ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರ್ಯಾದೆ

     ಕಾರು ಆ ದೊಡ್ಡ ಮನೆಯ ದೊಡ್ಡ ದಾದ ಕಂಪೌಂಡಿನಲ್ಲಿ ಪ್ರವೇಶಿಸಿ ಒಂದು

ಟರ್ನ್ ತೆಗೆದುಕೊಂಡು ಪೋರ್ಟಿಕೋದಲ್ಲಿ ನಿಲ್ಲುತ್ತಿದ್ದಂತೆಯೆ,ಡ್ರೈವ್ಹರ್ ಇಳಿದು ಬಂದು ಹಿಂದಿನ ಬಾಗಿಲು ತೆರೆಯುವುದನ್ನು ಕಾಯದೆ ಆಕೆ ತಾನಾಗಿ ಇಳಿದಳು.ಆಕೆ ಎಣಿಸಿದಂತೆಯೆ ಆಕೆ ಮೆಟ್ಟಲುಗಳನ್ನೇರುವ ಮೊದಲೇ 'ಕಮಲಕ್ಕ ಬಂದ್ಳು', 'ಕಮಲಾ ವೈನ್ಸ ಬಂದ್ರು','ಓ ಕಮಲಕ್ಕ' ಅಂತ ಕೂಗಿಕೊಂಡು ಒಳಗಿನವರೆಲ್ಲ ಅವಳನ್ನು ಸ್ವಾಗತಿಸಲು, ಇದ್ದ ಕೆಲಸ ಇದ್ದಂತೆಯೆ ಚೆಲ್ಲಿ ಕೊಟ್ಟು ಓಡಿಬಂದರು.ಬಹಳ ದಿನಗಳ ನಂತರ ತವರಿಗೆ ಬರುತಿದ್ದ ಆಕೆಯನ್ನು ನೋಡುತ್ತ ಮುಗುಳ್ನಗುತ್ತ ನಿಂತುಕೊಂಡರು. ಅವಳ ಚಿಕ್ಕ ಸೂಟ್ ಕೇಸನ್ನು ಹೊತ್ತುತಂದ ಡ್ರೈವ್ಹರ್ ಗೆ ಕೂ ಹೇಳಿದ ಅವಳ ಹಿರಿಯ ತಮ್ಮ :"ತಗೋಂಢ್ಹೋಗಿ ಅಟ್ಟದ ಮ್ಯಾಲಿನ ನಮ್ಮ ರೂನ್ಯಾಗ ಇಟ್ಟಿಡು." ಒಡನೆಯೇ ನಡುವಿನ ತಮ್ಮನ: " ಹೆಂಡತಿ ಅಂದಳು -"ಇಲ್ಲೇ ಕೆಳಗ ನಮ್ಮ ರೂಮಿನ್ಯಾಗ ವ್ಯವಸ್ಥಾ ಮಾಡೀನಿ ವೈನ್ಸ ಅವರಿಗೆ, ಅಲ್ಲೇ ಇಟ್ಟಿಡು." ಏನು ಮಾಡುವುದೆಂದು ತಿಳಿಯದೆ ಡ್ರೈವ್ಹರ್ ನಿಂತಲ್ಲೆ ನಿಂತಿದ್ದಾಗ ಮುಂದೆ ಬಂದ ಆಕೆಯ ಕಿರಿಯ ತಂಗಿ ಸೂಟ್ ಕೇಸನ್ನು ಎಳೆದುಕೊಂಡೇ ಇಸಿದು ಕೊಳ್ಳುತ್ತ ಅಂದಳು- "ಅದ್ಯಾಕ, ಇಲ್ಲೇ ಹಾಲಿನ್ಯಾಗ ನಾವೆಲ್ಲಾ ಅಕ್ಕಾ-ತಂಗಿ ಸಾಮಾನ ಇಟ್ಟೀವಿ. ಕಮಲಕ್ಕನೂ ಇಲ್ಲೇ ಇರ್ಲಿ ಮತಾಡ್ಲಿಕ್ಕೆ ಛಲೂ ಆಗ್ತದ."

      "ಎಲ್ಲೆರ ಇಡ್ರಿ. ಒಂದ ದಿವ್ಸದ ಪ್ರಶ್ನಿ , ಎಲ್ಲಿದ್ರೇನು?" ಅನ್ನುತ್ತ ಒಳಬಂದ

ಕಮಲಕ್ಕನನ್ನು ಅವರೆಲ್ಲ ಹಿಂಬಾಲಿಸಿದರು. ಹಾಲ್ ಗೆ ಬಂದು ದೊಡ್ಡದಾದ ಸೋಫಾದ ಮೇಲೆ ಆಕೆ ದೊಪ್ಪೆಂದು ಕೂತಾಗ ಅವರೆಲ್ಲ ಅಲ್ಲೇ ಅವಳ ಸುತ್ತ -ಮುತ್ತ ನಿಂತರು."ಏ ಸುಷಮಾ , ಏನ ನೋಡಿಕೋತ ನಿಂತೀ. ಹೋಗಿ ಫಸ್ಟ್ ಕ್ಲಾಸ್ ಕಾಫೀ ಮಾಡಿಕೊಂಡು ಬಾ ಅಕ್ಕಾಗ"- ಅಂತ ಆಜ್ಞಾಪಿಸಿದ ಕಿರಿಯ ತಮ್ಮ. ಒಡನೆಯೇ ಆತನ ಹೆಂಡತಿ ಚಿಗರೆ ಮರಿಯಂತೆ ಒಳಕ್ಕೆ ಹಾರಿದಳು.

      ಇಡೀ ರಾತ್ರಿಯ ಪ್ರಯಾಣದಿಂದ ತುಂಬ ದಣಿದಿದ್ದರು ಆಕೆ ನಗುತ್ತ 

ಎಲ್ಲರನ್ನು ಮಾತಾಡಿಸಿದಳು . "ಓಹೋ, ಇದೇನು,Family reunion ಆಧಾಂಗ ಆಗೇದಲಾ- ನಿಮೆಗೆಲ್ಲಾ ರಜಾ ಹ್ಯಾಂಗ ಸಿಕ್ಕಿತು ಒಂದೇ ಟೈಮಿಗೆ?"