ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲು/ಅವಳ ಸ್ವಾತಂತ್ರ್ಯ ೧೮೭

   ಹರೇಹರೇ'  ಅನ್ನುತ್ತ ಮಂಚಕ್ಕೊರಗಿದ್ದ  ಮಾವನವರು ಎದ್ದು  ಹೋಗಿ ಮಕ್ಕಳನ್ನು ರಮಿಸಿಯಾರೆಂದು ಆಕೆ ಚಹಾ  ಸೋಸತೊಡಗಿದಳು. ಪಾಪುವಿನ ಧ್ವನಿ ಈಗ ತಾರಕಕ್ಕೇರಿತು.  ಯಾಕೋ ಇದ್ದಕ್ಕಿದ್ದಂತೆ ಅವಳಿಗೆ ಎಲ್ಲರಮೇಲೂ ವಿಪರೀತ ಸಿಟ್ಟು ಬಂದು ರಾಜು-ನೀಲು-ಪಾಪು  ಮೂವರಿಗೂ ಒಂದೊಂದು ಇಕ್ಕರಿಸೋಣವೆಂದು ರಭಸದಿಂದ ಹೊರಗೆ ಬಂದಳು. 
    ಅಷ್ಟರಲ್ಲೇ ಮೆಟ್ಟಲೇರಿ ಬಾಗಿಲಿಗೆ ಬಂದಿದ್ದ ಶಂಕರನನ್ನು ಕಂಡು ಆಕೆ ಒಂದು ನಿಮಿಷ ಗಪ್ಪನೆ ಅಲ್ಲೇ ನಿಂತಳು . ಅಪ್ಪನನ್ನು ಕಂಡೊಡನೆ ಮಕ್ಕಳ ಚೀರಾಟ ನಿಂತಿತು. ಗಂಡನನ್ನು ಸ್ವಾಗತಿಸಲು ನಗಲೆತ್ನಿಸುತ್ತ  ಆತನ ಕೈಯಲಿನ  ಬ್ರೀಫ್‌ಕೇಸು ಇಸಿದುಕೊಳ್ಳಲು ಆಕೆ ಬಾಗಿದಾಗ ತುಸು ಅಸಹನೆಯಿಂದಲೇ ನುಡಿದ ಆತ, 
      "ಇದೇನು ಗದ್ದಲ  ವಿಮಲಾ ? ಈ ಹುಡುಗರ ಧಾಂಧಲೇ ರಸ್ತೇಕ್ಕ ಕೇಳಸ್ತಿತ್ತು . ಹೆಂಡತಿ ಗ್ರ್ಯಾಜುಯೇಟ್  ಇದ್ದರ ಮಕ್ಕಳ್ನ ಛಲೋತ್ನ್ಯಾಗಿ  ಬೆಳಸ್ತಾಳಂಥ ಕಡಿಮೀ  ವರದಕ್ಷಿಣಿ  ತಗೊಂಡು ನಿನ್ನ ಲಗ್ನಾದೆ. ನೀ ಹುಡುಗರಿಗೆ  ಸ್ವಲ್ಪೂ##    ಕಲಿಸಿಲ್ಲ ನೋಡು. "
  ಮಾತನಾಡದೆ  ಆಕೆ ಬ್ರೀಫ್‌ಕೇಸ ನ್ನು  ಪಾಪುವನ್ನೂ ಎತ್ತಿಕೊಂಡು  ಒಳನಡೆದಳು. 
   ಮಕ್ಕಳಿಗೆ ತಿಂಡಿಕೊಟ್ಟು ಹೊರಗೆ ಕಳಿಸಿ, ಗಂಡನಿಗೂ ಮಾವನಿಗೂ ನಡುಮನೆಯಲೇ ತಿಂಡಿ ಚಹ ಕೊಟ್ಟು, ಮತ್ತೆ ಆಕೆ ಅಡಿಗೆಮನೆ ಸೇರುವಾಗ ಗಂಟೆ ಎಂಟರ ಸಮೀಪ  ಬಂದಿತ್ತು. ಚಪಾತಿಗೆ ಹಿಟ್ಟು ಕಲಸಿಟ್ಟು  ಸೊಪ್ಪು ಬಿಡಿಸುತ್ತ ಕೂತಾಗ ಆಕೆಗೆ ಫಕ್ಕನೆ ನೆನಪಾಯಿತು.೩೩ ಯಿದ ಮೂರು ಮೆಮೋ ಬಂದಿದ್ದವು. ರಾಜೂನ ಹೆಸರಿನ ಪಾಲಿಸಿಗೆ ಹಣ ಕಟ್ಟುವುದಿತ್ತು. ಮುಂಜಾನೆ ಹತ್ತಕ್ಕೆ ಗಡಬಡಿಸಿ ಮನೆಬಿಟ್ಟು ಹೊರತು ಸಂಜೆ ಏಳಕ್ಕೆ ಮನೆ ಸೇರುವ ತನಗೆ ಆ ಕೆಲಸ ಮಾಡಲಾಗಿರಲೇ ಇಲ್ಲ. ಅದೊಂದು ಕೆಲಸ ಮಾಡಿ ಹೋಗಲು ಶಂಕರನಿಗೆ ಹೇಳಬೇಕು. ಹಾಗೆಯೇ ನಾಳೆ  ಮರೆಯದೇ  ಪಾಪುವನ್ನು ಡಾಕ್ಟರ ಕಡೆ ಕರೆದೊಯ್ಧು ತೋರಿಸಲು ಹೇಳಬೇಕು. ಇತ್ತೀಚೆ ಸದಾ ನೆಗಡಿ-ಕೆಮ್ಮು-ಜ್ವರ ಆತನಿಗೆ. ಮೂರು ವರ್ಷದ ಮಗು ಪಾಪ, ದಿನವಿಡೀ  ಒಂಟಿಯಾಗಿ ಮುದುಕ ಅಜ್ಜನೊಡನೆ ಹೇಗೆ ಕಾಲ ಕಳೆಯುತ್ತದೋ ..... ನೆನೆಸಿದರೆ ಸಂಕಟವಾಗುತ್ತದೆ. ಹಾಗೆಯೇ ಬರುತ್ತಾ ನೀಲೂಗೆ ಯುನಿಫಾರ್ಮಿನ ಬಟ್ಟೆ ತಂದರಾಯಿತು. ಇಷ್ಟೆಲ್ಲ  ಸಂಜೆಗಾಯಿತು. ಮುಂಜಾನೆ ಶಂಕರ  ಹೇಗೂ ಫ್ರೀ ಇರುತ್ತಾನಲ್ಲ , ರೇಲ್ವೆ  ಹಳಿಯ ಆಚೆಗಿರುವ ಅಡ್ಡೆಗೆ ಹೋಗಿ   ನಾಲ್ಕಾರು  ಮಣ  ಕಟ್ಟಿಗೆ   ತರಲು ಹೇಳಬೇಕು. ಚಿಮಣೀ  ಎಣ್ಣೆ ಸಿಗುವುದು ತೀರ ತಾಪತ್ರಯವಾಗಿ ಹೋಗಿದೆ. ಮಳೆಗಾಲ ಬೇರೆ  ಸುರು ಇನ್ನು.