ಪುಟ:ನಡೆದದ್ದೇ ದಾರಿ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕವಲು } ಹೊಟೇಲ್ ಬ್ಯ ೧೭೯ ತಲೆಯ ತಾಳ ತಪ್ಪುತ್ತದೆ. ಆದರೂ ಅಯ್ಯಂಗಾರಿ ಜೊತೆಗಿದ್ದಾಗ ಐದಾರು ಪೆಗ್‌ಗೆ ಕಡಿಮೆ ಈತ ಎಂದೂ ಏಳುವುದಿಲ್ಲ. ಯಾಕಾದರೂ ಇಷ್ಟು ಲೋಭವೋಅಂದುಕೊಳ್ಳುತ್ತ ಆತನನ್ನು ಹೇಗೋ ಸಮಾಧಾನ ಮಾಡಿ ಜೋಸಫ್ ತಿರುಗಿ ಕೌಂಟರಿಗೆ ಹೋಗದೆ ಅಲ್ಲೇ ಸುತ್ತಾಡತೊಡಗಿದ. - 'ಅಲ್ಲ ಶಂಕ್ರಪ್ಪ, ನ್ಯಾಯವಾಗಿ ಇವೊತ್ತಿನ ಮತಪ್ರದರ್ಶನದಲ್ಲಿ ಬಾವುಟ ಹಿಡ್ಕೊಂಡು ನೀವು ಮುಂದಿನ ಸಾಲಲ್ಲಿ ನಿಂತೋ ಬೇಕಿತ್ತು. ಯಾಕ್ರೀ ಹಿಂದೆ ಉಳ್ಕೊಂಡ್ಡಿಟಿ ?' -ಅಯ್ಯಂಗಾರ್. 'ನಂಬಿದ್ರೆ ನಿಜಾ ಹೇಳ್ತಿನಿ ಸಂಪಾದಕರೆ, ನೀವೇನೇ ಅನ್ನಿ - ನಮ್ಮ moral standard ಕೆಟ್ಟೋಗ್ತಾ ಇದೆ. ನೀವು ಯುವಕ ಸಂಘಕ್ಕೆ ಹೊಸ್ತಾಗಿ ಮಹಿಳಾ ಪ್ರತಿನಿಧಿ ಆದೀರಲ್ಲ - ಆ ಮಿಸ್ ಪಂಕಜಾ - ಎಂಥಾ ಹೆಣ್ಣುರೀ ಆಕೆ. ತಾನು ಬಂದಿರೋದ್ಯಾತಕ್ಕೆ ಅನ್ನೋ ಜ್ಞಾನ ಕೊಂಚನಾದ್ರೂ ಬೇಡ್ವ ? ಅವಳ ಡ್ರೆಸ್ಸೇನು, ಒನಪೇನು, ಮೇಕಪ್ಪೇನು - ತುಂಬ ಕೋಪ ಬಂದ್ದಿತ್ತು ನನಗೆ. ಅವ್ರನ್ನ ಕೆಕ್ಕರಿಸಿ ನೋಡ್ತಾ ನಿಂತ್ನಿಟ್ಟೆ ಅಲ್ಲೇ.' ಉಳಿದವರು ಜೋರಾಗಿ ನಕ್ಕರು. ಜೋಸಫ್ಗೂ ನಗು ಬಂತು. 'ಯಾಕ್ರೀ ಕವಿ, ಸಪ್ಪಗಾಗಿದೀರಿ ?' ತುಂಬ ಆರ್ಜವತೆಯಿಂದ ಅಯ್ಯಂಗಾರ್‌ನ ಕೈ ಒತ್ತಿ ಮಾತಾಡಿದ ಶಿವನಾಥ ಶೆಟ್ಟರ, 'ನನಗ್ಯಾಕೋ ಇವೊತ್ತ ಮೂಡs ಬರಾಬ್ಬರಿ ಇಲ್ಲ. ಸಂಜೀನ್ಯಾಗಿನ ಪ್ರೋಗ್ರಾಮಿನ್ಯಾಗೂ ಮನಸ್ಸಿಲ್ಲ. ಏನೋ ಮಾತಕೊಟ್ಟಿದ್ದೆ ಅಂತ ಬಂದ ಮಾತಾಡಿದೆ. ಅಯ್ಯಂಗಾರ, ನಿಮ್ಮ “ಕಿಡಿ" ಜಾತ್ಯಾತೀತ ಪತ್ರಿಕೆ ಅಲ್ಲ ... ? ಅನ್ಯಾಯ ಪ್ರತಿಭಟಿಸತೈತಿ ಅಲ್ಲ ? ನೀವು ನನಗಾದ ಅನ್ಯಾಯದ ಸಲುವಾಗಿ ಅದರಾಗ ಒಂದು ಆಗ್ರಲೇಖ ಹಾಕಾಕಬೇಕು.' - 'ನಿಮಗೇನು ಯಾರು ಅನ್ಯಾಯ ಮಾಡಿದರೆಪಾ ?" -ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುತ್ತ ಕೇಳಿದ ಕೇಸಕರ್‌. ನಾಲ್ಕನೆಯ ಪೆಗ್ ಮುಗಿಸಿದ್ದ ಶೆಟ್ಟರನ ಧ್ವನಿ ಆವೇಶದಿಂದ ಕೂಡಿತ್ತು“ಅವರೇ, ಸಾಹಿತ್ಯ ಅಕ್ಯಾಡೆಮಿಯವು. ನನ್ನ ಪುಸ್ತಕಕ್ಕೆ ಬರಬೇಕಾಗಿದ್ದ ಫಸ್ಟ್ ಸೈಜ್ ಬ್ಯಾರೇ ಯಾವೊ ಸೂಳೇಮಗ್ಗ ಕೊಟ್ಟಾರ. ಇಂದ ಮಧ್ಯಾಹ್ನದಾಗ ಸುದ್ದಿ ತಿಳದಾಗಿನಿಂದ ತಲೀನ ಗರಮಾಗೈತಿ ನಂದು. ನೀವೇನು ಅನ್ನಿ, ಈಗೀನ ಕಾಲದಾಗ ಗುಣಕ್ಕೆ ಬೆಲೀ ಇಲ್ಲ. ಕಮೀಟಿಯೊಳಗ ಇದ್ದಾಂವಾ ಹಾರೂರವಾ, ಪೈಜು ಸಿಕ್ಕದ್ದೂ ಹಾರೂರವರ, ಎಲ್ಲಾ ಅವರದು ಆಗೇತಿ. ಈ ಹಾರೂರಿಗೇನು ಬರಿಯಾಕ ಬರತೈತು ?