ಪುಟ:ನಡೆದದ್ದೇ ದಾರಿ.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕವಲು / ಅವಳ ಸ್ವಾತಂತ್ರ್ಯ ೧೯೧ ಸುಧಾರಿಸುವುದು, ಹುಬ್ಬಳ್ಳಿ-ಧಾರವಾಡ ನಡುವೆ ಓಡಾಟ - ಸಾಕಾಗಿ ಹೋಗಿದೆ. ಕನ್ನಡಿ ತನಗೆ ಹೇಳುತ್ತದೆ- ತಾನೀಗ ಮೊದಲಿನ ವಿಮಲಾ ಅಲ್ಲ. ಹಣೆಯ ಮೇಲಿನ ನಿರಿಗೆ, ಅರ್ಧದಷ್ಟು ಬೆಳ್ಳಗಾದ ತಲೆಕೂದಲು, ಬತ್ತಿ ಹೋದ ದೇಹ, ಉತ್ಸಾಹವೇ ಇಲ್ಲದ ಮನಸ್ಸು... ತನ್ನ ಚೈತನ್ಯವೆಲ್ಲ ಸೋರಿ ಹೋಗುತ್ತಿದೆಯೇ ? ಅಥವಾ ಈ ಗಂಡ ಅದನ್ನೆಲ್ಲ ಬಾಚಿ ಹೆಕ್ಕಿಕೊಂಡಿದ್ದಾನೋ ? - ನಸುಕಿನಲ್ಲಿದ್ದು ಆಕೆ ನೀರು ತುಂಬುವ ಪಾತ್ರೆ ತೊಳೆಯುತ್ತಿದ್ದಾಗ ಆ ಸದ್ದಿಗೆ ಎಚ್ಚತ್ತ ಶಂಕರ : “ನಡರಾತ್ಯಾಗ ದೀಪಾ ಹಚ್ಚಿಗೊಂಡು ಇದೇನು ಧಾಂಧಲೇ ನಡಸೀದಿ ?" “ನೀರು ಲಗೂ ಹೋಗ್ತಾ ಅಂದಳು ಆಕೆ. ಮದುವೆಯಾದ ಹೊಸತರಲ್ಲಿ ಅತ್ತೆ-ಮಾವ ಇದ್ದ ಹಳ್ಳಿಗೆ ಹೋದಾಗ ಆಕೆ ಬಾವಿಯಿಂದ ನೀರು ಸೇದಲೆಂದು ಹಿತ್ತಿಲಿಗೆ ಹೋದಾಗ, ತಾಯಿಯ ಕಣ್ಣು ತಪ್ಪಿಸಿ ಹಿತ್ತಿಲಿಗೆ ಬಂದ ಶಂಕರ ನೀರು ಸೇದಿ ಕೊಡುತ್ತಿದ್ದುದು ನೆನಪಾಯಿತು ಆಕೆಗೆ, ನಗು ಬಂತು. ಥತ್, ನಿದ್ದೀನೂ ಮಾಡಿಸಿಕೊಡಾಂಗಿಲ್ಲ ನೀನು" -ಅಂತನ್ನುತ್ಯ ದಿಗ್ಗನೆದ್ದು ಆತ ಪಡಸಾಲೆಗೆ ಹೋಗಿ ರಾಜುವಿನ ಪಕ್ಕದಲ್ಲಿ ಮಲಗಿದ. – ಎಲ್ಲರ ಚಹಾ-ತಿಂಡಿ ಮುಗಿದ ನಂತರ ಎಂಟೂವರೆಗೆ ಆರಾಮಾಗಿ ಎದ್ದು ಬಂದ ಶಂಕರನಿಗೆ ಚಹಾ ಕೊಡುತ್ತ ಆಕೆ ಅಂದಳು, “ಲಗೂ ಸ್ನಾನ ಮಾಡಿ ಒಂದಿಷ್ಟ ಕಟಿಗೀ ಆಡ್ಡದ ಕಡೆ ಹೋಗಿ ಬರಿ. ಮಳೆಗಾಲ ಸುರೂ ಆಗೂದ್ರಾಗ ಕಟಿಗೀ ತಗೊಂಡು ಇಟಗೊಳೂದು ಛಲೋ ಬಂದ ಮ್ಯಾಲ ಮಾವನವರ ಕರಕೊಂಡು ಆಠವಲೇ ಡಾಕ್ಟರ ಕಡೆ ಹೋಗಿ ಬರಿ. ಹೊಟ್ಟೆ ನೋವು -ಹೊಟ್ಟೆ ನೋವು ಅಂತ ಭಾಳ ಒದ್ದಾಡತಾರ ಪಾಪ" “ಇಲ್ಲೇ ಮಗ್ಗಲದಾಗ ಇದ್ದಾರ ಡಾಕ್ಟರು. ನೀನು ಸವುಡು ಮಾಡಿಕೊಂಡು ಅಪ್ಪನ್ನ ಕರಕೊಂಡು ಹೋಗಬಾರದು ಒಮ್ಮೆ ? ಕೆಲವು ಹೆಂಗಸರು ಎಷ್ಟ efficient ಇಾರ ಏನ ಕಥೀ, ನೀ ನೋಡು ಅಳುಬುರುಕಿ, ಒಂದೂ ಕೆಲಸ ಆಗಾಂಗಿಲ್ಲ.* 'ನಾ ಯಾವದಂತ ಮಾಡ್ಲಿ ? * ತಡೆಯಲಾರದೆ ಆಕೆ ಅಂದಳು, “ಇನ್ನೂರನ್ಸ್ದ್ದು ರೊಕ್ಕಾ ತುಂಬೂದದ, ಹುಡುಗರಿಗೆ ಅರಿವೀ ತರೂದದ, ಪಾಪೂಗ ಮೈಯಾಗ ನೆಟ್ಟಗಿಲ್ಲ, ಆಫೀಸಿಂದು ಆಕೌಂಟ್ ಬರಿಯದದ-" “ಸಾಕುಸಾಕು ಮಾರಾಯಳು, ವಾರಕ್ಕೆ ಎರಡ ದಿನಾ ಮನೀಗೆ ಬದ್ದೀನಿ. ಬಂದಾಗೊಮ್ಮೆ ಇದು ಹಾಡು, ಮನೀಗೆ ಬಂದ್ರೂ ಸುಖಾ-ಶಾಂತಿ-ಸಮಾಧಾನ ಸಿಗೂದು ಬರದಿಲ್ಲ ನಮ್ಮ ಹಣ್ಯಾಗ. ಇದಕ್ಕಿಂತ ಬೆಳಗಾವ್ಯಾಗಿನ ಆ ಗಣೇಶ್ ಲಾಜಿನ್ಯಾಗಿನ ರೂಮೇ ಸುಖಾ" – ಚಹದ ಕಪ್ಪನ್ನು ಕುಕ್ಕಿ ಆತ ಎದ್ದು ಹೋದ.