ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕವಲು } ಹೋಟೆಲ್ ಬ್ಲೂ ೧೭೫ “ಒಳ್ಳೇದು ಸರ್." 'ನೋಡಿ, ಎಲ್ಲ ಜನ ಖುಶ್ ಆಗಿರ್ಬೇಕು. 'ಅದೆಲ್ಲಾ ನನ್ನ ಜವಾಬ್ದಾರಿ ಬಿಡಿ, ಅಂಧಾಂಗ ಏನು ವಿಶೇಷ ಇವತ್ತ ?" 'ಮಿನಿಸ್ಟರ್ ಬಝಾ ಇದಾರಲ್ಲಪ್ಪ -ಸಂಜೆ ನೆಹರೂ ಗೌಂಡ್ನಲ್ಲಿ ಸ್ಪೀಚ್ ಕೊಡೋಕೆ, ಊರೆಲ್ಲಾ ಪ್ರಿಪೇರ್ ಆಗ್ತಾ ಇದೆ. ನಾವು ನಮ್ಮ ಯುವಕ ಸಂಘದ ಪರವಾಗಿ ಕಪ್ಪು ಬಾವುಟಾ ತೋರಿಸಬೇಕು ಅಂತಿದೀವಿ ಅನ್ನಿಗೆ.' “ಅಂದ್ರ ಭಾಷಣಾ ಮಾಡಿಸಿಕೊಡಾಂಗಿ ನೀವು ಅಪ್ರಿಗೆ ?” 'ಆವು ಭಾಷಣಕ್ಕೆ ಬೆಂಕಿ ಬಿತ್ತು. ಈ ಮಿನಿಸ್ಟರ್ ಬಡ್ಡಿ ಮಕ್ಕು ಬರೀ ಭಾಷಣ ಬಿಗೀತಾ ತಿರಗ್ತಾ ಇಾರೆ. ಹಾನ್ಮಾಡ್ತೀವಿ, ಹೀಗ್ಯಾಡ್ತೀವಿ ಅಂತ ಆಶ್ವಾಸನೆ ಕೊಡ್ತಾನೇ ಇದ್ದಾರೆ. ಮಾಡೋದು ಮಾತ್ರ ಬರೀ ಭಾಷಣ. ನಮ್ಮ ದೇಶದ ಪರಿಸ್ಥಿತಿ ಕೆಟ್ಟೋಯ್ತು . ಇವನ್ನ ಹೀಗೇ ಬಿಟ್ರೆ ನಾವು ಪೂರಾ ಹಾಳಾಗ್ತಿವಿ. ಇವು ಮಾಡೋ ಅನ್ಯಾಯಾನ ಜನ ಕರೆದು ನೋಡ್ತೀ ಅಂತ ನಮ್ಮ ಪ್ರಯತ್ನ.' 'ಒಳ್ಳೆ ಕೆಲ್ಲ ಸರ್ ನಿಮ್ಮು - ಅಂದ ಜೋಸಫ್, ಬೇರರ್ ತಂದು ಕೊಟ್ಟ ಯಾರದೋ ಬಿಲ್ಲಿನ ಹಣವನ್ನು ಪೆಟ್ಟಿಗೆಯೊಳಗೆ ತೂರುತ್ತ, ಮೂಲೆಯ ಟೇಬಲಿಂದ ಜೋರಾಗಿ “ಶಟಪ್' ಅಂತ ಕೇಳಿಬಂತು. ಅಯ್ಯಂಗಾರ್‌ನ ಲಕ್ಷ ಆ ಕಡೆ ಹೋಯಿತು. ಇವನಿಂದ ತೊಲಗಬಾರದೆ ಅಂದುಕೊಂಡ ಜೋಸಫ್. 'ಏನ್ರಿ ಅಯ್ಯಂಗಾರ್, ಸ್ವಲ್ಪ ಬರಿ. ಇವನ್ನೊದು ಕೇಳೆರು ಕೇಳಿ ಒಂದಿಷ್ಟು'- ಕಾಫಿಯ ಕಪ್ಪು ಒಂದು ಕೈಯಲ್ಲಿ ಹಿಡಿದುಕೊಂಡಿದ್ದಂತೆ ಇನ್ನೊಂದು ಕೈಯನ್ನು ಟೇಬಲಿಗೆ ಬಡಿಯುತ್ತ ಕೂಗಿದ ಕೇಸಕರ್‌ ಅಯ್ಯಂಗಾರ್ ದಾಪುಗಾಲು ಹಾಕುತ್ತ ಆ ಕಡೆ ಹೊರಟಾಗ ಅವನ ಬೆನ್ನು ನೋಡುತ್ತ ಜೋಸಫ್ ಅಂದುಕೊಂಡ : ಈ ಜನ ಯಾವಾಗಲೂ ಮಾತಾಡುತ್ತ-ಆಡುತ್ತ ಎಷ್ಟು ಸಿಟ್ಟಾಗುತ್ತಾರೆ, ಎಷ್ಟು ನಗುತ್ತಾರೆ, ಎಷ್ಟು ಜಗಳಾಡುತ್ತಾರೆ, ಎಷ್ಟು ಗಂಭೀರವಾಗುತ್ತಾರೆ- ಬರಿ ಮಾತುಗಳ ಬಗ್ಗೆ ಇವರಿಗೆ ಎಷ್ಟು ಪ್ರೀತಿ- ಎಲ್ಲ ಮರೆಯುವಷ್ಟು ಪ್ರೀತಿ.... ಇವರೆಷ್ಟು ಸುಖಿಗಳು.... ರವಿವಾರವಾದುದರಿಂದ ಹೊಟೇಲಲ್ಲಿ ಮುಂಜಾನೆಯ ಹೊತ್ತು ಗದ್ದಲವಿರಲಿಲ್ಲ. ಹಿಂದಿನ ದಿನದ ಲೆಕ್ಕದ ಪುಸ್ತಕ ತಪಾಸಿಸುತ್ತಿದ್ದಂತೆ ಜೋಸಫ್ ಅಪ್ರಯತ್ನವಾಗಿ ಮೂಲೆಯ ಟೇಬಲಿಗೆ ಕಿವಿಗೊಟ್ಟ. 'ಆಿ ಅಯ್ಯಂಗಾರ್, ಶಂಕರಪ್ಪ ಅಂತಾರ- ನಾವು ಸಂಜೀನ್ಯಾಗ ಮಿನಿಸ್ಟರ್‌ಗ ಕಪ್ಪು ಬಾವುಟಾ ತೋರಸೋದಕ್ಕಿಂತಾ ಮೊದಲ ನೆಹರೂ ಗೌಂಡಿನ ಮುಂದಿನ