ಪುಟ:ನಡೆದದ್ದೇ ದಾರಿ.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಸಿವು / ಕಾಯುತ್ತಲಿದ್ದ ಕರಿಯ..... ೨೦೯ ಕಡೆಗೆ ಓಡುತ್ತಲೇ ಹೊರಟ. ಆಗಲೆ ಮಬ್ಬುಗತ್ತಲಾಗಿತ್ತು. ತುಂಬ ಚಿಂತೆಯಿಂದ ಕರಿಯ ಹಸುವನ್ನರಸುತ್ತ ಹೊರಟಾಗ 'ಕರಿಯಾ -' ಅಂತ ಮೆಲುದನಿಯ ಕೂಗು ಕೇಳಿಸಿತು. ಒಂದು ಕ್ಷಣ, ದೆವ್ವವಿದ್ದೀತೇ ಅಂತ ಯೋಚಿಸಿ ಕರಿಯ ವಿಚಲಿತನಾದ. ಆದರೆ ಸ್ವಭಾವತಃ ಧೈರ್ಯಶಾಲಿಯಾಗಿದ್ದ ಆತ ಮರುಕ್ಷಣ ಅಳುಕದೆ ಹೊರಳಿ ನೋಡಿದಾಗ ಆಕೆ ಕಾಣಿಸಿದಳು. ಗೌಡರ ಸೋದರ ಸಂಬಂಧಿ ಪುಣೆಯ ಸಾಹೇಬರ ಮಗಳು-ಕತ್ತಲಲ್ಲಿ ಕರಿಯನ ತೀರ ಸಮೀಪ ಬಂದು ನಿಂತು ಮುಗುಳ್ಳಗುತ್ತಿದ್ದ ಅಪ್ಪರೆ. ಆ ಕೆಂಪು, ಅಂಥ ಮೃದುತೆ, ಆ ದಿವ್ಯವಾದ ಚೆಲುವು-ಕರಿಯನಿಗೆ ಎಚ್ಚರ ತಪ್ಪಿದಂತಾಗಿ ಆತ ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡ. ಏನು ನಡೆಯುತ್ತಿದೆ ಅನ್ನುವುದರ ಅರಿವೇ ಆಗದಷ್ಟು ಭ್ರಾಂತನಾಗಿ ಹೋಗಿದ್ದ ಬಡ ಕರಿಯ. ಅತ್ಯಂತ ಅನಿರೀಕ್ಷಿತವಾಗಿದ್ದ ಆ ಆಘಾತಕ್ಕೆ ಆತನ ಎದೆಬಡಿತ ನಿಂತು ಹೋಗದುದೇ ಒಂದು ಆಶ್ಚರ್ಯ. ಹತ್ತಿಪ್ಪತ್ತು ನಿಮಿಷಗಳ ನಂತರ ಅಪ್ಪರೆ ಸೆರಗು ಕೊಡವಿಕೊಂಡು ಎದ್ದು ಹೋದ ನಂತರವೂ ಬಹಳಷ್ಟು ಹೊತ್ತು ಆರೆಎಚ್ಚರದ ಸ್ಥಿತಿಯಲ್ಲೇ ಇದ್ದ ಕರಿಯ. ರಾತ್ರಿಯನ್ನೆಲ್ಲ ಆತ ಅಲ್ಲೇ ಅಡವಿಯಲ್ಲೇ ಕಳೆದಿದ್ದ. ಮರುದಿನ ಸುಮಾರು ಹೊತ್ತು ಏರಿದ ನಂತರ ಅಳುಕುತ್ತ ಆತ ಹಳ್ಳಿಗೆ ಹಿಂದಿರುಗಿದಾಗ ಗೌಡರ ಅತಿಥಿಗಳು ಹೊರಟು ಹೋಗಿಯಾಗಿತ್ತು. ಉಸ್ಸೆಂದು ಉಸಿರುಬಿಟ್ಟು ಹಿತ್ತಲಲ್ಲಿ ಕುಸಿದ ಕರಿಯನನ್ನು ಕಂಡು, 'ಅದೇನಲಾ ಕರಿಯ, ಆಕಳಾ ಹುಡಕಾಕಂತ ಹೋದಾಂವ ಅತ್ತಾಗ ಸತ್ತೆಲ್ಲೋ ?' ಅಂತ ಗೌಡತಿ ಗದರಿಸಿದಳು. ಆ ಕ್ಷಣಕ್ಕೆ ತಾನು ನಿಜವಾಗಿ ಸತ್ತೇ ಹೋಗಿದ್ದೆನಲ್ಲ ಅನ್ನಿಸಿತು ಕರಿಯನಿಗೆ. ಆ ಘಟನೆಯ ನಂತರ ಅನೇಕ ದಿನ ಕರಿಯನಿಗೆ ಒಂದು ಥರಾ ಮಂಕು ಕವಿದಂತಾಗಿತ್ತು. ಕನಸಿನಲ್ಲೂ ಒಂದೊಂದು ಸಲ ಆ ಅಪ್ಪರೆ ಬಿಗಿದಪ್ಪಿದಂತಾಗಿ ಆತ ಬೆಚ್ಚಿ ಎಚ್ಚರಾಗುತ್ತಿದ್ದ. ಆತನ ನೆಮ್ಮದಿ ಹಾಳಾಗಿ ಹೋಯಿತು. ಆತನ ನಿದ್ರೆ ಒಡೆದ ಕನ್ನಡಿಯಾಯಿತು. ಆತ ದಿನೇದಿನೇ ಸೊರಗುತ್ತ ನಡೆದ. ಹೀಗಿರುತ್ತಿರಲು ಆರೇಳು ತಿಂಗಳುಗಳು ಕಳೆದ ನಂತರ ಒಂದು ದಿನ ಮತ್ತೆ ತಿಮ್ಮಾಪುರದ ಸಂಗನಗೌಡರ ಮನೆಗೆ ಪುಣೆಯ ಕಾರು ಬಂತು. ಈ ಸಲ ರಾಮನಗೌಡರ ಜೊತೆ ಅಪ್ಸರೆಯೊಬ್ಬಳೇ ಬಂದಿದ್ದಳು, ಆದರೆ ಯಾಕೋ ಎಲ್ಲರ ಮುಖದ ಮೇಲೂ ಒಂದು ನಮೂನೆ ಮಂಕು ಕವಿದಿತ್ತು. ಅಪ್ಸರೆಯಂತೂ ಬಂದೊಡನೆ ಆಟ್ಟದ ಮೇಲಿನ ಮೂಲೆಯ ಕೋಣೆ ಸೇರಿದವಳು ತಿರುಗಿ ಯಾರ ಕಣ್ಣಿಗೂ ಬೀಳಲಿಲ್ಲ. ಗೌಡರಿಬ್ಬರೂ ಬಹಳ ಹೊತ್ತು ಗುಸುಗುಸು ಮಾತಾಡಿದರು. ಮರುದಿನ ರಾತ್ರಿಯಾದ ನಂತರ ರಾಮನಗೌಡರೊಬ್ಬರೇ ತಿರುಗಿ ಊರಿಗೆ ಹೋಗಿಬಿಟ್ಟರು. ದೂರದಿಂದ ಎಲ್ಲ