ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಹಗರದಾಗ ಇಟ್ಟ ಹೆಜ್ಜೆ ಹಿಂದೆ ತಕ್ಕೊಳೋ ಜಾತೇನ ಅಲ್ಲ ಅದು - ರಮೇಶ
" ಒಟ್ಟ ಈಗ ಮನಿ ಮರ್ಯಾಧಿ ಪ್ರಶ್ನೆ ಬಂದದ ಅಂತ ನನಗು ಇಷ್ಟ ಹೌಹಾರಿಧಾಂಗ ಆಗೆಧ.ಇಷ್ಟ ಧೊಡ್ದ ಮನೆತನಾ ! ಇಂಥಾ ದೊಡ್ಡ ಬಿಸಿನೆಸ್ ನಮದ್ದು ! ನಮ್ಮ ಕಾರು ಹೊಂಟರು ರಸ್ತೆದಾಗಿನ ಮಂದಿ ಮಗ್ಗಲ್ಲ ಸರದ ನಿಂತು ನಮಸ್ಕಾರ ಮಾಡ್ತಾರಾ. ಮುನಿಸಿಪಲ್ ಕೌಂಸಿಲ್ಲೆರ್ ಆಗಿದ್ರು ಅಪ್ಪ ಎಂ.ಎಲ್.ಆ ಆಗಿದ್ರು ನಾಳಿನ ಎಲೆಕ್ಷನ್ ದಾಗ ಮಿನಿಸ್ಟರ್ನ್ನು ಆದರೂ ಅಂಥಾ ಮನಶ್ಯಾ ಆ ಅಡಿಗೀ ಸರಸವ್ವನ್ನ ಲಗ್ನಾಗಾತಾರ ಅಂದರ -ಛೀ ಛೀ ನನಗ ನೆನೆಸಿದರೆ ಮೈ ಮೇಲೆ ಮುಳ್ಳ ಬರ್ಥವ " - ಸತೀಶ ನೀ ಸುಮ್ಮ ಮನಸಿಗೆ ಹಚ್ಚಿಕೋಬೇಡ ಅಣ್ಣ .ಈಗ ಕಮಲಕ್ಕ ಬಂದಾಳಲ್ಲ ಅದಕ್ಕ .ಆಕಿ ಹೇಳಿದ್ರೆ ಅಪ್ಪಾಕೇಳ್ಯಾರು ಅಂತ ಖಾತ್ರಿ ಅದೇ ನಮಗೆ. ಮುಪ್ಪಿನ ಕಾಲದಾಗ ಈ ಮರ್ಯಾದ್ಧಿಗೇಡಿ ಕೆಲಸವ ಮಾಡಬೇಡಿ ಅಂತ ಕಮಲಕ್ಕ ಸ್ಪಷ್ಟ ಹೇಳ್ತಾಳೆ ಅವರಿಗೆ .ಆಕಿ ಹಾಂಗೆ ನಿರ್ಭಡೆಯಿಂದ ಮಾತಾಡ್ಲಿಕ್ಕೆ ಬರುವುದಿಲ್ಲ ನಮಗಾರಿಗೂ-" ಸರಲಾ "ಹೌದೌದು-" - ಸತೀಶನ ಮಾತು ಅಲ್ಲಿಗೆ ನಿಂತಿತು ಒಮ್ಮೆಲೇ ಹಾಲ್ನಲ್ಲಿ ನಿಶಬ್ಧತೆ ಏನಾಯಿತ್ತೆನ್ದು ಕಮಲಾ ಅಚ್ಚರಿಪಡುತಿದಂತೆ ಹೊರಗೆ ಕಾರು ನಿಂತ ಶಬ್ದ ಕೇಳಿತು ಹಾ . ಅಪ್ಪ ಬಂದರೆಂದು ಕಾಣುತದೆ. ಕಾಣುವುದೇನು ಅವರ ಬೂಟ್ಸಿನ ಖಟ್ ಖಟ್ ; ಜೊತೆಗೆ, "ಏ ನಿಂಗೆ ಕಾರಿನಾಗಿನ ಹಣ್ಣಿನ ಬುಟ್ಟಿ ಒಳಗಿದ್ದೋ ರಂಗಪ್ಪ ಇನ್ನ ಇಪ್ಪತ ಮಿನಿಟಿನಗ ಮತ್ತೆ ಹೋಗಬೇಕು ಫ್ಯಾಕ್ಟರಿಗೆ , ಕಾರು ಗ್ಯಾರೇಜಿಗೆ ಒಯ್ಯಬೇಡ "-ಗೊಗ್ಗರು ದನಿಯಲ್ಲಿ ಆದೇಶ , ಅಪ್ಪಣೆ ಹಾಲ್ನಲ್ಲಿ ಸೇರಿದ್ದ ಸಭಾ ಸದ್ದಿಲದೆ ಕರಗಿತು .ಎಲ್ಲರು ತಮ್ಮ -ತಮ್ಮ ಕೋಣೆಗಳಿಗೆ ಎದ್ದು ಹೋಗಿದ್ಧರು. ಅಪ್ಪನ ಹೆಜ್ಜೆಯ ಸಡ್ಡು ಹತಿರವಾಗುತಿದಂತೆ ,ನಡು ಮನೆಯ ಮಂಚದ ಮೇಲೆ ಎಚ್ಚರವಾಗಿಯೇ ಮಲಗಿದ್ದ ಕಮಲಾಗೆ ಒಮ್ಮೆಲೇ ಎದ್ದು ಅವರನ್ನು ಸ್ವಾಗತಿಸಿ ಆಚರಿಗೊಳ್ಳಬೇಕು ಅನಿಸಿತು . ಆದರೆ ಆಕೆ ನಿದ್ರೆ ಹತಿದಂತೆ ಹಾಗೆ ಸದ್ದಿಲದೆ ಮಲಗಿದ್ದಳು . ನಡುಮನೆಯಲ್ಲಿನ ಕಥಾಲೆಯಿಂದಾಗಿ ಆಕೆಯನ್ನು ಕಾಣದೆ ಸೀಧಾ ಒಳಗಿನ ತಮ್ಮ ರೂಮಿಗೆ ಹೋದರು ಅಪ್ಪ .ಹಿಂದಿನಿಂದ ಆ ನೇರವಾಗಿ ಆಕೃತಿ -ಅಗಲವಾದ ಬೆನ್ನು ನೋಡುತಿದ್ದಂತೆ ಆಕೆಗೆ ಒಮ್ಮೆಲೆ ಬಾಲ್ಯದಲ್ಲಿ ತಾವೆಲ್ಲ ಆ ಬೆನ್ನ ಮೇಲೆ ಸವಾರಿ ಮಾಡುತಿದುದ್ದು ನೆನಪಾಗಿ ಒಂದು ಥರಾ ಅನಿಸಿತು .ಅಪ್ಪನ ವಿರುದ್ಧ ತಾವೆಲ್ಲ ಎಂಥದೋ ಷಡ್ಯಂತ್ರ ನಡೆಸಿದಂತೆ ಮುಗ್ಧ ,ಅಸಹಾಯಯಾ ತಬ್ಬಲಿ