ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೭೪ ನಡೆದದ್ದೇ ದಾರಿ
ಬಾ. ಹೋಟೇಲಿಗೆ ರಶ್ ಇರ್ತತಿ. ಕೌಂಟರಿನ್ಯಾಗ ನೀನೂ ಬೇಕು'.
ಶಿಳ್ಳಿನಲ್ಲಿ ಇಂಗ್ಲಿಶ್ ಹಾಡು ಗುನುಗುನಿಸುತ್ತ ರೀಟಾ ಕುಣಿಯುತ್ತ ಒಳಗಡೆ ಮರೆಯಾಗುವುದುನ್ನೇ ಜೋಸಫ್ . ಆತನಿಗೆ ಒಂದು ಥರಾ ಅನ್ನಿಸಿತು.ತನ್ನ ಹಾಗೇ ದಾರಿ ತಪ್ಪಿದ ಬಾಳು ಈ ಹುಡುಗಿಯದು-ಅನ್ನಿಸಿತು. ಕಾರಣವಿಲ್ಲದೆ ಹಿಂದಿನದು ನೆನಪಾಗಿ ಕೆಟ್ಟೆನಿಸಿತು. ಬ್ರಿಟಿಶ್ ಕಾಲದಲ್ಲಿ ಫಿಲೊಸೊಫಿ ಎಮ್.ಎ. ಮಾಡಿದ್ದ ತಾನು ಈ ಹೊತ್ತಿಗೆ ಯಾವುದೋ ಯೂನಿವ್ಹರ್ಸಿಟಿಯಲ್ಲಿ ಪ್ರೊಫೆಸರಾಗಿದ್ದುಕೊಂಡು ಕನ್ನಡಕ ಹಾಕಿಕೊಂಡು ಕಾರಲ್ಲಿ ಕೂತುಕೊಂಡು ಪುಸ್ತಕ ಓದುತ್ತಾ ಹಾಯಾಗಿ ಓಡಾಡಿರಬಹುದಾಗಿತ್ತು. ಎಲ್ಲ ಬಿಟ್ತು ಈ ಹೋಟೇಲ್ ಮ್ಯಾನೇಜರ್ ಕೆಲಸಕ್ಕೆ ಇಳಿದದ್ದು ಏಕೆ? ಅದಕ್ಕೆ ಉತ್ತರವಿಲ್ಲ. ಹಾಗೆಯೇ ಈ ರೀಟಾ-ಎಲ್ಲ ಹೆಂಗಸರಂತೆ ಯಾರನ್ನೋ ಮದುವೆಯಾಗಿ ಮಕ್ಕಳನ್ನು ಆಡಿಸುತ್ತ ಇರುವುದು ಬಿಟ್ಟು ಈ ಹೋಟೇಲಲ್ಲಿ ಕ್ಯಾಬರೆ, ಮತ್ತೇನೇನೋ, ಮಾಡುತ್ತಿದ್ದಾಳೇಕೆ- ಅನ್ನುವುದುಕ್ಕೂ ಉತ್ತರವಿಲ್ಲ. ಜೀವನದಲ್ಲಿ ಬಹಳ ಪ್ರಶ್ನೆಗಳಿಗೆ ಉತ್ತರವಿಲ್ಲ. 'ಹಲೋ ಮಿ.ಜೋಸಫ್',-ಅಂತ ಕೊಗಿಕೊಂಡು ಒಳಬಂದ ವೆಂಕಟೇಶ್ ಅಯ್ಯಂಗರ್,'ಕಿಡಿ' ಪತ್ರಿಕೆಯ ಸಂಪಾದಕ-ಶುದ್ಧ ಖಾದೀ ಬಟ್ಟೆಯಲ್ಲಿ. ಆತನೊಂದಿಗೆ ಹಲವು ಪರಿಚಿತ ಮುಖಗಳು-ದಿನಾ ಇಲ್ಲಿಗೆ ಬರುತ್ತಿದ್ದವರೇ-ಡೊಳ್ಳು ಹೊಟ್ಟೆಯ ಸೋಶಿಯಲ್ ವರ್ಕರ್ ಕೇಸಕರ್;ಕೆದರಿದ ಕೂದಲ, ಗುರು ಶರ್ಟ್-ಬೆಲ್ಬಾಟಮ್ ಪ್ಯಾಂಟಿನ, ಕವಿ ಶಿವನಾಥ ಶೆಟ್ಟರ; ಮತ್ತು ಹನ್ನೆರಡು ತಿಂಗಳಲ್ಲೂ ಫುಲ್ಸೂಟ್ ಹಾಕುವ ಪೊಲಿಟಿಕಲ್ ಸಾಯನ್ಸ್ ಪ್ರೊಫೆಸರು ಶಂಕರಪ್ಪ. 'ಹಲೋ ಹಲೋ,ಬರ್ರಿ ಸರ್, ಬರ್ರಿ ಬರ್ರಿ' ಅಂತ ಬಹಳ ಆರ್ಜವತೆಯಿಂದ ಸ್ವಾಗತಿಸಿದ ಜೋಸಫ್. ಆಯ್ಯಂಗಾರ್ ಕೌಂಟರಿನ ಬಳಿಯೇ ನಿಂತ.ಉಳಿದವರು ತಮ್ಮ ಠರಾವಿಕ ಜಾಗೆಯಾದ ಎಂದಿನ ಮೂಲೆಯ ಟೇಬಲಿಗೆ ಹೋಗಿ ಸುತ್ತವರಿದು ಕೂತರು. ಅವರೆಲ್ಲ ಸೀರಿಯಸ್ಸಾಗಿ ಎಂಥದೋ ಚರ್ಚೆ ಮಾಡುತ್ತಿದ್ದ ಹಾಗಿತ್ತು. 'ಮಿ. ಜೋಸಫ್, ಇವೊತ್ತು ರಾತ್ರಿ ಒಂಬತ್ತು ಗಂಟೆಗೆ ನಮ್ಮ ಪಾರ್ಟಿ ಜ್ಯಾಪಕಾ ಇದೆ ಅಲ್ವಾ? ಒಟ್ಟು ಎಂಟು ಜನ. ಹೊರ್ಗಡೆ ಗಾರ್ಡನ್ನಲ್ಲೇ ಅರೇಂಜ್ ಮಾಡಿ.' 'ಹೊರಗಡೆ-' ಅನುಮಾನಿಸಿದ ಜೋಸಫ್. 'ಓ, ನೀವು ಭಯಪಟ್ಕೋಬೇಕಿಲ್ಲ. ಅವ್ರೆಲ್ಲ ತುಂಬ ಡೀಸೆಂಟ್ ಜನ. ಗಲಾಟೆ-ಗಿಲಾಟೆ ಮಾಡೋಲ್ಲ. ನಾನಿರ್ತೀನಲ್ಲ....'