ಪುಟ:ನಡೆದದ್ದೇ ದಾರಿ.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ನಡೆದದ್ದೇ ದಾರಿ middle class ಹೆಣ್ಮಕ್ಕಳಿಗೆ,ಅಂದರ ನಮ್ಮ-ನಿಮ್ಮಂಥವರಿಗೆ ಒಂದ ಸಾವಿರ problems ಇರ್ತಾವ.ಆದರ ಮಜಾ ಅಂದ್ರ ಆದರಾಗ ನೂರಕ್ಕ ಎಂಬತ್ತು ಮಂದಿ ಹೆಂಗಸರಿಗೆ,-ನಮ್ಮ ದೇಶದಾಗ ಹ್ಞಾ ಮತ್ತ-ತಮ್ಮ problems ಏನು,ತಮಗಾಗೋ ಅನ್ಯಾಯ ಏನು,ಅನ್ನೂದರ ಖಬರೇ ಇರೂದಿಲ್ಲ.ಅದನ್ನ ಅವರಿಗೆ ಗೊತ್ತಮಾಡಿಕೊಡೂದು ನಮ್ಮ ಉದ್ದೇಶ. ಈ ವಿಷಯದ ಮ್ಯಾಲೆ ನಿನ್ಹಾಂಗ ಖಡಾಖಂಡಿತ ಭಾಷಣಾ ಕೊಡೋ ಹೆಂಗಸರು ಈ ಇಡೀ ಹುಬ್ಬಳ್ಳಿ-ಧಾರವಾಡದಾಗ ಮತ್ತೊಬ್ಬರು ಯಾರೂ ಇಲ್ಲಂತ ನಿನ್ನ ಕೇಳಿಕೋಳ್ಲಿಕ್ಹತ್ತೀವಿ."

   "ಪ್ಲೀಜ್ ಶಶಿ, ನನಗ  ಜುಲುಮಿ ಮಾಡಬ್ಯಾಡ." -ಆಕೆಯ ಧ್ವನಿಯಲ್ಲಿ ಯಾಕೋ ಎಲ್ಲಿಲ್ಲದ ಅಸಹಾಯಕತೆ ಇಣುಕಿತು.
  "ನಾ ಅದೆಲ್ಲಾ ಕೇಳಾಕೆಲ್ಲ ನೋಡು. ನೀ ಬರ್ಲಿಕ್ಕೇ ಬೇಕು. ನಾಳೆ ಸಂಜೀನ್ಯಾಗ ಟೌನ್ ಹಾಲಿನೊಳಗ  ಪ್ರೋಗ್ರ್ಯಾಂ ಅದ. ನೀ ಆರ ಗಂಟೇಕ್ಕ ಬಂದ್ರೂ ಆದೀತು."
  "ಶಶೀ,ನಿನಗ ಗೊತ್ತದ, ನಮ್ಮ ನೀಯವ್ರಿಗೆ ಈಗ ಬೆಳಗಾವಿಗೆ ಟ್ರಾನ್ಸ್ ‍ಫರ್ ಆಗೇದ.ಆವ್ರು ಶನಿವಾರ, ರವಿವಾರ ಎರಡೇ ದಿನಾ ಮನೀಗೆ ಬಂದಿರ್ತಾರ. ಅಂಥಾದರಾಗ-"
      "ಅಲ್ಲ ವಿಮಲಾ, ಲಗ್ನಾಗಿ ಹತ್ತು ವರ್ಷಾಗಿ, ಮೂರು ಮಕ್ಕಳಾದ್ರೂ ಇನ್ನೂ ಒಂದು ಸಂಡೇ evening ಗಂಡನ್ನ ಬಿಡೂದಾಗೂದಿಲ್ಲ ನಿನಗ ? ನಿನ್ನಂಥಾ ಹೆಂಗಸರಿಂದ ನಮ್ಮ ದೇಶದಾಗಿನ ಗಂಡಸ್ರು ಇಷ್ಟ ಸೊಕ್ಕಿಗೇರಿದ್ದು. ಅದೆಲ್ಲಾ ನನಗ ಹೇಳಬ್ಯಾಡ. ನೀ ಬರ್ಲಿಕ್ಕೇಬೇಕನೋಡು."
       "ಶಶಿಯ ಜೊತೆ ಬಂದಿದ್ದ ಹೆಂಗಸರೂ ದನಿಗೂಡಿಸಿದಾಗ ಲೋಕಲ್ ಟ್ರೇನಿನ ವ್ಹಿಸಲ್ ಕೇಳಿಸಿತು.ಆಕೆ ಏನೊಂದನ್ನೂ ಹೇಳದೆ ಓಡುತ್ತಲೇ ಪ್ಲ್ಯಾಟ್ ಫಾರ್ಮು ಸೇರಿ, ಹೊರಟಿದ್ದ ಗಾಡಿಯ ಒಂದು ಬೋಗಿಯನ್ನೇರಿ ಧೊಪ್ಪೆಂದು ಕುಸಿದು ಕುಳಿತಳು.
     ಮನೆ ಸೇರಿ,ಸೀರಿ ಬದಲಿಸಿ, ಕೈಕಾಲು-ಮುಖ ತೊಳೆದುಕೊಂಡು, ಸ್ಟವ್ ಹೊತ್ತಿಸಿ ಆಕೆ ಚಹಾಕ್ಕೆ ಎಸರಿಡುತ್ತಿದ್ದಂತೆ ಪಡಸಾಲೆಯಿಂದ ಪಾಪು ಅಳತೊಡಗಿದ್ದು ಕೇಳಿಸಿತು.ಜೊತೆಗೆ ರಾಜೂನ  ಏರುಧ್ವನಿ - "ನಾ ಕೊಡೂದಿಲ್ಲಾ ಅಂದ್ರ ಕೊಡೂದಿಲ್ಲಾ. ಈ ಬಾಲ್ ಅಮ್ಮಾ ನನಗೆ ತಂದಾಳ. "ಪಾಪುವಿನ ಅಳು ಜೋರಾದಂತೆ ರಾಜುವಿನ ಧ್ವನಿಯೂ ಏರಿತು. ಆದರೆ ದಣಿದ ಮೈಗೆ ಆ ಮಕ್ಕಳನ್ನು ಸಮಾಧಾನಗೊಳಿಸುವುದಕ್ಕಿಂತ ಒಂದು ಕಪ್ಪು ಚಹಾನೇ ಹೆಚ್ಚು ಆವಶ್ಯಕ ಅನಿಸಿ ಆಕೆ ಅಡಿಗೆಮನೆಯಿಂದ ಕದಲಲಿಲ್ಲ. ನಡುಮನೆಯಲ್ಲಿ 'ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ