ಪುಟ:ನಡೆದದ್ದೇ ದಾರಿ.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೭


                     ಕಾಯುತ್ತಲಿದ್ದ ಕರಿಯ.....
                  
              ತಿಮ್ಮಾಪುರ ಒಂದು ತೀರ ಚಿಕ್ಕದಾದ, ನಾಗರಿಕತೆಯ ಇನಿತು ಸೋಂಕೂ
    ಇಲ್ಲದ, ದಟ್ಟದರಿದ್ರ ಹಳ್ಳಿ. ಅತ್ಯಂತ ಸಮೀಪದ ನಗರವಾದ ವಿಜಾಪುರದಿಂದ ಮೂವತ್ತು
    ಮೈಲಿ ದೂರ. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಒಂದು ಸಲ ಊರಿನ ಗೌಡರ
    ಜೊತೆಗೆ ಅಲ್ಲಿಗೆ ಆಗಮಿಸಿದ್ದ ಜಿಲ್ಲೆಯ ಶಾಸಕರು ಹಲವಾರು ಆಶ್ವಾಸನೆಗಳನ್ನಿತ್ತಿದ್ದರು.
    ಊರಿಗೆ ರಸ್ತೆ ಮಾಡಿಸುತ್ತೇವೆ, ಕೊಳವೆ ಬಾವಿ ತೋಡಿಸುತೇವೆ, ವಿದ್ಯುತ್ ದೀಪ ಹಾಕಿಸುತ್ತೇವೆ, ರೈತರಿಗೆ ಕಡಿಮೆ ಬಡ್ಡಿಯ ಮೇಲೆ ಸಾಲ ಕೊಡಿಸುತ್ತೇವೆ, ಇತ್ಯಾದಿ, ಇತ್ಯಾದಿ.
ಅವರ ಭಾಷಣಕ್ಕಿಂತಲೂ ಹೆಚ್ಚು ಜನರ ಗಮನ ಸೆಳೆದಿದ್ದು ತಿಮ್ಮಾಪುರಕ್ಕೆ ಮೊದಲ ಬಾರಿ
ಬಂದಿದ್ದ ಆ ಜೇಪು. ಮುಂದೆ ಅನೇಕ ವಷ೯ಕಾಲ ಆ ಕಡೆ ಯಾವುದೇ ವಾಹನಗಳು ಬಂದಿರಲಿಲ್ಲ. ಭಾಷಣಕಾರರೂ ಹಾಯ್ದಿರಲಿಲ್ಲ. ಖಾದೀಧಾರಿಯಾಗ್ಗಿದ್ದ ಆ ಮನುಷ್ಯ ಕೊಟ್ಟುಹೋಗಿದ್ದ ಆಶ್ವಾಸನೆಗಳೆಲ್ಲ ತಿಮ್ಮಾಪುರದ ಉರಿಬಿಸಿಲಿನಲ್ಲಿ ಕಪ್ಪುಧೂಳಿನಲ್ಲಿ ಕರಗಿ

ಮರೆಯಾಗಿ ಹೋಗಿದ್ದವು. ಊರಿನ ಬಹುಸಂಖ್ಯಾತ ಕೆಳಜಾತಿಯ ಬಡಜನರಿಗೆ ತಮಗೆ ಅನ್ಯಾಯವಾಗಿದೆಯೆಂದಾಗಲೀ ತಾವು ಹಿಂದುಳಿದಿದ್ದೇವೆಂದಾಗಲೀ ಅರಿವಾಗುವ ಸಂಭವವೇ ಇರಲಿಲ್ಲ. ಊರಿನ ಬಹುಪಾಲು ಹೊಲಗದ್ದೆಗಳು ಯ್ಎಂದಿನಿದ್ದಲೂ ಗೌಡರ ಹಾಗೂ ಶಾನುಭೋಗರ ಒಡೆತನದಲ್ಲಿದ್ದವು. ಉಳಿದವರೆಲ್ಲ ಆ ಹೊಲಗಳಲ್ಲಿ ಕೂಿಲಿ ಮಾಡಿಯೋ ಜೀತಮಾಡಿಯೋ ದಿನಗಳೆಯುವುದೇ ತಮ್ಮ ಜೀವನ ಸವ೯ಸ್ವವೆಂದು ನಂಬಿ ಒಂದು ರೀತಿ ನೆಮ್ಮದಿಯಾಗಿದ್ದರು.

               ತಿಮ್ಮಾಪುರಕ್ಕೆ ನಾಯಕರು ಜೀಪಿನಲ್ಲಿ ಬಂದು ಭಾಷಣ ಮಾಡಿದ ಕಾಲಕ್ಕೆ
 ಚಿಗುರು ಮೀಸೆಯ ಹುಡುಗನಾಗಿದ್ದ ಕರಿಯ. ಕರಿಯ ಹುಟ್ಟಾ ಅನಾಥ.ಊರಗೆ ಹಿರಿಯರಾಗಿದ್ದ ಸಂಗನಗೌಡರಲ್ಲಿ ಆತ ತನಗೆ ತಿಳಿವಳಿಕೆ ಬಂದಾಗಿನಿಂದಲೂ ಜೀತದಾಳು. ಹಗಲು-ರಾತ್ರಿ ಅವರು ಹೇಳಿದ ಎಲ್ಲ ಕೆಲಸ ಮಾಡುತ್ತ,ಹಿರಿಯ ಗೌಡತಿ ಎರಡು ಹೊತ್ತು

ಎತ್ತರದ ಜಗಲಿಯ ಮೇಲೆ ನಿಂತು ಪಾತ್ರೆ ಎತ್ತಿ ತನ್ನ ಸಿಲಾವರದ ತಟ್ಟೆಯಲ್ಲಿ ಸುರಿಯುತ್ತಿದ್ದುದನ್ನು ತುಟಿಪಿಟ್ಟೆನ್ನದೆ ತಿಂದು, ಬದುಕುತ್ತಿದ್ದ ಕರಿಯ.ಯಾರು ಎಂದೂ ಅವನನ್ನು ಮಾತನಾಡಿಸಿದುದಿಲ್ಲ.ಕ್ಶೇಮ ವಿಚಾರಿಸಿದುದಿಲ್ಲ.