ಪುಟ:ನಡೆದದ್ದೇ ದಾರಿ.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ನಡೆದದ್ದೇ ದಾರಿ

      ನಡುಮನೆಯಿಂದ ಮಾವನವರ ಧ್ವನಿ ಕೇಳಿಸಿತು, ಮೆತ್ತಗೆ-"ಹಂಗ್ಯಾಕ ಸಿಡಿಪಿಡಿ ಮಾಡತೀಯೋ ಶಂಕರೂ? ಆಕೀನೂ ಪಾಪ ಒಬ್ಬಾಕಿ,ಒಳಗೂ-ಹೊರಗೂ ದುಡೀಬೇಕು. ನೀ ದೂರ ಒಬ್ಬನ ಆರಾಮ EjÛÃ . ಬಂದಾಗರೆ ಸ್ವಲ್ಪ ಸಹಾಯ ಮಾಡಲಾ. ನಿನ್ನ ಪಿ. ಡಬ್ಲ್ಯೂ. ಡಿ. ಆಫೀಸೇನು, ನಾಳೆ ಸೋಮವಾರ ಒಂದಿಷ್ಟ ತಡಾ ಆಗಿ ಮಧ್ಯಾಹ್ನ ಹೋದ್ರೂ ನಡೀತದ. ಮುಂಜಾನೆ ಅದೇನೋ ಇನ್ಶೂರನ್ಸ್ ಕೆಲಸಾ ಅಂತಾಳಲಾ, ಅದನ್ನ ಮಾಡಿ ಹೋಗು."
                 ಶಂಕರ ಏನೂ ಮಾತಾಡಲಿಲ್ಲ.
                 ಮುಂದೆ ಒಂದು ತಾಸಿನಲ್ಲೇ ಪ್ರತ್ಯಕ್ಷನಾದ ಶಂಕರನ ಇಲ್ಲಿಯ ಗೆಳೆಯ ಪಾಟೀಲ್. "ವಿಮಲಾ, ಚಹಾ ಮಾಡು" ಅಂತ ಪಡಸಾಲೆಯಿಂದಲೇ ಕೂಗಿ ಹೇಳಿದ ಶಂಕರ. ಆಕೆ ಚಹಾ ಒಯ್ದು ಗೆಳೆಯರಿಬ್ಬರಿಊ ಕೊಡುವಾಗ ಪಾಟೀಲ್ ನಮ್ರ ಧ್ವನಿಯಲ್ಲಿ ಹೇಳಿದ, "ವೈನೀ, ಇವತ್ತ ಶಂಕರನ್ನ ಎರಡ ತಾಸು ದಯಮಾಡಿ ನಮ್ಮ ಕೂಡ ಕಳಿಸಿಬಿಡ್ರಿ. ಛಲೋ ಇಂಗ್ಲಿಶ್ ಪಿಕ್ಚರ್ ಅದ ಹತ್ತ ಘಂಟೇಕ್ಕ.ಭಾಳ ದಿನಾ ಆತು ಣವಿಬ್ರೂ ಕೂಡಿ ಸಿನೇಮಾ ನೋಡದೇ. ಪ್ಲೀಜ್, ಏನಂತೀರಿ ?"
               ಹುಚ್ಚುನಗೆನಕ್ಕು ಆಕೆ ಅಂದಳು, "ಓಹೋ, ಕರಕೊಂಡು ಹೋಗ್ರೆಲಾ, ನಾಯಾಕ ಬ್ಯಾಡ ಅನ್ನಿ?"
               ಮಾವನವರ-ಹುಡುಗರ ಊಟ ಮುಗಿಸಿ ಶಂಕರನಿಗಾಗಿ ಕಾಯುತ್ತ ಕೂತಳು ಆಕೆ. ಶಶಿ ಕುಲಕರ್ಣಿಯ ಭಾಷಣದ ಆಮಂತ್ರಣ ನೆನಪಾಯಿತು. ಬೇಡ,ಸಂಜೆ ಕೆಲವಾದರೂ ಮಹತ್ವದ ಕೆಲಸ ಮುಗಿಸಬೇಕು. ಹೇಗೂ ಸಂಜೆಯೆಲ್ಲ ಶಂಕರ ಫ್ರೀ ಇರುತ್ತಾನೆ, ಎಲ್ಲ ಮುಗಿದ ನಂತರ ಇನ್ನೂ ಟೈಮು ಉಳಿದರೆ ಹಾಗೇ ಮಕ್ಕಳನ್ನು ಕರಕೊಂಡು ಯೂನಿವ್ಹರ್ಸಿಟಿಯ ಕಡೆ ತಿರುಗಾಡಲು ಹೋದರಾದೀತು- ಅನಿಸಿತು.
            ಒಂದು ಗಂಟೆಯ ಹೊತ್ತಿಗೆ ಬಂದ ಶಂಕರ ತುಂಬ ಗಡಿಬಿಡಿಯಲ್ಲಿದ್ದ:"ಲಗೂ ಊಟಕ್ಕ ಬಡಸು ವಿಮಲಾ, ಎರಡ ಘಂಟೇಕ್ಕ ನಮ್ಮ ಜೇ. ಈ. ಸಾಹೇಬರ ಕಾರು ಬೆಳಗಾವಕ್ಕ ಹೋಗೂದದ. ಅದರಾಗ ಹೋಗಿಬಿಡ್ತೀನಿ."
                ಆಕೆ ನಿಂತಲ್ಲೇ ಸ್ತಬ್ಧಳಾದಳು ಒಂದು ಕ್ಷಣ.
                "ಇಷ್ಟ ಲಗೂ ಯಾಕ ಹೊಂಟ್ಯೋ ? ಮುಂಜಾನೆ ಹೋಗಿದ್ದರ ಆಗತಿತ್ತಲಾ" ಅಂದರು ಮಾವನವರು.
                "ಇಲ್ಲ ಅಪ್ಪಾ, ಈಗ ಬಸ್ಸಿಗೆ ಭಾಳ ಗದ್ದಲ ಇರತದ. ಎರಡೆರಡ ತಾಸ ಕ್ಯೂದಾಗ ನಿಂದರಬೇಕಾಗತದ.ಅನಾಯಾಸ ಕಾರು ಹೊಂಟದ. ಹೋಗಿಬಿಡ್ತೀನಿ."
                  ಮಾತನಾಡದೆ ಗಬಗಬ ಊಟ ಮುಗಿಸಿದ ಆತ. ಹಾಗೆಯೇ ತನ್ನ ಬ್ರೀಫ್ ಕೇಸು