ಪುಟ:ನಡೆದದ್ದೇ ದಾರಿ.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲು / ಅವಳ ಸ್ವಾತಂತ್ರ್ಯ ೧೮೫

ಸುರು ಮಾಡಿದ ಭಗಿನೀ ಸೇವಾ ಸದನದ ಸದಸ್ಯೆಯರಿರಬೇಕು ಅನಿಸಿತು ಆಕೆಗೆ. "ಏನ ವಿಮಲಾ, ಎಷ್ಟ ಭಡಾಭಡಾ ನಡೀತೀ ಮಾರಾಯಳ, ನೀ ಹಿಂಗ ಹೊಂಟರ ಹುಬ್ಬಳ್ಳಿಯಿಂದ ಧಾರವಾಡಕ್ಕ ಹೋಗಲಿಕ್ಕೆ ನಿನಗ ಗಾಡೀ ಯಾಕ ಬೇಕು ? ನಡಕೋತ ಹೋಗಿ ಹತ್ತ ಮಿನಿಟಿನ್ಯಾಗ ಮಾಳಮಡ್ಡಿಯೊಳಗಿನ ನಿಮ್ಮನೀ ಮುಟ್ಟಿಬಿಡತೀ ನೋಡು." ತುಸುವೆ ದಣಿದ ನಗು ನಕ್ಕು ಆಕೆ ಕೇಳಿದಳು, "ಆದಿರಲಿ ಶಶಿ, ನೀ ಯಾಕ ಹಿಂಗ ನನ್ನ ಬೆನ್ಹತ್ತ ತೇಕಿಕೋತ ಬಂದೀ? ನೋಡು, ಏನರೆ ಕೆಲಸ ಇದ್ರ ಝಟ್ ಪಟ್ ಹೇಳಿಬಿಡು. ನನ್ನ ಗಾಡೀ ತಪ್ಪಿತಂದ್ರ ಫಜೀತಿ ಆಗ್ತದ." " ನಿನ್ನ ಗಾಡೀ ತಪ್ಪಿಸಿ ನಿನ್ನ ಗಂಡಾ-ಮಕ್ಕಳ ಶಾಪಾ ನಾ ಯಾಕ ಕಟಿಗೊಳ್ಲಿ ? ನಿನ್ನ ಆಫೀಸಿನ್ಯಾಗೇ ಭೆಟ್ಟ್ಯಾಗಿ ಅಲ್ಲೇ ಮಾತೂಕತಿ ಮುಗಿಸಬೇಕಂತ ಆಫೀಸು ಬಿಡೂ ಟೈಮಿಗೇ ಅಲ್ಲಿ ಬಂದಿದ್ವಿ. ಆದರ ನೀ ಅಷ್ಟರಾಗ ಹೊಂಟಬಿಟ್ಟಿದ್ದ. ಅದಕ್ಕ ನಿನ್ನ ಹಿಂದ ಓಡಿಕೋತ ಬಂದ್ವಿ. ಕೆಲಸ ಏನವಾ ಆಂದ್ರ- ನಾಳೆ ನಮ್ಮ ಭಗಿನೀ ಸೇವಾಸದನದ್ದು ವಾರ್ಷಿಕ ಸಮ್ಮೇಳನ ಆದ-" "Sorry ಶಶಿ, ಸಂಡೇ ನನಗ ಮನೀಬಿಟ್ಟು ಬರಲಿಕ್ಕೆ ಆಗೂದಿಲ್ಲಂತ ನಿನಗ ಗೊತ್ತಿಲ್ಲೇನು?" "ಗೊತ್ತದನ, ಆದರ ಇದು ಅಂಥಿಂಥಾ ordinary ಕಾರ್ಯಕ್ರಮ ಅಲ್ಲ. ಇದು ಅಂತರ್ ರಾಷ್ಟ್ರೀಯ ಮಹಿಳಾವರ್ಷ ಅಂತ ಈ ಕಾರ್ಯಕ್ರಮ ಆಗದೀ grand ಆಗಿ, ಅಗದೀ meaningful ಆಗಿ ಮಾಡಬೇಕೂಂತ ನನ್ನ ವಿಚಾರ ಆದ.ಸ್ವಥಾ ಕಲೆಕ್ಟರೇ preside ಮಾಡ್ಲಿಕ್ಕೆ ಒಪ್ಪಿಕೊಂಡಾರ. ನೀನು- you will be one of the guests.ಅಂದರ ಹದಿನೈದು ಮಿನಿಟು ಭಾಷಣಾ ಮಾಡಬೇಕು-" "Sorry ಶಶಿ,ಭಾಷಣಾ-ಗೀಷಣಾ ಎಲ್ಲಾ ಬಿಟ್ಟು ಹಳೇ ಮಾತಾತು.ನನಗ ಈಗ ಇಂಟರೆಸ್ಟೂ ಇಲ್ಲ, ಟೈಮೂ ಇಲ್ಲ." "ವಿಮಲಾ!" ವ್ಯಥೆಯಿಂದ, ಆಶ್ಚರ್ಯದಿಂದ ಶಶಿ ಅಂದಳು,"ನೀ ಹಿಂಗ ಹೇಳಿದರ ನನಗ ಭಾಳ ವಿಚಿತ್ರ ಅನಸ್ತದ, ಹೆಣ್ಮಕ್ಕಳ ಒಳ್ಳೇದರ ಸಲುವಾಗಿ,ಅವರ ಉದ್ಧಾರದ ಸಲುವಾಗಿ,ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಡೋದರ ಸಲುವಾಗಿ , ಜೀವನಾ ವೀಸಲಾಗಿಡ್ತೀನಿ ಅಂತ ಕಾಲೇಜಿನ್ಯಾಗಿದ್ದಾಗ ಹೇಳ್ತಿದ್ದಾಕಿ ನೀನ ಏನು ಅಂತ ಸಂಶೇ ಬರುತದ ನನಗ. ನೋಡು ವಿಮಲಾ,ನಮ್ಮದು ಬರೇ propaganda ಸಲುವಾಗಿ, show ಸಲುವಾಗಿ, ಒಂದೇನೋ fashion ಅಂತ ಮಾಡೋ ಪ್ರೋಗ್ರ್ಯಾಂ ಅಲ್ಲ. ಹೆಣ್ಮಕ್ಕಳಿಗೆ,ಅದರಾಗೂ