ಪುಟ:ನಡೆದದ್ದೇ ದಾರಿ.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕವಲು } ಹೊಟೇಲ್ ಬ್ಲೂ ೧೮೧ ವಾಸನೆ ಆಗುವುದಿಲ್ಲ ಅಂತ. ಇಂದೂ ಹಾಗೆಯೇ. ಹನ್ನೊಂದೂವರೆ ಆದಾಗ ಶಂಕರಪ್ಪ ಕೌಂಟರಿನ ಕಡೆ ನಡೆದ. ಜೋಸಫ್ ಮೊದಲೇ ಹೋಗಿ ಕೂತಿದ್ದವನು ನಾಲ್ಕು ಬರ್ಕಲೀ ನೀಡಿದ. ಸೇದುತ್ತಿದ್ದಂತೆ ಶಂಕರಪ್ಪ ಹೇಳಿದ : “ನಿಮಗೆ ಗೊತ್ತಿಲ್ಲ ಜೋಸಫ್, ಪಂಕಜಾನಂಥಾ ಹುಡುಗೀರಿಂದ್ದೇ ಹುಡುಗು ಕೆಟ್ಟೋಗೋದು.' ಜೋಸಫ್ ಮುಗುಳುನಕ್ಕ. ಬಾಯಿ ತೊಳಕೊಂಡು ಶಂಕರಪ್ಪ ಹೋಟೇಲಿನ ಬಾಗಿಲು ದಾಟುತ್ತಿದ್ದಂತೆ ಅಯ್ಯಂಗಾರ್ ಕೂಗಿ ಹೇಳಿದ ಆತನಿಗೆ- 'ಶಂಕ್ರಪ್ಪ, ವೀಜ್, ಈ ಶೆಟ್ರನ್ನ ಒಂದು ಆಟೋದಲ್ಲಿ ಕೂಡಿಸ್ಬಿಟ್ಟು ಹೋಗಿ.' 'ಕಾಸಿನ ಕಿಮ್ಮತ್ತಿಲ್ಲದ ಈ ಹಾರೂರಗ ಎಷ್ಟು ಸೊಕ್ಕು ಆಂತೀನಿ' - ಅನ್ನುತ್ತಲಿದ್ದ ಶೆಟ್ಟರನ ಭುಜದ ಮೇಲೆ ಕೈಹಾಕಿ ಶಂಕರಪ್ಪ ಜೋಲಿಯಾಡುತ್ತ ಹೊರಗೆ ನಡೆದ. ಹೋಟೇಲು ಹೆಚ್ಚು ಕಡಿಮೆ ನಿಃಶಬ್ದ ವಾಗಿತ್ತು. ಒಳಗೆ ಯಾರೂ ಗಿರಾಕಿಗಳಿರಲಿಲ್ಲ. ಹೊರಗಡೆ ಅಯ್ಯಂಗಾರ್ ಮತ್ತು ಕೇಸಕರ್‌ ಮಾತ್ರ. - ಅಯ್ಯಂಗಾರನ ಧ್ವನಿ ಏರಿತ್ತು : “ನೀವೇನೇ ಅನ್ನಿ ಕೇಸ್ಕರ್, ನಾನು ಈ ಶೆಟ್ಟರನ ಮಾತು ಲೆಕ್ಕಕ್ಕೆ ಹಿಡಿಯೋಲ್ಲ. ಶೂದ್ರ, ಸೂಳೇಮಗ. ಕವಡೆಯ ಬುದ್ದಿಯಿಲ್ಲ. ತಾನು ಬೃಹಸ್ಪತಿ ಅಂತ ಭ್ರಮೆ ಬೇರೆ. ತಂಗೆ ಪ್ರೈಜ್ ಸಿಕ್ಕಿಲ್ಲಾ ಅಂತ ಹೊಟ್ಟೆಕಿಚ್ಚು ಅನ್ನಿಗೆ. ತನ್ನ ಯೋಗ್ಯತೆ ಎಷ್ಟು ಅಂತ ನೋಡಿದಾನಾ ಎಂದಾದ್ರೂ ? ನನ್ನ ಪತ್ರಿಕೇಲಿ ಬರೀಬೇಕಂತೆ ಇನ್ನಿಗೆ ಅನ್ಯಾಯ ಆಗಿದೇ ಅಂತ. ನನ್ನ ಪತ್ರಿಕೆ ಇರೋದು ಇಂಥಾ ZJA129 purpose na ?' ಜೋಸಫ್ ಕೌಂಟರನಲ್ಲಿ ಕೂತೇ ಇದ್ದವನು ಕೇಸಕರ್‌ ತನ್ನ ಕಡೆ ಬರುತ್ತಿದ್ದುದನ್ನು ಕಂಡು ಮುಗುಳಕ್ಕ, ತೀರ ಸಮೀಪ ಬಂದು ಕೇಸಕರ್ ಆಚೀಚೆ ನೋಡಿ ತೀರ ಕೆಳಗಿನ ದನಿಯಲ್ಲಿ ಜೋಸಫ್ನ ಕಿವಿಯಲ್ಲೇನೋ ಎಂಬಂತೆ ಹೇಳಿದ, 'ನಿಮ್ಮ ಬಾಸ್ಗೆ ಹೇಳಿ ಜೋಸಫ್, ಹೋಟೇಲ್ ಬ್ಯೂ ಅಂದ್ರ ಒಂದು ಕಾಲದಾಗ ಎಂಥಾ glamour ಇತ್ತು ! ಈಗ ಭಾಳ dull ಆಗೇದ, ನೀವು ಸುಧಾರಿಸ್ಲಿಕ್ಕೆ ಬೇಕು. ನಾನು ನಿಮ್ಮ well-wisher ಅಂತ ಹೇಳ್ತಿನಿ' -ನಂತರ ಇನ್ನೂ ಧ್ವನಿ ತಗ್ಗಿಸಿ ಆತನೆದ, 'ಗೋವಾದ ಕಡಿಂದ ಎರಡ ಆಗದೀ ಹೊಸಾ ಕೋರಾ ಚಮಚಮೀತ ಹಕ್ಕಿ ಬಂದಾವ ಮೊನ್ನೆ. ಸದ್ಯಕ್ಕೆ ನನ್ನ ಕಸ್ಟಡೀಯೊಳಗ ಆವ. ನಿಮ್ಮ ಬಾಸ್‌ಗೆ ಬಂದ