ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಹಸಿವು/ ಕಾಯುತಲ್ಲಿದ್ದ ಕರಿಯ... ೨೧೭
ಆದರೆ ಲಕ್ಶ್ಮಿ ಸುಜಾತಳೊಂದಿಗೆ ಬಂದವಳು ನೇರ ಗೌಡರ ಮನೆಗೇ ಹೋಗಿ ಅಲ್ಲೇ ಚಹಾ-ತಿಂಡಿ ಬಗೆಹರಿಸಿದಳು. ಮಗಳನ್ನು ಮೆಡಿಕಲ್ ಕಾಲೇಜಿಗೆ ಮುಂಬಯಿಗೆ ಕಳಿಸಿದ್ದ ಗೌಡರ ಮನೆಯವರೀಗ ಸಾಕಷ್ಟು ಆಧುನಿಕ ಮನೋಭಾವದವರಾಗಿದ್ದು ಅಷ್ಟಾಗಿ ಮಡಿಮೈಲಿಗೆ ಆಚರಿಸುತ್ತಿರಲಿಲ್ಲವಾದ್ದರಿಂದ ಲಕ್ಶ್ಮಿ ಸುಜಾತಳ ಜೊತೆ ಅವರ ದೊಡ್ಡ ಮನೆಯ ಹೊರಕೊಠಡಿಯಲ್ಲೇ ರಾತ್ರಿಯೂ ಉಳಿದಳು. ಅವಳ ಊಖವೂ ಅಲ್ಲೇ ಆಯಿತು.ನೆಪಕ್ಕೆ ಒಂದಷ್ಟು ಹೊತ್ತು ಕೂತಿದ್ದಳು. 'ಛೀ, ಧೋತ್ರಾ ಸ್ವಚ್ಛ ಒಗದು ಉತ್ಕೋಬಾರದ? ಎಷ್ಟ ಹೊಲಸಾಗೇದ!' ಅಂದಳು. 'ಇದೇನು, ಕುಡಿಯೋ ನೀರು ಗಡಿಗ್ಯಾಗ ತುಂಬಿಡೋದು ಇನ್ನೂ ಬಿಟ್ಟಿಲ್ಲ? ಅಸಹ್ಯ!' ಅಂದಳು. 'ಇದೆಂಥಾ ಖೋಲಿಯೊಳಗ ಇಷ್ಟ ದಿನ ಆದ್ರೂ ಹಂಗ ಇದ್ದೀ ಒಳ್ಳೆ ಡಂಜನ್ ಇದ್ದಾಂಗದ ಗಾಳಿಲ್ಲ, ಬೆಳಕಿಲ್ಲ, ಉಸಿರು ಕಟ್ಟಿಧಾಂಗ ಆಗತದ,' ಅಂದಳು. ಅಂದವಳು ಎದ್ದೇ ಬಿಟ್ಟಳ್ಳು ' ಸೂಟ್ಯಾಗ ಮುಂದಿನ ಅಭ್ಯಾಸ ಮೂಡೂದದ. ನಾಳೇ ಹೋಗ್ಬೇಕು,' ಅಂದಳೂ. ಅಂದವಳು ಮರುದಿನ ತಿರುಗಿ ಹೊಗೇಬಿಟ್ಟಳು. ಒಂದೂವರೆ ವರ್ಷ ಬಿಟ್ಟು ಊರಿಗೆ ಬಂದಿದ್ದ ಮಗಳು 'ಹೇಗಿದ್ದೀ ಅಪ್ಪಾ?' ಅಂತ ಕೇಳುವುದಂತೂ ದೂರವೇ ಉಳಿಯಿತು. ಒಂದು ಸಲವೂ ಬಾಯಿತುಂಬ ತನ್ನನ್ನು 'ಅಪ್ಪಾ' ಅಂತಲೂ ಕರೆಯಲಿಲ್ಲವಲ್ಲ ಅಂತ ಕರಿಯನ ಮನಸ್ಸು ಮುದುಡಿತು. ಮಂಕಾಗಿ ಸುಂದಾಗಿ ಹೊದೆದು ಮಲಗಿದ ಕರಿಯ ಎರಡು ದಿನ ಯಾತಕ್ಕೂ ಮೇಲೇಳಲೇ ಇಲ್ಲ. ******** ಮುಂದಿನ ನಾಲ್ಕಾರು ವರ್ಷಗಳು ಕರಿಯನ ಪಾಲಿಗೆ ಬಹು ಕಹಿಯಾಗಿ ಭಾರವಾಗಿ ಕಳೆದವು.ಆ ದಿನಗಳು ಆತ ಒಂದು ತರದ ನಿರಾಶೆಯಲ್ಲಿ, ನೀರಿಕ್ಷೆಯಲ್ಲಿ, ಮಾತುಬಾರದ ಉದ್ವೇಗದಲ್ಲಿ, ಮೂಕವಾದ ಸಂಕಟದಲ್ಲಿ ಕಳೆದ. ಮಗಳು ಕೊನೆಗೊಮ್ಮೆ ಡಾಕ್ಟರಾದದ್ದು ತಿಳಿದಾಗ ಆತನಿಗೆ ವಿಚಿತ್ರವೆನಿಸುವಂತೆ ಆತನಿಗೆ ಅಷ್ಟೊಂದು ಸಂತೋಷವೇನೂ ಆಗಲಿಲ್ಲ. ಬದಲಿಗೆ, ಬರಲಿರುವ ಇನ್ನೆಂಥ ಆಘಾತಕ್ಕೆ ಇದು ಸೂಚನೆಯೇ ಅನಿಸಿ ಆತನ ಪಿತೃಹೃದಯ ವಿಹ್ವಲವಾಯಿತು. ಆತ ಕಾತರದಿಂದ ನಿರೀಕ್ಷಿಸಿದಂತೆ ಅಂಥದೊಂದು ಅಂತಿಮ ಅಘಾತದ ದಿನವೂ ಬಂದಿತು. ಬಹಳ ಗಡಿಬಿಡಿಯಿಂದ ಮುಂಬಯಿಯಿಂದ ಬಂದಿಳಿದ ಲಕ್ಶ್ಮಿ ತಂದೆಯ ಎದೆಯೊಡೆಯುವ ಸುದ್ದಿಯನ್ನೆ ಹೇಳಿದಳು; ಹೆಚ್ಚಿನ ಶಿಕ್ಷಣಕ್ಕಾಗಿ ಆಕೆ ಇಂಗ್ಲಂಡಿಗೆ ಹೋಗಲಿದ್ದಳ್ಳು . ಎಲ್ಲ ವ್ಯವಸ್ಥೆಯೂ ಆಗಿತ್ತು ತಿರುಗಿ ಬರುವುದು? ಅದು ನಿಶ್ಚಿತವಿರಲಿಲ್ಲ.