ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಸಿವು/ಕಾಯುತ್ತಲ್ಲಿದ್ದ ಕರಿಯ ೨೧೩

ಅಗೋಚರವಾಗಿ ಸಡಿಲಾಗತೊಡಗಿತು.ಶಾಲೆಗೆ ಹೋಗಿ ಅತ್ತಿತ್ತ ತಿರುಗಾಡಿ ಸಂಜೆ ಮನೆಗೆ ಬಂದಾಗ ಆಕೆಗೆ ಏನೋ ಮುಜುಗರವೆನೆಸಿತ್ತಿತ್ತು.ಗೌಡರ ಮನೆಕೆಲಸವನ್ನು ಮಾಡುವ,ಅವರು ಹಾಕಿದ ಕೂಳು ತಿನ್ನುವ ಕುರುಚಲು ಗಡ್ಡದ ಮುಖದ ಅಪ್ಪನನ್ನು  ಕಂಡರೆ ಅವಳಿಗೆ ತಾತ್ಸಾರವೆನ್ನಿಸತೊಡಗಿತು.ಗೌಡರ ಮಕ್ಕ್ಳೊಂದಿಗೆ ಇತರರಒಂದಿಗೆ ಓಡಾಡುವಾಗ ಇರುತ್ತಿದ್ದ ನೆಮ್ಮದಿ ಮನೆಗೆ ಬಂದೊಡನೆ ಇಲ್ಲವಾಇ ಇಡೀ ವಾತಾವರಣದ ಬ್ಗ್ಗೆ ಅಸಹನೆಯೆನಿಸತೊಡಗಿತು.
 ಆದರೆ ಓದಿನಲ್ಲಿ ಲಕ್ಷ್ಮಿ ತುಂಬಾ ಚುರುಕು.ಯಾವಾಗಲೂ ಕ್ಲಾಸಿಗೆ ಮೊದಲ್ನೇಯವಳಾಗಿರುತ್ತಿದ್ದ ಅವಳ ಬಗ್ಗೆ ಮಾಸ್ತರುಗಳಿಗೆಲ್ಲ ಪ್ರೀತಿ.ದಿನವೂ ಅವಳನ್ನು ಕರೆತರಲು ಸ್ಕೂಲಿಗೆ ಹೋಗುತ್ತಿದ್ದ ಕರಿಯನನ್ನು ಆಗಾಗ ಮಾತಾಡಿಸಿಅವಳ ವರ್ಗದ ಶಿಕ್ಷಕರು ಅನ್ನುತ್ತಿದ್ದುಂಟು:"ನಿನ್ಮ್ಗಳು ಭಾರಿ ಶಾಣ್ಯಾಕಿ ಅದಾಲ ಕರಿಯಪ್ಪ.ಆಕಿನ ಡಾಕ್ಟರ್ ಮಾಡ್ಬೇಕು ಮನೋಡು ನೀನು"ಹಾಗೆಂದು