ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೮೮ ನಡೆದದ್ದೇ ದಾರಿ
-ನಡುಮನೆಯಿಂದ ಮಾವನವರ ಸಣ್ಣಗಿನ ನರಳುವಿಕೆ ಕೇಳಿಸಿತು.ಜೊತೆಗೇ-"ವಿಮಲಾಬಾಯಿ,
ಸ್ವಲ್ಪ ನೀರು ಕೊಡವಾ." ಅವರಿಗೆ ನೀರು ಕೊಟ್ಟು ಬಂದಾಗ ಆಕೆಗೆ ಮೊನ್ನೆ ಮಾನವರನ್ನು ನೋಡಲು ಬಂದಿದ್ದ ಆಚೆಮನೆಯ ಡಾಕ್ಟರ್ ಹೇಳಿದ್ದು ಥಟ್ಟನೆ ನೆನಪಾಯಿತು :"ಇವರಿಗೆ ಹಿಂಗಹಗಲೆಲ್ಲ ಹೊಟ್ಟ ನೋವು ಬರತದ ಅಂತೀರಲ್ಲಾ, ಅಪೆಂಡಿಸೈಟಿಸ್ ಆಧಾಂಗ ಅವs ಲಕ್ಷಣ. ಡಿಸ್ಪೆನ್ಸರಿಗೆ ಕರಕೊಂಡು ಬಾ ಅಂತ ಹೇಳ್ರಿ ನಿಮ್ಮ ಯಜಮಾನ್ರು ಬಂದಾಗ. ಪೂರಾ ಚೆಕ್ಅಪ್ ಮಾಡಬೇಕು. ಬಹುತೇಕ ಆಪರೇಷನ್ ಮಾಡಬೇಕಾದೀತು."ಹ್ಜ್ಞ,ಇದನ್ನಂತೂ ಮರೆಯದೆ ಮಾಡಲು ಹೇಳಬೇಕು ಶಂಕರನಿಗೆ.
ನಸುಗತ್ತಲು.ಅಡಿಗೆಮನೆಯ ಬುಲ್ಬು ತೀರ ಮಂದ.ಹಿಂದಿನಿಂದ ಕೈಗಳೆರಡು ಆಕೆಯನ್ನು ಬಳಸಿದಾಗ ಬೆಚ್ಚಿ ಒಮ್ಮೆಲೆ ತಲೆಯೆತ್ತಿ ತಿರುಗಿ ನೋಡಿ ಆಕೆ ಅಂದಳು ."ಛೀ, ಇದೇನು ಹುಡುಗಾಟ ನಿಮ್ಮದು ? ಹುಡುಗೂರು ಬಂದಗಿಂದಾರು". ಶಂಕರನ ಬಿಗಿತ ಮತ್ತೂ ಬಿಗಿಯಾದಾಗ ಹೌದೋ ಅಲ್ಲವೋ ಅನ್ನುವಂತೆ ಒಮ್ಮೆ ಮೈ ಜುಮ್ಮೆಂದರೂ ಆಕೆ ಬಿಡಿಸಿಕೊಳ್ಳುತ್ತ ಅಂದಳು :"ಅಡಿಗಿ ಆಗಬೇಕು ಇನಾ, ಮಾವನವರಿಗೆ ಊಟ ತಡಾ ಆದರ ತ್ರಾಸಾಗತದ". ಅವಳನ್ನು ಬಿಟ್ಟು ಎದ್ದು ನಿಂತ ಆತ ಆಕ್ಷೇಪಣೆಯ ಧ್ವನಿಯಲ್ಲಿ ಅಂದ : "ಯಾವಾಗ ನೋಡಿದ್ರೂ ಹುಡುಗುರೂ , ಮಾವನವರ, ಅಡಿಗೀ ಕೆಲಸಾ.ನಿನ್ನ ಗಂಡಗೂ ಏನರೆ ಒಂದಿಷ್ಟು ಜಾಗಾ ಅದ ಏನು ನಿನ್ನ ಮನಸಿನ್ಯಾಗ ?ನಿನ್ನ ಜೀವನದಾಗ?" ಈ ಹುಡುಗರು, ಈ ಮಾವನವರು , ಈ ಆಡಿಗೆ ,ಈ ಕೆಲಸ -ಇವೆಲ್ಲ ಯಾರವು ,ಯಾರಿಗಾಗಿ -ಅಂತ ಕೀಳಬೇಕೆನಿಸಿದರೂ ಆಕೆ ಸುಮ್ಮನೆ ಚಪಾತಿ ಲಟ್ಟಿಸತೊಡಗಿದಳು. -ಊಟ ಮುಗಿಸಿದ ಹುಡುಗರು ಹಾಸಿಗೆಗಾಗಿ ಗಲಾಟೆ ಮಾಡುತ್ತಿದ್ದಾಗ ಆಕೆ ಕೈಲಿದ್ದ ಕೆಲಸ ಬಿಟ್ಟು ಬರುತ್ತಿದಂತೆಯೇ ,ಕುರ್ಚಿಯಲ್ಲಿ ಪೇಪರು ಹಿಡಿದುಕೊಂಡು ಸಿಗರೇಟು ಸೇದುತ್ತ ಆರಾಮಾಗಿ ಕೂತ ಶಂಕರ ಅಂದ :"ಇವ್ರಿಗೆಲಾ ಲಗೂ ಹಾಸಿಗೀ ಹಾಸಿ ಕೊಟ್ಟು ಮಲಗಸಬಾರದ ಮಾರಾಯಳ, ತಲೀ ಚಿಟ್ಟ ಹಿಡಸತಾವ." ಹುಡುಗರನ್ನು ಮಲಗಿಸಿ ತಲೆಬಾಗಿಲನ್ನು ಹಾಕಿ,ನಡುಮನೆಯಲ್ಲಿ ಮಾವನಾವರಿಗೂ ಹಾಸಿಕೊಟ್ಟು, ಉಳಿದಿದ್ದ ಕೆಲಸ ಮುಗಿಸಲೆಂದು ಆಕೆ ಮತ್ತೆ ಅಡಿಗೆಮನೆ ಸೇರಿದಾಗ ,ಅವಳ ಹಿಂದೆಯೇ ಬಂದ ಶಂಕರ ಆಕಳಿಸುತ್ತ ಅಂದ :"ಇನ್ನ ಭಾಂಡೀ ತಿಕ್ಕಿಕೋತ ಎರಡ ತಾಸ ಕೂಡಬ್ಯಾಡ ಮಾರಯಳ.ಇವ್ನೆಲ್ಲಾ ಎತ್ತಿ ಬಚ್ಚಲದಾಗ ಇಟ್ಟಬಿಡೂ ಲಗೂನ .ನನಗೆ ನಿದ್ದಿ ಬಂದದ."ಅಷ್ಟಂದು ಆತ