಕ ರಾಮಗೌಡರ ಮುಖದಲ್ಲಿಏನೋ ಕಳವಳ ಎಲ್ಲ ನೋಡುತ್ತಾ ಸುಮ್ಮನೆ ಕೂತ ಗೋಪಾಲಚಾರ್ಯರಿಗೂ ಎಲ್ಲ ಯೇನೋ ತಪ್ಪುತ್ತಿದೆ ಎಂಎಂಬ ಹನಿಸಿಕೆ.
       'ನಾವೇನ ಕೇಳಾಕಿಲ್ಲಾ ಬಿಡ್ರಿ ಈಸರೆ. ಕಾಯಿ ನಾವ ಒಡೆಯವ್ರು. ಯಾಮಗಾ.