ಪುಟ:ನಡೆದದ್ದೇ ದಾರಿ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೪

ನಡೆದದ್ದೇ ದಾರಿ

ಅವಳ ಸ್ವಾತಂತ್ರ್ಯ

ಶನಿವಾರ.ಮದಾಹ್ನದಿಂದಲೂ ಮೈ-ಮನಸ್ಸು ಭಾರವಾಗಿದ್ದ ಆಕೆ ಆಫೀಸಿನ
ಗೋಡೆಗೆ ತೂಗು ಹಾಕಿದ್ಡ ಗಡಿಯಾರವನ್ನೇ ಬಾರಿ ಬಾರಿಗೂ ನೋಡುತ್ತಿದ್ದಳು.
ಐದೂವರೆಯಾಗುತ್ತಲೂ ಉಶ್ ಎಂದು ಉಸಿರು ಬಿಟ್ಟು ವ್ಹ್ಯಾನಿಟಿ ಬ್ಯಾಗು, ಪುಟ್ಟ
ಛತ್ರಿ ಹಾಗೂ ಊಟದ ಡಬ್ಬಿಯನ್ನು ಗಡಿಬಿಡಿಯಿಂದ ಎತ್ತಿಕೊಂಡು ಕೌಂಟರಿನಿಂದ
ಹೊರಬಂದಳು.ಬಾಗಿಲ ಬಳಿ ಹಾಕಿದ್ದ ಕನ್ನಡಿಯ ಕಡೆ ಒಮ್ಮೆ ಹಾಗೆಯೆ ನೋಡಿ
ತಲೆಗೂದಲನ್ನು ಸರಿಪಡಿಸಿಕೊಳ್ಳುತ್ತ, ನಿತ್ಯದಂತೆ ಜೊತೆಯ ಯಾರಿಗೂ ಕಾಯದೆ,
ಸೀದಾ ಮೆಟ್ಟಲಿಳಿದು ರಸ್ತೆ ಸೇರಿದಳು. ಆರು ಗಂಟೆಯ ಲೋಕಲ್ ಸಿಕ್ಕುತ್ತದೋ
ಇಲ್ಲವೋ ಅಂತ ಕೈಗಡಿಯಾರವನ್ನೋಮ್ಮೆ ನೋಡಿ ಚಡಪಡಿಸಿ ನಡಿಗೆಯ ವೇಗವನ್ನು
ಹೆಚ್ಚಿಸಿದಳು. ಆಕೆ ಆಫೀಸು ದಾಟಿ ಮೇನ್ ರೋಡಿಗೆ ಬರುತ್ತಿರುವಂತೆಯೆ ಸ್ಟೇಶನ್ನಿಗೆ
ಹೋಗುವ ಬಸ್ಸು ಎದುರಿಗೇ ಬಂದು ನಿಂತಿತು. ಬಸ್ ಹತ್ತುವ ಇಚ್ಛೆಯೂ
ಸಹಜವಾಗಿಯೇ ಆಯಿತು.ಆದರೆ ಮರುಕ್ಶಣ -ಬೇಡ, ಅದೇ ಮೂವತ್ತು ಪೈಸೆಗೆ
ಒಂದು ಕಂತೆ ಸೊಪ್ಪು ರಾತ್ರಿ ಪಲ್ಯಕ್ಕೆ ಒಯ್ದರಾದೀತು-ಅನಿಸಿತು. ಹೇಗಿದ್ದರೂ
ಸ್ಟೇಶನ್ನಿಗೆ ಒಂದು ಮೈಲೂ ಫೂತಿ ಆಗುವುದಿಲ್ಲ, ಹದಿನೈದು ನಿಮಿ‍‍‌‍‍‍‌‌‌‍‍‍‍‍‍‍‍‍‍‍‍‍‍‍‍‍‍‍ಶದಲ್ಲಿ
ಹೋಗಬಹುದು-ಅನಿಸಿತು. ಶನಿವಾವಾದ್ದರಿಂದ ರಾತ್ರಿ ಶಂಕರ ಊರಿಂದ
ಬರುತ್ತಾನೆ, ಅವನಿಗೆ ಸೊಪ್ಪಿನ ಪಲ್ಯ ಇಷ್ಟ, ಅಂತ ನೆನಪಾಗಿ ಸಮಾದಾನವು ಅನಿಸಿತು.
-ಸ್ಟೇಶನ್ ತಲುಪಲು ಇನ್ನಧ್ರ ಫಲ್ರಾಂಗು ಇದ್ದಾಗ ಆಕೆಗೆ ಹಿಂದಿನಿಂದ
ಯಾರೋ ತನ್ನನ್ನು ಕೂಗುತ್ತಿರುವಂತೆನಿಸಿತು. ತಿರುಗಿ ನೋಡಿ ಕೂಗುತ್ತಿರುವುದು
ತನ್ನನ್ನೇ ಹೌದೋ ಆಲ್ಲವೋ ಖಾತ್ರಿ ಮಾಡಿಕೊಳ್ಳಲು ನಿಂತರೆ ಆರರ ಟ್ರೇನು
ತಪ್ಟೀತೆಂದು ಆಕೆ ಹಾಗೆಯೆ ಮುಂದೆ ನಡೆದಳು. ಆದರೆ ಮತ್ತೆ ಆ ದ್ವನಿ ಕೇಳಿಸಿತು-
ಈ ಸಲ ಇನ್ನೂ ಗಟ್ಟಿಯಾಗಿ, ಸ್ಟಪ್ಟವಾಗಿ, ಸಮೀಪದಿಂದಲೆ-"ವಿಮಲಾ,ಏ
ವಿಮಲಾ".
ಆಕೆ ತಿರುಗಿ ನೋಡಿದಳು. ನಿಂತಳು. ಕೂಗಿದಾಕೆ ಗೆಳತಿ ಶಶಿ ಕುಲಕಣ್ರಿ-
ಹೆಣ್ಣುಮಕ್ಕಳ ಟ್ರೇನಿಂಗ ಕಾಲೇಜಿನಲ್ಲಿ ಆದ್ಯಾಪಕಿ. ಆವಳ ಜೊತೆ ಇನ್ನೂ ಮೂವರು
ಹೆಂಗಸರು. ಅವರೆಲ್ಲ ಬಳಿ ಖಾದಿ ಉಟ್ಟಿದ್ದು ನೋಡಿದರೆ,ಆವರು ಶಶಿ ಹೊಸದಾಗಿ