ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨೦ ನಡೆದದ್ದೇ ದಾರಿ ತಿರುಗಿ ಹೋದಳು ಲಕ್ಷ್ಮಿಗೆ ತೀರ ಚಿಕ್ಕವಳಾಗಿದ್ದಾಗಿನ ದಿನಗಳಿಂದಲೇ ಇಮಾಮ್‌ ಬೀಯ ನೆನಪು ಹಸಿರಾಗಿದೆ. ಲಕ್ಷ್ಮಿ ಹುಟ್ಟುವ ಮೊದಲೇ, ಅವಳ ಅಮ್ಮ ಮದುವೆಯಾಗಿ ಈ ಮನೆಗೆ ಬಂದಾಗಿನಿಂದಲೂ, ಇಮಾಮ್‌ಬೀ ಈ ಮನೆಯಲ್ಲಿ ಕಸ-ಮುಸುರೆ-ಬಟ್ಟೆ ಒಗೆಯುವುದು-ಕಾಳುಕಡ್ಡಿ ಹಸನು ಮಾಡುವುದು ಇತ್ಯಾದಿ ಎಲ್ಲ ಮೇಲೆಲಸ ಮಾಡುತ್ತ, ಈ ಮನೆಯಲ್ಲಿ ಕೆಲಸದವಳಾಗಿರದೆ ಮನೆಯವಳೇ ಆಗಿ ಎಲ್ಲರಿಗೂ ಆಪ್ತಳಾಗಿದ್ದಾಳೆ. ಲಕ್ಷ್ಮಿ ನರ್ಸರಿ ಸ್ಕೂಲಿಗೆ ಹೋಗುತ್ತಿದ್ದಾಗ ದಿನಾ ಅವಳನ್ನು ಎತ್ತಿಕೊಂಡು ಸ್ಕೂಲಿಗೆ ಒಯ್ಯುವುದು- ತಿರುಗಿ ಕರೆತರುವುದು ಇಮಾಮ್ ಬೀಯ ಕೆಲಸವೇ ಆಗಿತ್ತು. ಎಷ್ಟೋ ಸಲ ಅಪ್ಪ-ಅಮ್ಮ ಜಗಳವಾಡಿದಾಗ ಅಪ್ಪ ಹೊರಗೆ ಹೋದನಂತರ ಅಮ್ಮ ದೂರು ಹೇಳಿಕೊಂಡು ಆತ್ತು ಸಮಾಧಾನ ಹೊಂದುತ್ತಿದ್ದುದು ಇಮಾಮ್‌ಬೀಯ ಎದುರಿಗೇ. ಅಮ್ಮನಿಗೆ ಮೂರನೆಯ ಹೆರಿಗೆಯಾದಾಗ ಮಲೇರಿಯಾ ಜ್ವರ ಬಂದು ಅವಳ ಪರಿಸ್ಥಿತಿ ತೀರ ಗಂಭೀರವಿದ್ದಾಗ ಹಗಲು-ರಾತ್ರಿ ಅವಳ ಹಾಸಿಗೆಯ ಬದಿ ಕೂತು ಶುಕ್ರೂಷೆ ಮಾಡಿದಾಕೆ ಇಮಾಮ್‌ಬೀಯೇ. ಹೊಲ ಮಾರಿದ ದುಡ್ಡಿನಲ್ಲಿ ಅಪ್ಪ ಅತ್ಯುತ್ಸಾಹದಿಂದ ನಗರದಲ್ಲಿ ಹೊಸ ಮನೆ ಕಟ್ಟಿಸುವಾಗ ತಿಂಗಳುಗಟ್ಟಲೆ ಕಬ್ಬಿಣ-ಸಿಮೆಂಟು-ಕಲ್ಲು ಕಾಯ್ದು, ಆಳುಗಳ ಉಸ್ತುವಾರಿ ಮಾಡಿ, ಛಾವಣಿಗೆ ನೀರು ಹೊಡೆದದ್ದು ಕೂಡ ಈ ಇಮಾಮ್‌ಬೀ. ಹೀಗೆಲ್ಲ ಆಗಿ ಆ ಮನೆಯ ಹಿರಿಯರುಕಿರಿಯರು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದವು ಇಮಾಮ್‌ಬೀಯ ಜೀವನ, ಆಕೆಯ ಸುಖ-ದುಃಖಗಳು. ಹಾಗಾಗಿ ಆ ಮನೆಯವರಿಗೆಲ್ಲ ಇಮಾಮ್‌ಬೀಯ ಬಗ್ಗೆ ತುಂಬ ಅನುಕಂಪ. ತೊಟ್ಟಿಲಿಗೇ ಬಾಸಿಂಗ ಕಟ್ಟಿಸಿಕೊಂಡಿದ್ದ ಇಮಾಮ್‌ಬೀ ದೊಡ್ಡವಳಾಗಿ ಗಂಡನ ಮನೆಗೆ ಬಾಳುವೆ ಮಾಡಲು ಬಂದಾಗ ಅವಳಿಗೆ ಹದಿನಾಲ್ಕು ವರ್ಷವಂತೆ. ೧೫ ನೇ ವರ್ಷಕ್ಕೆ ಅವಳಿಗೊಬ್ಬ ಮಗಳು ಹುಟ್ಟಿದಳಂತೆ. ಅದೇ ವರ್ಷವೇ ನಾಡನ್ನೆಲ್ಲಾ ನಡುಗಿಸಿದ ಪ್ಲೇಗಿಗೆ ತುತ್ತಾಗಿ ಅವಳ ಗಂಡ-ಅತ್ತೆ-ಮಾವ ಎಲ್ಲ ಸತ್ತು ಹೋದರಂತೆ. ಅವರಿವರ ಮನೆ ಕೂಲಿ-ನಾಲಿ ಮಾಡಿ ಮಗಳನ್ನು ಬೆಳೆಸಿ ಸೋದರಿಕೆಯಲ್ಲೇ ಮದುವೆ ಮಾಡಿಕೊಟ್ಟಳು ಇಮಾಮ್‌ಬೀ. ಆ ಮಗಳು ಹದಿನಾರು-ಹದಿನೇಳು ವರ್ಷಕ್ಕೆ ಒಂದು