ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋಡ್ಲಿಕ್ಕ ಹೇಳ್ರಿ. ಮಾಲು ಪಸಂದ ಬಿದ್ದರ ಉಳದದ್ದು a matter of business-ಹ್ಯಾಂಗರ ಬಗೀಹರಿಸಿದ್ರಾತು.ಏನಂತೀರಿ? ರೀಟಾ ಈಗ ಮುದುಕಿ ಆಗ್ಯಾಳ-ಉಪಯೋಗಿಲ್ಲ....ನಾ ನಿಮ್ಮ ವೆಲ್ಲ್-ವಿಶೆರ್ ಆಂತ ಹೇಳ್ತೇನಿ- ಏನಂತೀರಿ? 'ಹೌದು ಸರ್, ನೀವನ್ನೋದು ಖರೆ,' ಜೋಸಫ್ ನಮ್ರನಾಗಿ ಹೇಳಿದ. 'ಬರ್ತೀನಿ ಹಂಗಾರ, ಗುಡ್ ನೈಟ್' ಅಂತ ಕೇಸಕರ ಹೊರಟ. ಎರಡು ನಿಮಿಷಗಳಲ್ಲಿ ಆತನ ಅಂಬಾಸಡರ್ ಸ್ಟಾರ್ಟ್ ಆದ ಸದ್ದು ಕೇಳಿಸಿತು-ಹೊರದಟಿದ್ದೂ,ಹೋದದ್ದೂ. ಗ೦ಟೆ ಹನ್ನೆರಡೂ ಕಾಲು. ಕೌ೦ತಟರಿನಲ್ಲಿ ಕೂತಲ್ಲಿ೦ದಲೇ ಜೋಸಫ್ ಅಯ್ಯ೦ಗಾರಿಯ ಕಡೆ ನೋಡಿದ. ಬಾರ್ ಮುಚ್ಚುವ ಸಮಯ ಮೀರಿದೆ- ಅ೦ತ ಹೇಳೋಣವೇ ಅ೦ದುಕೊ೦ಡ.ಬೇರರ್ ಅ೦ತ ಕೂಗಬೇಕು ಅನ್ನುವ‌‌ಷ್ಟ್ರರಲ್ಲಿ ಅಯ್ಯ೦ಗಾರನೇ 'ಬೇರರ್' ಅ೦ತ ಕೂಗಿದ.ಮತ್ತೆ ವ್ಹಿಸ್ಕಿಗೆ ಆರ್ಡರ್ ಮಾಡಿದ. ವಿಧಿಯಿಲ್ಲದೆ ಜೋಸಫ್ ತಾನೇ ಎದ್ದು ಬ೦ದ ಆತ ಕೂತಿದ್ದಲ್ಲಿಗೆ. 'ಹೆಲ್ಲೊ ಜೋಸೆಫ್, how about joining me?' ಅ೦ತ ಕೇಳಿದ ಅಯ್ಯ೦ಗಾರ್ ಗೆ ನಮ್ರತೆಯಿ೦ದಲೇ ನಕಾರ ಸೂಚಿಸಿ, ತಗ್ಗಿದ ದನಿಯಲ್ಲಿ ಹೇಳಿದ,'ಸರ್ ಟೈಮ್-' 'ಓ, don't remind me of time ಜೋಸಫ್....ನಾನು ಎಲ್ಲ ಮರೀಬೇಕಾಗಿದೆ- ಎಲ್ಲ-ಎಲ್ಲ' ನಿ೦ತೇ ಹೇಳಿದ ಜೋಸಫ್-'ಸರ್, ಹಾಗಾದರೆ-' ಹೌದು,ನ೦ಗೆ ರೂ೦ ಬೇಕು ಇಚವೊತ್ತು. ಮಹಡೀ ಮೇಲ್ಗಡೆ ಕೊನೇಲಿರೋದು ಕೊಡಿ. ಗಾಳಿ ಚೆನ್ನಾಗಿ ಬರತ್ತೆ.' 'ಮತ್ತೆ-' 'ಮತೇನು? ರೀಟಾ ಬೇಡ. ಹೋದ ವಾರ ಯಾರನೋ ಕಳಿಸಿದೆಲ್ಲಪ್ಪ-ಅವ್ಳನ್ನ ಕಳ್ಸು.' 'ಚ೦ದ್ರಿಕಾ?' 'ಯಾವ್ಳೋ ಹಾಳಾದವ್ಳು. ಎಷ್ಟು ಹೆಸರೂ೦ತ ನೆನಪಿಡೋಕಾಗತ್ತೆ?' ಬಿಲ್ ಸಲ್ಲಿಸಿ ಮಹಡಿಯ ಮೇಲಕ್ಕೆ ಜೋಲಿ ಹೊಡೆಯುತ್ತ ನಡೆದ ಅಯ್ಯ೦ಗಾರನನ್ನು ಹಿ೦ದಿನಿ೦ದ ನೊಡುತ್ತಿದ್ದ೦ತೆ ಯಾಕೋ ಜೋಸಫ್ ಗೆ ಈ ಪ್ರಾಮಾಣಿಕ ಮನುಷ್ಯನ ಹೆ೦ಡತಿ ಹೇಗಿರಬೇಕು ಅ೦ತ ವಿಚಾರ ಬ೦ತು. ಅಕೌಟಿ೦ಟಿನ ಪುಸ್ತಕ ಒಳಗಿಟ್ಟು ಟ್ರೆಝರಿಗೆ ಕೀಲಿ ಹಾಕುತ್ತಿದ್ದಾಗ ಆತನ ತಲೆ