ಪುಟ:ನಡೆದದ್ದೇ ದಾರಿ.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦ ನಡೆದದ್ದೇ ದಾರಿ

ಬರದದ್ದು ಜಜ್ ಮಾಡಾಕ ಬರತೈತ? ಆ ಜಾತೀನೇ ಕಿತಾಪತಿ ಜಾತಿ. ಅವರ್ನ ಬಗ್ಗ ಬಡಿಯಾಕಬೇಕು. ನನಗ ಅನ್ಯಾಯ ಆಗೇತಿ. ನಾ ಸುಮ್ನಿರಾಕಿಲ್ಲ. ನಾ protest ಮಾಡಾವನ. ಅಯಂಗಾರ್ರ, ನೀವು ಖರೇವಂದ್ರೂ ಪ್ರಾಮಾಣಿಕರೀದೀರಿ. ನನಗ ಹೆಲ್ಪ್ ಮಾಡ್ರಿ.'

    -ವಾತಾವರಣ ಗಂಭೀರವಾದಂತೆನಿಸಿತು. ಅಯ್ಯಂಗಾರ್ ಸುಮ್ಮನಿದ್ದ. ಆದರೆ ಶೆಟ್ಟರಿಗೆ ಸುಮ್ಮನಿರುವುದು ಸಾಧ್ಯವಾಗಲಿಲ್ಲ. ಕುರ್ಚಿಯಲ್ಲಿ ಇನ್ನೂ ಮುಂದೆ ಸರಿದು ಸೆಟೆದು ಕೂತು ಆತ ಉದ್ವೇಗದಿಂದ ಮುಂದುವರೆಸಿದ, 'ಅಯ್ಯಂಗಾರ್ರ, ಜಾತೀ ಸಲವಾಗಿ ನಿಮಗ ದುರಭಿಮಾನ ಇಲ್ಲಾ ಅಂತ ನಿಮಗ ಒಳಗಿನ ಮಾತ ಹೇಳಾಕಃತ್ತೀನಿ. ಈ ಪ್ರೈಜ್ ಸಿಕ್ಕಾಂವ ಇದ್ದಾನಲ್ಲಾ, ಅವನ ಕಸಬು. ಅಂವಗ ಪ್ರೈಜ್ ಕೊಟ್ಟಾರ, ನನ್ನ ಬಿಟ್ಟು. ಆ ಬಡ್ಡೀಮಗನ್ನ ಹಿಡಿದು-'
        -ಶೆಟ್ಟರಿಗೆ ತೂಕ ತಾಪ್ಪುತ್ತಿತ್ತೆಂದು ತಿಳಿದ ಅಯ್ಯಂಗಾರ್ ಮೊದಲು ಬೇರರ್ಗೆ ಅವನ ಗ್ಲಾಸು ತುಂಬಲು ಸನ್ನೆ ಮಾಡಿ ನಂತರ ಮಾತಡಿದ. 'ಅಂದಹಾಗೆ ಕೇಸಕರ್, ನೀವು ತುಂಬ ಚೆನ್ನಾಗಿ ಮಾತಡಿದಿರಪ್ಪ, ಸಭೆಯಲ್ಲಿರೋ ಹೆಂಗಸರಿಗಂತೂ ನೀವು ಅವರ್ನ ಉದ್ಧಾರ ಮಾಡೋದಕ್ಕೋಸ್ಕರ ಬಂದಿರೋ ಅವತಾರ ಪುರುಷನ ಹಾಗೆ ಕಾಣ್ಸಿದಿರಿ.'
     'ಹೆಹ್ಹೆ' ಅಂದ ಕೇಸಕರ್.
     ಕುರ್ಚಿಯಲ್ಲಿ ಮುಂದೆ ಸರಿದು ಸೆಟೆದು ಕೂತಿದ್ದ ಶೆಟ್ತರ ಹಿಂದೆ ವಾಲಿದ್ದ. ಗಬಗಬನೆ ಊಟ ಮಾದುಟ್ಟಲಿದ್ದ ಶಂಕರಪ್ಪ ತನ್ನಷ್ಟಕ್ಕೆ ತಾನೆ ಮಾತಡುತಿದ್ದ,
     'ಆ ಪಂಕಜಾನ್ನ ಅಲ್ಲೇ ಹಿಚುಕಿ ಮುದ್ದೆ ಮಾಡಿ ಬಿಡ್ಬೇಕಿತ್ತು, ಹಲ್ಕಾ ಮುಂಡೆ.'
     ಶಂಕರಪ್ಪನ ವಾಣಿಮುತ್ತುಗಳು ಜೋಸೆಫ್ಗೆ ಹೊಸದಲ್ಲ. ಮೂರು ಪೆಗ್ ಹೊಟ್ಟೆಗೆ ಸೇರಿದೊಡನೆ ಆತ ಮಾತಾಡಲು ಸುರು ಮಾಡಿತಾನೆ. ಊರಲ್ಲಿನ ಹೆಂಗಸರ ಬಗೆಗೆಲ್ಲ ಇಂಥ ಅಭಿ ಮಾನಿಗಳಿಂದೊಡಗೂಡಿದ ಆತನ ಒಟ್ಟು ಮಾತಿನ ತಾತ್ಪರ್ಯ ಯಾವಗಲೂ ಇಷ್ಟೇ: ಹಾಗೆ ಮಾಡಬೇಕಿತ್ತು, ಆಗಲಿಲ್ಲ;ಹೀಗೆ ಮಾಡಬೆಕಿತ್ತು, ಆಗಲಿಲ್ಲ; ಎನೇನೋ ಮಾಡಬೇಕಿತ್ತು; ಎನೂ ಆಗ್ಲಿಲ್ಲ. ಉಳಿದವರನ್ನೂ ಊಟ ನಡೆದಿರುವಾಗಲೇ ಆತ ಎದ್ದು ಬಿಟ್ಟಿರುತ್ತಾನೆ. ಎದುರಿಗೆ ಇಲ್ಲದ ಯಾರ್ಯಾರನ್ನೋ ಬೈದುಕೊಳ್ಳುತ್ತಿದ್ದ. ನಂತರ ಕೌಂಟರಿಗೆ ಬಂದು ನಾಲ್ಕು ಸಿಗರೇಟು ಸೇದಿ, ಅಲ್ಲೇ ಇದ್ದ ಸಿಂಕ್ ನಲ್ಲಿ ಬಾಯಿ ತೊಳಕೊಂಡು ಮನೆಗೆ ಹೋಗುತ್ತಾನೆ- ಹೆಂಡತಿಗೆ ಸಿಗರೇಟ