ಪುಟ:ನಡೆದದ್ದೇ ದಾರಿ.pdf/೨೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


   ಯಾವಾಗಲೂ ದುಡುಕು-ಸಿಟ್ಟಿನ ಸ್ವಭಾವದ ರಮೇಶ ಈಗ ಮಾತಾಡಿದ:"ನೀ ಮಾಡೂ ಪ್ರಯತ್ನ ಮಾಡೂ ಕಮಲಾಕ್ಕಾ,ನೀ ಹೇಳಿದ ಮಾತು ಅವ್ರು ನಡಸೇ ನಡಸ್ತಾರ.ಇಷ್ಟೂ ಮೀರಿ ಆಗ್ಲಿಲ್ಲಂದ್ರ ನಾನೂ ನೋಡೇ ಬಿಡ್ತೀನಿ ಒಂದ ಕೈ.ಆ ರಂಡೀ ತಲೀಬೋಳಿಸಿ-"
   "ಛೀ ರಮೇಶ, ಸುಮ್ನಿರು"-ಅಂದಳಾಕೆ ಒಮ್ಮೆಲೆ.ನಂತರ ತನ್ನ ಧ್ವನಿಯಲ್ಲಿ ಆವಶ್ಯಕತೆಗಿಂತ ಹೆಚ್ಚಿನ ಕಾಠಿಣ್ಯವಿದ್ದುದು ಗಮನಕ್ಕೆ ಬಂದು,ಮೃದುವಾಗಿ ಅಂದಳು:"ಯಾವುದಕ್ಕೂ ದುಡುಕಬಾರದಪಾ ತಮ್ಮಾ.ವಿಚಾರ ಮಾಡಿ ಕೆಲಸಾ ಮಾಡಬೇಕು."
   ರಮೇಶನ ಧ್ವನಿಯೂ ಇಳಿಯಿತು :"ನೀನು ವಿಚಾರ ಮಾಡಿ ನೋಡು ಕಮಲಾಕ್ಕಾ,ಒಟ್ಟ ಏನಾರೆ ಮಾಡಿ ನಾಲ್ಕ ಮಂದ್ಯಾಗ ನಾವು ಮೊದಲಿನ್ಹಾಂಗು ತಲೀ ಎತ್ತಿ ತಿರಗೋ ಹಾಂಗ ಮಾಡು.ನಿನ್ನ ಮ್ಯಾಲ ನಮಗ ವಿಶ್ವಾಸ ಅದ."
   "ವಿಶ್ವಾಸ ಇದ್ರ ಬಗೀಹರೀತು.ನೀವೆಲ್ಲಾ ನಿಶ್ಚಿಂತಿ ಆಗಿರಿ."ಅನ್ನುತ್ತ ಆಕೆ ಸ್ನಾನ ಮಾಡಲೆಂದು ಎದ್ದಳು.
   "ನೀ ಸ್ನಾನಾ-ಊಟಾ ಮಾಡಿ ಮೊದ್ಲ ರೆಸ್ಟ್ ತಗೋ ಕಮಲಾಕ್ಕ, ಸಂಜೀನ್ಯಾಗ ಆರಾಮ ಕೂತು ಎಲ್ಲ discuss ಮಾಡಿ ಏನನ್ನೂದು ನಿರ್ಧಾರ ಮಾಡೂಣು"-ಅನ್ನುತ್ತ ಸತೀಶ ತನ್ನ ಹೆಂಡತಿಗೆ ಹೇಳಿದ,"ರಮಾ, ಅಕ್ಕನ ಕಾಳಜಿ ತಗೋ ಹಾ."
   "ಬರಿ ವೈನ್ಸ" ಅನ್ನುತ್ತ," ರಾಮಾ ಮುಂದಾದಳು.ಅವಳನ್ನು ಹಿಂಬಾಲಿಸುತ್ತಿದ್ದಂತೆ ತಟ್ಟನೆ ನಿಂತು ಕೇಳಿದಳು ಕಮಲಾ, "ಅಂಧಾಂಗ ಅಪ್ಪ ಇಷ್ಟ ಲಗೂ ಹೋಗ್ಯಾರೇನು ಫ್ಯಾಕ್ಟರಿಗೆ ?"
   ಒಂದು ಕ್ಷಣ ಒಮ್ಮೆಲೆ ಮೌನ .ನಂತರ ತಡೆದು ಹೇಳಿದ ಸುರೇಶ,"ಹೂ."
   ಆತನ ಧ್ವನಿಯಲ್ಲಿನ ಅಸಹನೆ ಗಮನಿಸಿದ ಕಮಲಾ ಇನ್ನೇನೂ ಕೇಳದೆ ಒಳನಡೆದಳು. ಹಾಲ್ ನಿಂದ ಮನೆಯ ಒಳಗಿನ ಭಾಗಕ್ಕೆ ಸೇರಿದ ಹಾಗಿರುವ ಜಾಗದಲ್ಲಿ ಹಾಕಿದ್ದ ದೊಡ್ಡದಾದ ಕಟ್ ಗ್ಲಾಸ್ ನ ಪಾರ್ಟಿಶನ್ ದಾಟುತ್ತಿದ್ದಂತೆ ಅಭ್ಯಾಸಬಲದಿಂದಲೋ ಎಂಬಂತೆ ಆಕೆಯ ಕಣ್ಣು ಮೇಲೆ ಹೊರಳಿದವು.ಅಲ್ಲಿತ್ತು-ಗೋಡೆಯ ಮೇಲಿನ ದೊಡ್ಡದಾದ ನಕ್ಶೀ ಕೆಲಸ ಮಾಡಿದ ಫ್ರೇಮಿನಲ್ಲಿ-ತನ್ನ ಎಂದಿನ ಜಾಗೆಯಲ್ಲೇ-ಹತ್ತು ವರ್ಷಗಳಿಂದ ಇದ್ದ ಜಾಗೆಯಲ್ಲೇ ಅವಳ, ಅವರೆಲ್ಲರ,ತಾಯಿಯ ದೊಡ್ಡ ತೈಲವರ್ಣದ ಚಿತ್ರ.ಆ ಚಿತ್ರಕ್ಕೆ ಹಾಕಿದ ದೊಡ್ಡ ಹೂಗಳ ಹಾರ, ಹಚ್ಚಿದ ಕುಂಕುಮ, ಬೆಳ್ಳಿ ನೀಲಾಂಜನದಲ್ಲಿ ಹಾಕಿಟ್ಟ ತುಪ್ಪದ ದೀಪ,ಊದಿನಕಡ್ಡಿ- ಮಾತ್ರ ಹೊಸ ದ್ರಿಶ್ಯ.ಈ ಮನೆಯ ಸೊಸೆಯರಿಗೂ ಮಕ್ಕಳಿಗೂ ಆ ಚಿತ್ರದ ಮೇಲೆ ಹೀಗೆ ಒಮ್ಮೆಲೆ ಉಕ್ಕಿ ಬಂದ ಭಕ್ತಿಗೆ ಕಾರಣವೇನೋ ಅಂದುಕೊಳ್ಳುತ್ತ