ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚೌಕಿನ್ಯಾಗ ಸಭಾ ಕೂಡಿಸಿ ಭಾಷಣಾ ಮಾಡೋದು ಅಂತ ಠರಾವು ಮಾಡೀವಲ್ಲ, ಅದಕ್ಕ ಮಂದಿ ಕೂಡತಾರೋ ಇಲ್ಲೋ ಅಂತ '.
ನಕ್ಕು ನುಡಿದ ಅಯ್ಯಂಗಾರ್ , 'ಅದ್ರ ಯೋಚ್ನೆನೇ ಬಿಡಿ ನೀವು. ಈವೊತ್ತಿನ "ಕಿಡಿ" ನೋಡಿದೀರೋ ಇಲ್ವೋ ? ಫ್ರಂಟ್ ಪೇಜ್ನಲ್ಲೇ ಹಾಕ್ಬಿಟ್ಟಿದೀನಿ - "ಪ್ರಾಮಾಣಿಕ ಪ್ರತಿಕ್ರಿಯೆ ಪ್ರಾಮಾಣಿಕ ನಿವೇದನೆ" -ಅಂತ ಟ್ರಿಮ್ಮಾಗಿ ಟೈಟಲ್ ಕೊಟ್ಟಿಟ್ಟು. ಈ ಮಿನಿಸ್ಟರ್ ನ ಅಪ್ರಾಮಾಣಿಕತೆಯ ಎಲ್ಲ ಕತೆಗಳೂ ನಂಗೊತ್ತು. ಇವನ ಮೋಸಗಾರಿಕೆ -ಸುಳ್ಳು-ವಂಚನೆಯ ಎಲ್ಲ ಪ್ರಕರಣಗಳ ಮೇಲೂ ಪ್ರಾಮಾಣಿಕವಾಗಿ ನೋಟ್ ಬರ್ದಿದೀನಿ. ಪ್ರಾಮಾಣಿಕ ಜನಗಳಿಗೆಲ್ಲಾ ಈ ಕರೆ ತಟ್ಟದೇ ಇರುತ್ತೆಯೇ? 'ಕಿಡಿ'ಯ ಬಿಸಿ ತಟ್ಟಿದವರು ನಮ್ಮ ಸಭೆಗೆ ಬರದೇ ಇರ್ತಾರೆಯೇ ಶಂಕರಪ್ಪ? ನಂ ಜನಗಳ ಕಣ್ಣು ಈಗೀಗ ತೆರೀತಾ ಇರೋದಕ್ಕೆ ನಂ ಪತ್ರಿಕೆ ಏನು ಕಡಿಮೆ ಕಷ್ಟಾ ಪಟ್ಟಿದೆಯೇ ? 'ನಂಗ್ಯಾಕೋ ಅನುಮಾನವಪ್ಪ. ನಂ ಜನಗಳಿಗೆ ಮುಖ್ಯವಾಗಿ ಧೈರ್ಯವಿಲ್ಲ. ಅನ್ಯಾಯ ಆಗ್ತಾ ಇದೆ , ಅಂತ ಮಾತಾಡ್ತಾ ಇರ್ತಾರೆ. ಅನ್ಯಾಯಾನಾ ಪ್ರತಿಭಟಿಸೋ ಪ್ರಶ್ನೆ ಬಂದಾಗ ಒಬ್ನೂ ಮುಂದಕ್ಕೆ ಬರೋದಿಲ್ಲ . ಬರೀ ಮಾತ್ನಲ್ಲೇ ಜೀವನ ಕಳೀತಾರೆ ವಿನಃ ಧೈರ್ಯವಾಗಿ ಒಂದ್ಕೆಲ್ಸಾನೂ ಮಾಡೋಲ್ಲ '- ಟೈ ಸರಿಪಡಿಸಿಕೊಳ್ಳುತ್ತ ಅಂದ ಶಂಕರಪ್ಪ . 'ನೀವು ನಿಮ್ಮ ಕಾಲೇಜಿನ ಹುಡುಗೂರ್ನ ಕರ್ಕೊಂಡು ಬರ್ರೆಲಾ ನಮ್ಮ ಮತಪ್ರದರ್ಶನ ಸಪೋರ್ಟ್ ಮಾಡ್ಲಿಕ್ಕೆ '- ಕೇಸಕರ್. 'ಕಾಲೇಜಿನ ಹುಡುಗ್ರು ಬಂದಾರು .ಆದ್ರೆ ನಿಮಗೆ ಗೊತ್ತಲ್ಲ ಈಗಿನ ಹುಡುಗರ ವಿಷಯ .ಬರೀ ಹುಡುಗೀರ್ನ ಚುಡಾಯ್ಸೋದು , ಅವ್ರ ಬಗ್ಗೆ ಅಷ್ಲೀಲಾ ಮಾತಾಡೋದು, ಅವ್ರ ಹಿಂದೆ ತಿರಗ್ತಾ ಇರೋದು - ಇದ್ರಲ್ಲೇ ಅವ್ರಿಗೆ ಖುಷಿ . ಇದೇ ಅವ್ರ ಹೀರೋಯಿಜಂ. ಧೈರ್ಯದ ಕೆಲ್ಸಕ್ಕೆ ಬಾ ಅಂದ್ರೆ ಹಿಂದೇಟು ಹಾಕ್ತಾರೆ'- ಶಂಕರಪ್ಪ. 'ಹಾಗೇನಿಲ್ಲ ಶಂಕ್ರಪ್ಪ, ನಿಮ್ದು ರಾಂಗ್ ಅಸೆಸ್ಮೆಂಟ್. ನಮ್ಮ "ಕಿಡಿ" ಶುರು ಆದಾಗಿನಿಂದ ನಮ್ಮ ಎಲ್ಲಾ ಸಭೆಗಳಲ್ಲೂ ಕಾಲೇಜು ಹುಡುಗರದೇ ಮುಖ್ಯ ಪಾತ್ರ ಆಗ್ತಾ ಇಲ್ವೇ? ನಮ್ಮ ಹೊಸ ಪೀಳಿಗೆ ಈಗ ಜಾಗೃತವಾಗ್ತಾ ಇದೆ. ಹುಡುಗ್ರು ಅಂದ್ರೆ ನಿಜವಾಗಿ ಪ್ರಾಮಾಣಿಕರು. ಅವರಿಗೆ ಪ್ರಾಮಾಣಿಕವಾದ ಎಲ್ಲಾವೂ ಅಪೀಲ್ ಆಗಿಯೇ ಆಗುತ್ತೆ'.- ಅಯ್ಯಂಗಾರ್ . ಎರಡನೆಯ ಕಪ್ಪು ಕಾಫಿ ಮುಗಿಸಿದ ಶಿವನಾಥ ಶೆಟ್ಟರ ಮಾತಾಡಿದ 'ಹೊತ್ತು ಮೀರಾಕ ಬಂತು . ಸಂಜಿನ್ಯಾಗಿನ ಪ್ರೋಗ್ರ್ಯಾಂ ಫಿಕ್ಸ್ ಮಾಡೋದು ಬಿಟ್ಟು