ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವೈಲು/ಮಯಾ೯ದೆ

ಇದೂ ಮಾಡುತ್ತ, ಊಟ-ನಿದ್ರಯಿಲ್ಲದೆ ದಿನ ಕಳೆಯುತ್ತಾಳೆ ಸರಸವ್ವ.

     *
     *
     *
     ಮುಂಜಾಡನೆ ಎದ್ದೊಡನೆ ಸ್ನಾನ ಮುಗಿಸಿ ಡ್ರೈವ್ಹರ್ ಗೆ  ಕಾರು ರೆಡಿಯಾಗಿಡಲು

ತಿಳಿಸಿ ಕಮಲಾ ಆಪ್ಪನ ರೂಮಿಗೆ ಬಂದಳು. ಆರಾಮ ಕುಚಿಯಲ್ಲಿ ಪೇಪರೋದುತ್ತ ಕೂತಿದ್ದರು ಆತಿ. ಹೆಜ್ಜೆ ಸಪ್ಪಲಳ ಕೇಳಿ ತಿರುಗಿ ನೋಡಿದವರೇ. "ಓಹೋ ಕಮಲಾ, ಬಾ, ಬಾ, ನಿನ್ನೆ ರಾತ್ರಿ ನಾ ಬರ್ಲಿಕ್ಕೆ ಭಾಳ ಲೇಟಾತವಾ, ನೀವೆಲ್ಲಾ ಮಲಗಿಬಿಟ್ಟಿದ್ರಿ, ಬಾ ಕೂಡು," ಅಂದು, ಆಕೆ ಸಮೀಪಿಸುತ್ತಿದ್ದಂತೆ ಮತ್ತೆ, "ಯಾಕ ಕಮಲಾ, ಸೊರಗೀಯೇನವಾ? ಆರಾಮಿದ್ದೀಯಿಲ್ಲೋ?" -ಆಂದರು.

     ನೂರಾಮೂವತ್ತು ಪೌಂಡು ಭಾರಾದ, ಐದೂವರೆ ಆಡಿ ಎತ್ತರದ ಮಗಳು

ಸೊರಗಿದ ಹಾಗೆ ಕಾಣುವುದು ತಂದೆ-ತಾಯಿಗಲ್ಲದೆ ಬೇರಾರಿಗೆ ಸಾಧ್ಯ- ಆಂದುಕೊಳ್ಳುತ್ತ ನಕ್ಕಳು ಕಮಲಾ. ಆತನ ಪ್ರಶ್ನೆಗೆ ನೇರವಾಗಿ ಉತ್ತರಿಸದೆ ಇನ್ನೂ ಸಮೀಪ ಹೋಗಿ, ಎದುರಿಗಿನ ಮೋಢಾದ ಮೇಲೆ ಆತನಿಗೆ ತೀರ ಹತ್ತರ ಕೂತು, ಆತನ ಎರಡೂ ಕೈಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು, ಆತನ ಕಣ್ಣುಗಳನ್ನು ಸಂಧಿಸಿದಳು. ಆಕೆಗೆ ತಟ್ಟನೆ ತನ್ನ ನಾಲ್ಕು ವರ್ಷದ ಮಗನ ನೆನಪಾಯಿತು.

     ತುಂಬ ಗಲಿಬಿಗೊಂಡಿದ್ದ ಆಪ್ಪ ಮಾತಾಡುವ ವೊದಲೇ ದೃಢಸ್ವರದಲ್ಲಿ

ಆಕೆ ಮಾತಾಡಿದಳು-"ಆಪ್ಪ, ನೀವು ಬರೋ ಶುಕ್ರವಾರ ಲಗ್ನಾ ಮಾಡಿಕೋತಿರಲ್ಲ, ಮಾಡಿಕೊಳ್ರಿ. ಆದರ ಇಲ್ಲೆ ಬ್ಯಾಡ. ತುಳಜಾಪುರಕ್ಕ ಹೋಗಿ ಮಾಡಿಕೊಂಡ ಬರ್ರಿ, ನನಗ ಬಹುಶಃ ಬರ್ಲಿಕ್ಕಾಗ್ಲಿಕ್ಕಿಲ್ಲ. ಆದ್ರೂ ಪ್ರಯತ್ನ ಮಾಡ್ತೀನಿ. ಬರದಿದ್ರ ಕೆತ್ತನಿಸಿಕೊಬ್ಯಾಡ್ರಿ ಹ್ಞಾ. ಉಳದವರದು ಯಾವ್ದೂ ಏನೂ ಮನಸಿಗೆ ಹಚಿಗೋಬ್ಯಾಡ್ರಿ. ನಾ ಇನ್ನ ಬರ್ತೀನಿ-ಮನೀ ಎಲ್ಲಾ ಹಾಂಗಽ ಬಿಟ್ಟ ಬಂದೀನಿ. ನಾ ಬರಲ್ಯಾ? .I wish you the best of luck."

     -ಮಾತಾದುತ್ತಿದ್ದಂತೆ ಆಕೆ ಎದ್ದುನಿಂತಳು. ಆತನೂ. ಆತನ ಕಣ್ನುಗಳಲ್ಲಿ

ಒಂದು ಕ್ಷಣ ಎಲ್ಲಿಲ್ಲದ ಆಶ್ಚರ್ಯ. ಮರುಕ್ಷಣ ಶಾಂತ ಸಮಾಧಾನ.ಕೃತಜ್ಞತತೆ. ಹೌದೋ ಅಲ್ಲವೋ ಅನ್ನುವಂತೆ ಕಣ್ಣೀರು ಸಹ. ಎಂದಿಗೂ ಮಿತಭಾಷಿಯಾದ ಆತ ಸ್ನೇಹದಿಂದ ಮಗಳ ಭುಜದ ಮೇಲೆ ಕೈಯಿರಿಸಿ ಹಾಗೇ ತಲೆಬಾಗಿಳಲ ವರೆಗೂ ಬಂದರು. "ಹೋಗಿ ಬಾ ಕಮಲಾ." ಅಂದರು.

    ಹಿರಿಯಕ್ಕನಿಗಾಗ ಬಹಳ ಆಸೆಯಿಂದ ಕಾಯ್ದು ಅವಳಲ್ಲಿ ವಿಶೇಷ