ಪುಟ:ನಡೆದದ್ದೇ ದಾರಿ.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮ ನಡೆದದ್ದೇ ದಾರಿ

  ಮಳೆ-ಚಳಿ ಬಿಸಿಲೆನ್ನದೆ ಎಲ್ಲ ಋತುಗಳಲ್ಲೂ ಬರಿ ಲಂಗೋಟಿಯುಟ್ಟು ಮನೆ-ಹಟ್ಟಿ-
  ಹೊಲ-ಗುಡ್ಡ ಎಲ್ಲೆಂದರಲ್ಲಿ ಬೇಕಾದ ಕೆಲಸ ಮಾಡುತ್ತಿದ್ದ ಕರಿಯರನ್ನು ಕಂಡರೆ 
  ಗೌಡರಿಗೆ ಏನೋ ಕರುಣೆ, ಅನುಕಂಪ, ಜೀತದಾಳಾಗಿದ್ದರೂ ತನ್ನ ಕಷ್ಟಸಹಿಷ್ಣುತೆ-
  ಪ್ರಾಮಾಣಿಕತೆಯಿಂದಾಗಿ ಗೌಡರ ಆಪ್ತನಾಗಿದ್ದ ಕರಿಯ.ಈ ಕರಿಯನಿಗೆ ಸುಮಾರು
  ಇಪ್ಪತ್ತೇಳು-ಇಪ್ಪತ್ತೆಂಟರ ಪ್ರಾಯವಾದಾಗ ಹತ್ತಿರ-ಹತ್ತಿರ ಆರಡಿ ಎತ್ತರವಾಗಿ 
  ಬೆಳೆದು ಬಿರುಸಾಗಿ, ಹುರಿಯಾಗಿ ಕಾಣುತ್ತಿದ್ದ. ಕಪ್ಪಾಗಿ ಮಿರಿಮಿರಿ ಮಿಂಚುತ್ತಿದ್ದ
  ಶಿಲಾವಿಗ್ರಹದಂತಹ ಆತನ ಮೈಕಟ್ಟು, ಕಾಠೇವಾಡದ ಕುದುರೆಯಂತಹ ಆತನ
  ಚಾಕಚಕ್ಯತೆ.ನೋಡಿದವರ ದೃಷ್ಟಿತಾಗುವಂತಾದವು. ಇಷ್ಟು ವಷ೯ ಆತನ
  ಇರುವಿಕೆಯನ್ನೇ ಗಮನಿಸದ ಜಾತಿಬಾಂಧವರು ಗೌಡರ ಕೃಪಾಛತ್ರದಲ್ಲಿರುವ ಈ
  ದಷ್ಟಪುಷ್ಟ ತರುಣನಿಗೆ ಹೆಣ್ಣು ಕೋಡುವ ಯೋಚನೆ ಮಾಡತೊಡಗಿದರು.ಆದರೆ ಈ
  ಮಧ್ಯೆ ಕರಿಯನ ಬಾಳಿನ ಬೇರನ್ನೇ ಅಳ್ಳಾಡಿಸುವ ಘಟನೆತಯೊಂದು ನಡೆದು 
  ಅದರಿಂದಾಗಿ ಕರಿಯ ಮದುವೆಯ ಯೋಚನೆಯನ್ನೇ ಮರೆತುಬಿಡುವಂತಾಯಿತು.
        ಆ ವಷ೯ದ ಸುಗ್ಗಿ ಮುಗಿದು ಕರಿಯ ಕೊಂಚ ಬಿಡುವಾಗಿದ್ದ ಕಾಲವದು.ಒಂದು
  ಮಧ್ಯಾಹ್ನದ ರಣಗುಡುವ ಬಿಸಿಲಲ್ಲಿ ಹಟ್ಟಿಯನ್ನು ತೊಳೆಯುತ್ತಿದ್ದ ಕರಿಯ ಬೀದಿಯಲ್ಲಿ ಗಲಾಟೆ
  ಕೇಳಿ ಅದೇನೆಂದು ನೋಡಲು ಹೊರಬಂದನು ಆತ್ಯಾಶ್ಚಯ೯ದಿಂದ ಕಣ್ಣು-ಬಾಯಿ ಎರಡೂ
  ತೆರೆದು ನೋಡುತ್ತ ನಿಂತುಬಿಟ್ಟ. ಗೌಡರ ವಾಡೆಯೆದುರು ದೊಡ್ಡದೊಂದು ಕಾರುಗಾಡಿ ಬಂದಿತ್ತು.
  ಹಳ್ಳಿಯ ಜನರೆಲ್ಲ ಅದರ ಸುತ್ತ ನೆರೆದಿದ್ದರು. ಬಂದವರು ಗೌಡರ ಸೋದರ ಸಂಬಂಧಿ ರಾಮನಗೌಡರು.
  ಆತ ಚಿಕ್ಕಂದಿನಲ್ಲೇ ಊರುಬಿಟ್ಟು ಹೋಗಿ ಕಾಲೇಜು ಕಲಿತು ಪುಣೆಯಲ್ಲಿ ದೊಡ್ಡ ಸಾಹೇಬರಾಗಿದ್ದ ಬಗ್ಗೆ ಕರಿಯ
  ಹಲವಾರು ಬಾರಿ ಕೇಳಿದ್ದ. ಅನೇಕ ವಷ೯ಗಳ ನಂತರ ಆತ ಬೆಡಗಿಯಾದ ಹೆಂಡತಿಯೊಂದಿಗೆ, ಬಹು 
  ಸುಂದರಿಯಾದ ಮಗಳೊಂದಿಗೆ ಸಂಗನಗೌಡರನ್ನು ಕಾಣಲು ತಿಮ್ಮಾಪುರಕ್ಕೆ ಬಂದಿದ್ದರು. ಗೌಡರ ಮನೆಯಲ್ಲಿ
  ಸಂಭ್ರಮವೋ ಸಂಭ್ರಮ. ಅವರಿರುವ ತನಕ ಇಡೀ ಹಳ್ಳಿಯಲ್ಲಿ ಹಬ್ಬದವಾತವರಣ. ಕರಿಯನಿಗಂತೂ 
 ನಿಮಿಷವೂ  ಬಿಡುವಿಲ್ಲದ ಹಾಗೆ ಕೆಲಸ. ಹಾಗೆ ಆ ಅಪರೂಪದ ಅತಿಥಿಗಳು ತಿಮ್ಮಾಪುರದಲ್ಲಿ ಎಂಟುದಿನ 
 ಕಳೆದಿದ್ದರು.
     ಅವರು ಹೊರಡುವ ಹಿಂದಿನ ದಿನ ಸಂಜೆ ಎಂದಿನಂತೆ ಕರಿಯ ದನಗಳನ್ನು ಮೇಯಿಸಿಕೊಂಡುಬಂದು ಬಂದು
  ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದಾಗ ಫಕ್ಕನೆಕಾಳಿಹಸು ಇಲ್ಲದ್ದು ಅರಿವಾಯಿತು.ಅಯ್ಯೊಮರವೆ, ಆದು ಹೇಗೆ ಹಸು ಅಲ್ಲೇ
  ಉಳಕೊಂಡಿತೋ, ಎಂದೂ ಹೀಗಾದದ್ದಿಲ್ಲವಲ್ಲ ಸಿವನೇ ಅಂದುಕೊಳ್ಳುತ್ತ ಗೌಡತಿಗೆ ಹೇಳಿ ತಿರುಗಿ ಗುಡ್ಡದ