ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨
ನಡೆದದ್ದೇ ದಾರಿ

ಇವುಗಳಿಂದ ಮುಕ್ತಿ ಪಡೆಯಬಹುದೆ೦ದು ಭ್ರಾಮಿಸಿ 'ಅವನ' ಜೊತೆ ಗೆಳೆತನ
ಬೆಳೆಸಿದ್ದು. ಮುಳ್ಳುಗಳಿಂದ ದೂರ-ದೂರ, ಬರೇ ಹೂವುಗಳಿರುವ ದ್ವೀಪಕ್ಕೆ ತನ್ನನ್ನು
ಕರೆದೊಯ್ಯಬಲ್ಲನೆಂದು ಅನಿಸಿತ್ತು. ಆದೂ ಒಂದು ದಡ್ಡ ಭ್ರಮೆ. ಆದರ
ನಿರಸನವಾದದ್ದು, 'ಅವನು' ಕಣ್ಣ ನೋಟದಲ್ಲೇ ಹುದುಗಿದ್ದ ಮುಳ್ಳಿನ ಅರಿವು ಮೊದಲ
ಬಾರಿ ಆದಾಗ . ಆಘಾತ! ಹೃದಯ ಬಿರಿದು ಹೋಗುತ್ತಿರುವದೇನೋ ಎಂಬಂಥ
ಅನುಭವ! ಆದೇ ಮೊದಲು, ಅದೇ ಕೊನೆ. ನಂತರ 'ಅವನ' ಮುಖದರ್ಶನವೂ
ಬೇಡವೆನಿಸಿತು.
ಕಲಸಿದ್ದ ಅನ್ನ ಗಂಟಲಲ್ಲಿಳಿಯಲೊಲ್ಲದು. ಅದನ್ನಲ್ಲೇ ಬಿಟ್ಟು ಕೈತೊಳೆದು
ಎದ್ದು ನಡೆದಳು ಶಾಂತಿ.
ಮೇಕಪ್. ಎರಡು ನಿಮಿಷದ ಕೆಲಸ. ಯಾರನ್ನು ಮೆಚ್ಚಿಸಲೆಂದೋ! ಮೊನ್ನೆ
ತೆಗೆದುಕೊಂಡ ಡ್ರೈಲಾನ್ ಸೀರೆ ಉಟ್ಟರೆ ?"May i feel your saree ?' ಎಂದು
ನಾಚಿಕೆಬಿಟ್ಟು ಕೇಳಿ, ತಾನುತ್ತರಿಸುವ ಮೊದಲೇ ಸೆರಗು ಮುಟ್ಟೀ ನೋದುತ್ತಾರೆ ತನ್ನ
ಸಹೋದ್ಯೋಗಿಗಳು. ಒಮ್ಮೊಮ್ಮೆ ಯಂತೂ ಆ ಸೆರಗಿನಲ್ಲೇ ಅವರ ಬೆರಳುಗಳ
ಮುಳ್ಳಿನ ಕರೆಂಟ್ ಹರಿದಾಡಿದಂತೆ ಮೈ ಜುಮ್ಮೆನ್ನಿಸುತ್ತದೆ.
ಒಟ್ಟು ಈ ಮುಳ್ಳುಗಳಿಂದ ಬಿಡುಗಡೆ ಇದೆಯೆ೦ದು ಒಮ್ಮೆ ತಿಳ್ಳಿದದ್ದು ತಪ್ಪಾಗಿ
ಹೋಯಿತು. ತಾನು ಮದುವೆಯಾಗುವ ಪ್ರಾಣಿ ಗಂಡು, ಅಂದ ಬಳಿಕ ಅವನ ಕಣ್ಣಲ್ಲೂ
ಮುಳ್ಳಿರಲೇಬೇಕಲ್ಲ ?
ಧಡಧಡನೆ ಮೆಟ್ಟಲಿಳಿದು ಶಾಂತಿ ಕಾಲೇಜಿಗೆ ನಡೆದಳು. ಹದಿನೈದರ
ಎಳೆಯರಿಂದ ಹಿಡಿದು ಇಪ್ಪತ್ತೈದರ ಕೋಣಗಳ ವರೆಗಿನ ಎಲ್ಲ ಗಂಡು ಹೆಣ್ಣು ಗದ್ದಲ
ಮಾಡುತ್ತ ಹೊರಟಿವೆ . ಸೈಕಲು ವೀರನೊಬ್ಬ ಸದ್ದಿಲ್ಲದೆ ಹಿಂದಿನಿಂದ ಬಂದು ಭರ್ರನೆ
ತನ್ನ ತೀರ ಸಮೀಪದಿಂದ ಹಾಯ್ದು ಹೋಗುತ್ತಾನೆ .ರಸ್ತೆಯಲ್ಲಿ ನಿಂತ ಕೆಂಪುನೀರಿನ
ಪ್ರೋಕ್ಷಣೆ ತನ್ನ ಬಿಳಿ ಸೇರೆಗೆ. ಮೊನ್ನೆ ತಾನವನಿಗೆ ಕ್ಲಾಸಿನಲ್ಲಿ ಮಾತಾಡಿದ್ದಕ್ಕಾಗಿ
ಬೈದದ್ದರ ನೆನಪಾಯಿತು.
".........ಗುಡ್ ಮಾರ್ನಿಂಗ್ ಮ್ಯಾಡಂ. "ಸ್ಕೂಟರು ನಿಲ್ಲಿಸಿ ಒಳ್ಳೇ ಸ್ಟೈಲಿಶ್ ಆಗಿ
ವಂದಿಸುತ್ತಿದ್ದಾನೆ ಶಿಷ್ಯೋತ್ತಮ ಶಂಕರ ಶೆಟ್ಟಿ.ಮೂರು ಸಲ ಕೂತರೂ ಬಿ.ಎ.
ಪಾಸಾಗಲೊಲ್ಲ . ಅಪ್ಪನ ದುಡ್ಡು ಬಹಳವಿದೆಯೆಂದು ಬರೇ ಊರೆಲ್ಲ
ಸುತ್ತುವುದರಲ್ಲೇ ವೇಳೆ ಕಳೆಯುತ್ತಾನೆ. ಕಳೆದ ವರ್ಷ ಒಮ್ಮೆ ತನ್ನನ್ನು ಪಿಕ್ಚರಿಗೆ
ಕರೆಯುವ ಸಾಹಸ ಮಾಡಿತ್ತಲ್ಲವೆ ಈ ಕೋತಿ ? ತಾನೆಂದರೆ ಏನೆಂದು ತಿಳಿದಿದ್ದನೋ!
ಆಗಲೇ ಅವನಿಗೊಂದು ಕಪಾಳಿಗೆ ಹೊಡೆಯಬಹುದಿತ್ತು. ಯಾಕೋ ಹಾಗೆ ಮಾಡಲಿಲ್ಲ.