ಪುಟ:ನಡೆದದ್ದೇ ದಾರಿ.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕವಲು / ಅವಳ ಸ್ವಾತಂತ್ರ್ಯ ೧೯೩ ಎತ್ತಿಕೊಂಡು “ಬತ್ತೀನಿ ಅಪ್ಪಾ" ಅಂತ ಹೇಳಿ ಪಡಸಾಲೆಗೆ ಬಂದ. ಆತನ ಹಿಂದೆಯೆ ಬಂದ ಆಕೆ ತಡೆಯದೆ ಕೇಳಿದಳು, “ಮುಂದಿನ ಶನಿವಾರ ನಿಮಗೆ ಸೂಟೀ, ಸೆಕೆಂಡ್ ಸ್ಯಾಟರ್ಡೆ ಆದ. ಶುಕ್ರವಾರನು ಬರಲಾ ?" ನಿರ್ಲಕ್ಷ್ಯದಿಂದ ಆತನೆಂದ, “ನೋಡ್ತೀನಿ. ಸೂಟೀ ಇದೂ ಕೆಲಸ ಇದ್ದು ಇರಾವ." ನಂತರ ಒಮ್ಮೆ ತುಂಟನಗು ನಕ್ಕು ಅವಳೆಡೆ ನೋಡಿ ಮತ್ತೆ ಸೇರಿಸಿದ, “ಹಗಲೆಲ್ಲ ಬಂದು ಮಾಡೂದರೆ ಏನದ ? ನಿನಗೂ ಮೊದಲಿನ ಹುರುಪು ಇಲ್ಲ ಈಗ. ಮಕ್ಕಳಿಗೆ ಟಾಟಾ ಹೇಳಿ ಬೀದಿಯ ತಿರುವಿನಲ್ಲಿ ಆತ ಮರೆಯಾಗುವ ವರೆಗೂ ನಿಂತು ನೋಡುತ್ತಿದ್ದಳು ಆಕೆ. |

ಗಂಡ ದೂರವಾಗುತ್ತಿದ್ದಂತೆ ಮುಂಜಾನೆ ವಾವನವರು ಅಂದಿದ್ದು ನೆನಪಾಯಿತು : 'ದೂರ ಒಬ್ಬನು ಇದ್ದೀ.... ದೂರ-ಬೆಳಗಾವಿ- ಗಣೇಶ್ ಲಾಜ್ - ಯಾರಿಗೆ ಗೊತ್ತು, ಅಲ್ಲಿ ಆತ ಹೇಗಿರುತ್ತಾನೋ, ಏನು ಮಾಡುತ್ತಾನೋ.... ಇನ್ನೂರನ್ಸ್‌ಗೆ ಹಣ ತುಂಬುವುದು, ಮಳೆಗಾಲ, ಕಟ್ಟಿಗೆ, ಪಾಪುವಿನ ಜ್ವರ, ಮಾವನವರ ಹೊಟ್ಟೆ ನೋವು, ಆಡಿಗೆ, ಆಫೀಸು, ಲೋಕಲ್ ಟ್ರೇನು.... ಯಾಕೋ ಕಣ್ಣಿಗೆ ಕತ್ತಲು ಬಂದಂತೆನಿಸಿ ಆಕೆ ಬಾಗಿಲಲ್ಲೇ ಕುಸಿದು ಕೂತಳು. “ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಕಾಲು ಶತಮಾನ ಕಳೆದು ಹೋದರೂ ನಮ್ಮ ಹೆಂಗಸರು ಮಾತ್ರ ಇನ್ನೂ ಗುಲಾಮಗಿರಿಯಲ್ಲೇ ಇದ್ದಾರೆ. ಇದಕ್ಕೆ ಕಾರಣ ೨೫% ಸಂಪ್ರದಾಯ, ಇನ್ನು ೨೫% ಪರಿಸ್ಥಿತಿ, ಇನ್ನು ೫೦% ಗಂಡಸರು (ಚಪ್ಪಾಳೆ). ಇದು ಅಂತರ್‌ರಾಷ್ಟ್ರೀಯ ಮಹಿಳಾ ವರ್ಷ, ಮಹಿಳೆಯರಿಗೆ ಸ್ವತಃದ ಬಗ್ಗೆ ಜಾಗೃತಿಯನ್ನುಂಟು ಮಾಡಿಕೊಡುವ ವರ್ಷ. ನಾವಿನ್ನು ಎಚ್ಚತ್ತುಕೊಳ್ಳಬೇಕು. ದಾಸ್ಯದ ಸಂಕೋಲೆಯನ್ನು ಹರಿದೊಗೆಯಬೇಕು. ನಮಗಾಗುತ್ತಿರುವ ಅನ್ಯಾಯವನ್ನು ಎಲ್ಲ ವಿಧದಲ್ಲೂ ಪ್ರತಿಭಟಿಸಬೇಕು. ಯಾವ ಕಾರಣಕ್ಕಾಗಿಯೂ ಯಾರೆದುರಿಗೂ ಬಗ್ಗಬಾರದು. ಅಂದಾಗ ಮಾತ್ರ-" -ರವಿವಾರ ಸಂಜೆ ಹುಬ್ಬಳ್ಳಿಯ ಟೌನ್ ಹಾಲಿನಲ್ಲಿ ನೆರೆದಿದ್ದ ಅಪಾರ ಮಹಿಳಾ ವೃಂದ ಕಿವಿ-ಕಣ್ಣು-ಬಾಯಿ ಎಲ್ಲ ತೆರೆದುಕೊಂಡು ಪ್ರಶಂಸೆ ಬೆರೆತ ಕೌತುಕದಿಂದ ಶ್ರೀಮತಿ ವಿಮಲಾ ಶಂಕರ್ ಅವರ ಭಾಷಣ ಕೇಳುತ್ತಿತ್ತು.