ಪುಟ:ನಡೆದದ್ದೇ ದಾರಿ.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮ ನಡೆದದ್ದೇ ದಾರಿ

                ಗೌಡರು ಸಂಭ್ರಮಪಟ್ಟರು. ಅವಳ ಹಳೆಯ ಸ್ನೇಹಿತರು - ಪ್ರೊಫೆಸರುಗಳು

ಅಭಿನಂದಿಸಿದರು. ಅವಳಿಗೆ ದಿನವೂ ಬೀಳ್ಕೊಡಿಗೆಯ ಔತಣಗಳನ್ನು ಏರ್ಪಡಿಸಿದರು.

                 ಕರಿಯನ  ಯೋಚನಾಶಕ್ತಿ  ಹಾಗೂ   ವಾಕ್  ಶಕ್ತಿಗಳೆರಡೂ    ಒಮ್ಮೆಲೇ 

ಲೋಪವಗಿದ್ದವು. ಮಗಳನ್ನು ಕಣ್ತುಂಬ ನೋಡುವ ಆತನ ಆಸೆಯೂ ಪೂರೈಸಲಿಲ್ಲ. ಯಾಕೆಂದರೆ ಅವಳು ತುಂಬ ಅವಸರದಲ್ಲಿದ್ದಳು. ಸದ್ಯದಲ್ಲೇ ಅವಳ ವಿಮಾನ ಮುಂಬಯಿಯಿಂದ ಹೊರಡುವುದಿತ್ತು. ಬಂದಷ್ಟೇ ಗಡಿಬಿದಡಿಯಿಂದ ನಾಲ್ಕಾರು ದಿನಗಳಲ್ಲಿ ಅವಳು ತಿರುಗಿ ಹೋಗಿಬಿಟ್ಟಳು. ' ಹೋಗ್ತೀನಿ',ಅಂದಿದ್ದಳು ಹೋಗುವಾಗ. 'ಹೋಗಿ ಬರ್ತೀನಿ ಅಪ್ಪ', ಅನ್ನಲಿಲ್ಲ.

           ಕರಿಯನ ಜೀವನ ಒಮ್ಮೆಲೆ ಶೂನ್ಯವಾಯಿತು. ತನ್ನ ಮುದ್ದು ಮಗಳು ದೊಡ್ದ
ಡಾಕ್ಟರಾಗುತ್ತಾಳೆ.   ತಮ್ಮೂರಿನಲ್ಲೇ   ದವಾಖಾನೆ   ತೆರೆಯುತ್ತಾ ಳೆ.   ಬಡವರ   ಸೇವೆ 
ಮಾಡುತ್ತಾಳೆ.   ಎಲ್ಲ ರೂ   ಆಕೆಯನ್ನು    ಹಾಡಿ   ಹರಸುತ್ತಾ ರೆ.      ಅವಳಿಗೊಂದು

ಲಗ್ನಮಾಡಿ ಅವಳ ಮಕ್ಕಳನ್ನು ಆಡಿಸುತ್ತ ಮುಪ್ಪಿನ ಕಾಲವನ್ನು ತಾನು ಆರಾಮವಾಗಿ ಕಳೆಯಬಹುದು...... ಹೌದು, ಹಾಗೆಂದು ಕರಿಯ ಕನಸು ಕಂಡಿದ್ದ. ಆ ಕನಸುಗಳು ನನಸಾಗುವ ಯಾವ ಸಾಧ್ಯ ತೆಯೂ ಈಗ ಉಳಿದಿರಲಿಲ್ಲ. ಇನ್ನು ವಿಜಾಪುರದಲ್ಲಿ ರುವುದರಲ್ಲಿ ಆತನಿಗೇನು ಸೊಗಸಿರಲಿಲ್ಲ. ಅರ್ಥವಿರಲಿಲ್ಲ. ತಾನು ಹುಟ್ಟಿ ಬೆಳೆದ ಹಳ್ಳಿಗೇ ಹೋಗಿ ಅಲ್ಲಿದ್ದು ಸಾಯೋಣವೆಂದುಕೊಂಡು ಕರಿಯ ತಿಮ್ಮಾಪುರಕ್ಕೆ ಮರಳಿದ. ಲಕ್ಶ್ಮಿ ಆತನಿಗೆಂದೂ ಪತ್ರ ಬರೆಯಲಿಲ್ಲ. ಆಗೀಗ ಒಂದಷ್ಟು ಹಣ ಕಳುದಹಿಸುತ್ತಿದ್ದಳಷ್ಟೆ. ಆದರೆ ಕರಿಯನಿಗೀಗ ಹಣದ ಅವಶ್ಯಕತೆ ಇರಲಿಲ್ಲ. ಯಾಕೆಂದರೆ ಆತನ ಬಾಳಿನಲ್ಲೀಗ ಬೇಕುಗಳೇ ಇರಲಿಲ್ಲ. ಪ್ರತಿ ಬೆಳಗೂ ಆತನ ಪಾಲಿಗೆ ಮತ್ತೊಂದು ಕತ್ತಲೆಯ ರಾತ್ರಿಯ ಪ್ರಾರಂಭವಾಗಿತ್ತು. ಹಗಲು-ರಾತ್ರಿ, ಊಟ-

ಉಪವಸ,   ಮಾತು-ಮೌನ,    ಸುಖ- ದುಃಖ  ಈ  ಎಲ್ಲದರಲ್ಲಿ  ಯಾವ   ಅಂತರವೂ

ಆತನಿಗೀಗ ಕಾಣುತ್ತಿರಲಿಲ್ಲ.

                       ಹಾಗೆ    ವರ್ಷ   ಕಳೆದಾಗ   ಒಂದು  ಸಲ   ವಿಜಾಪುರದಿಂದ    ಬಂದ

ಗೌಡರು ಆತನನ್ನು ಕರೆಸಿ ಹೆಳಿದರು, ' ಕರಿಯಾ, ಮೊನ್ನೆ ನಿನ್ಮಗಳು ವಿಲಾಯ್ತಿಯಿಂದ ಬಂದಿದ್ಳು. ಕೆಲಸ ಭಾಳ ಇತಂತ ಎರಡೇ ದಿನ ಇದ್ಳು. ತಿಮ್ಮಾಪುರಕ್ಕ ಬರ್ಲಿಕ್ಕಾಗ್ಲಿಲ್ಲ. ಆರಾಮದಾಳು. ನೀಯೇನ ಚಿಂತೀ ಮಾಡಬ್ಯಾಡ'.

                  ಕರಿಯ ಇಷ್ಟುದಿನ ಭಾವಿಸಿದ್ದಂತೆ ಆತನ ಒಳಗು ಸತ್ತಿರಲಿಲ್ಲ. ಯಾಕೆಂದರೆ

ಗೌಡರು ಹೇಳಿದ್ದು ಕೇಳಿದಾಗ ಆತನಿಗೆ ವಿಪರೀತ ದುಃಖವಾಯಿತು. ಆತನ ಅಂಕೆ ಮೀರಿ ಕಣ್ಣುಗಳು ತುಂಬಿಬಂದವು. ಗೌಡರು ಸಂತಯಿಸುವ ಧ್ವನಿಯಲ್ಲಿ ಹೇಳಿದರು.