ಫ್ಯಾಕ್ಟರಿಗಳು, ಎರಡು ನೂರು ಎಕರೆ ತೋಟ, ಐದು ದೊಡ್ಡ ಮನೆಗಳು, ಬ್ಯಾಂಕಿನಲ್ಲಿನ
ಹಣವೆಷ್ಟೋ, ಬಂಗಾರದ ಲೆಕ್ಕವಂತೂ ಯಾರಿಗೂ ಇಲ್ಲ.....
-ಆಸ್ವಸ್ಥಳಾಗಿ ಕಮಲಾ ಮತ್ತೆ ಮಗ್ಗುಲು ಬದಲಿಸಿ ನಿದ್ರಿಸಲು ನಿಜವಾದ
ಪ್ರಯತ್ನ ಮಾಡಿದಳು.
ಪ್ರತಿದಿನ ಮಧ್ಯಾಹ್ನ. ದೊಡ್ಡ ಡೈನಿಂಗ್ ಹಾಲ್, ಹನ್ನೆರಡು ಕುರ್ಚಿಗಳುಳ್ಳ
ದೊಡ್ಡ ಟೇಬಲ್, ಮಧ್ಯಾಹ್ನ ಗಂಟೆ ಎರಡೋ ಮೂರೋ, ಎಲ್ಲರ ಊಟವಾಗಿ
ತಮ್ಮ-ತಮ್ಮ ರೂಮುಗಳಲ್ಲಿದ್ದಾರೆ. ಅಪ್ಪ ಒಬ್ಬರೇ ಊಟಕ್ಕೆ ಕೂತಿದ್ದಾರೆ. ಬಡಿಸುತ್ತಿದ್ದವಳು ಸರಸವ್ವ.
ರಜಾದಿನದ ಸಂಜೆಗಳು. ಎಲ್ಲ ಸಿನೆಮಾಕ್ಕೋ ಪಾರ್ಟಿಗೋ ಶಾಪಿಂಗ್‌ಗೋ ಹೋಗಿದ್ದಾರೆ. ವೈರಾಂಡಾದಲ್ಲಿನ ಬೆತ್ತದ ಕುರ್ಚಿಯ ಮೇಲೆ ಅಪ್ಪ ಒಬ್ಬರೇ ಪೈಪ್ ಸೇದುತ್ತ ಕೂತಿದ್ದಾರೆ. ಅವರ ಕಣ್ಣುಗಳು ಹೊರಗಿನ ಮುಗಿಲನ್ನೋ ಶೂನ್ಯವನ್ನೋ ದಿಟ್ಟಿಸುತ್ತಿವೆ. ಕೆಲಸ ಮುಗಿಸಿ ಒಳಗಿನಿಂದ ಬಂದ ಸರಸವ್ವ ಮೃದುವಾಗಿ ಆ-ಈ ಮಾತು ಆಡುತ್ತ, ಅಕ್ಕಿ ಆರಿಸುತ್ತ ಅಲ್ಲೇ ಕೆಳಗೆ ಜಮಖಾನೆ ಮೇಲೆ ಕೂಡುತ್ತಾಳೆ.
ರಾತ್ರಿಗಳು, ಎಲ್ಲರ ಊಟವಾಗಿ ಹೊರಟು ಹೋಗಿದ್ದಾರೆ. ವಾಚ್‌ಮನ್ ನೈಟ್ ಡ್ಯೂಟಿಗೆ ಬಂದವನು ಕಂಪೌಂಡಿನಲ್ಲಿ ಬೀಡಿ ಸೇದುತ್ತ ಸುತ್ತುತ್ತಿದ್ದಾನೆ. ಹಾಲ್‌ನಲ್ಲಿ ಏನೋ ಕಾಗದ ಪತ್ರ ನೋಡುತ್ತ ಕೂತಿದ್ದಾರೆ ಅಪ್ಪ, ಅವರಿಗೆ ಕೆಮ್ಮು ಬರುತ್ತದೆ ಆಗಾಗ ಸರಸವ್ವ ಮೈಕ್ಸ್ ಗುಳಿಗೆ ತಂದುಕೊಡುತ್ತಾಳೆ. ನೀರು ಕೊಡುತ್ತಾಳೆ. “ಇನ್ನ ಮಲಕೋಳಿ ಸಾಹೇಬರು, ರಾತ್ರಿ ಭಾಳಾತು' ಅಂತ ಮೆತ್ತಗೆ ಹೇಳುತ್ತಾಳೆ.
ದಿನಾ ನಸುಕಿನ ನಾಲ್ಕು-ನಾಲ್ಕೂವರೆ ಗಂಟೆಯ ಹೊತ್ತು. ಮನೆಯಲ್ಲಿನ ಎಲ್ಲರಿಗೂ - ಆಳುಗಳಿಗೆ ಸಹ ಗಾಢ ನಿದ್ರೆ, ಅಪ್ಪ ಎದ್ದು ಮುಖ ತೊಳೆದು ತಮ್ಮ ಆಫೀಸ್ ರೂಮಿನಲ್ಲಿ ಕಾರ್ಯಮಗ್ನರಾಗಿರುತ್ತಾರೆ. ಸರಸವ್ವ ಚಹಾ ತಂದುಕೊಡುತ್ತಾಳೆ. ಇನ್ನೊಂದು ಕಪ್ಪು ಈಗs ಕೊಡ್ತೀನಿ ? ಆಮಾಲ ತಗೋತೀರಾ ?' ಅಂತಲೋ, 'ಯಾಕೋ ಥಂಡಿ ಬಿಟ್ಟದ, ಸೈಟರ್ ಹಾಕ್ಕೊಳ್ಳಿ' ಅಂತಲೋ ಹೇಳುತ್ತಾಳೆ.
ಅಪರೂಪಕ್ಕೊಮ್ಮೆ ಉಕ್ಕಿನಂಥ ದೇಹದ ಅಪ್ಪನಿಗೂ ಜಡ್ಡು ಬರುವುದುಂಟು. 'ಹೇಗಿದ್ದೀರಿ ?”, “ಔಷಧ ತಗೊಂಡೇನು ?' 'ರೆಸ್ಟ್ ತಗೋಳ್ಳಿ' ಅಂತ ಮುಂಜಾನೆಯೋ ಸಂಜೆಗೋ ಅಂತೂ ತಮಗೆ ಬಿಡುವಾದಾಗ ಒಮ್ಮೆ ಹಣಿಕಿಹಾಕಿ, ಇಷ್ಟನ್ನು ಹೇಳಿ ಬಿಟ್ಟು ಮಾಯವಾಗುತ್ತಾರೆ- ಮಕ್ಕಳು, ಸೊಸೆಯರು, ಹಗಲು-ರಾತ್ರಿ ಅವರಿಗೆ ಔಷಧಿ ಕೊಡುತ್ತ, ಡಾಕ್ಟರನ್ನು ಕರೆಸುತ್ತ, ಪಥ್ಯ ತಯಾರಿಸುತ್ತ, ಬಿಸಿನೀರು ಕೊಡುತ್ತ, ಅದೂ
ಪುಟ:ನಡೆದದ್ದೇ ದಾರಿ.pdf/೨೦೯
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೦೨
ನಡೆದದ್ದೇ ದಾರಿ