ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಸಿವು / ತಿರುಗಿ ಹೋದಳು ೨೨೩ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾಯ್ದೆನೆ ? ಅಯ್ಯೋ, ಗಿಳಿ ಸಾಕಿ ಗಿಡುಗನಿಗೆ ಕೊಟ್ಟಂತಾಯಿತಲ್ಲ..... ಪಾಪ, ಲಗ್ನವಾಗಿ ನಂತರದ ಹದಿನೈದಿಪ್ಪತ್ತು ದಿನಗಳಲ್ಲಿ ಹುಂಬ ಗಂಡನ ಕೈಯಲ್ಲಿ ಪೂರಾ ನಲುಗಿ ಹೋಗಿದ್ದ ಹಮೀದಾ ಅಳುತ್ತಳುತ್ತ ಹೇಳಿದಳು, 'ನನಗೇನೂ ತಿಳೀಲಿಲ್ಲ ಅಮ್ಮಿಜಾನ್, ಆಪಾಜಾನ್ ಎಳಕೊಂಡು ಬಂದು ಕೂಡಿಸಿದ್ರು. ಹೂ ಅನ್ನು ಅಂದ್ರು. ಅಮ್ಮಿಜಾನ್ ಬಗ್ಗೆ ಅಂದೆ. ಅಮ್ಮಿಜಾನ್‌ನೇ ಹೇಳಿಕಳಿಸಿದ್ದು, ಹೂ ಅನ್ನು ಅಂದ್ರು. ಅಂದೆ. ನನಗಿಷ್ಟು ಜಹರ ತಂದು ಕೊಟ್ಟುಬಿಡು ಅಮ್ಮಿಜಾನ್, ನಾ ಸತ್ತೋಗ್ರೀನಿ...' ಮುದುಕಿಯ ಎದೆ ಕರಗಿತು. ಮೊಮ್ಮಗಳನ್ನು ತಬ್ಬಿಕೊಂಡು 'ಅಲ್ಲಾ ನಮ್ಮಿಬ್ರಿಗೂ ಧಗಾ ಮಾಡಿದ್ದಲ್ಲೇ' ಅಂತ ಗೊಳೋ ಎಂದು ಅತ್ತಳು. ಆತ್ತು ಸುಮ್ಮನಾದಳು. ಇನ್ನೇನು ಮಾಡುವುದು ? ಆದರೆ ಅವಳ ಸಿಟ್ಟು ಆರಿರಲಿಲ್ಲ. ಮೊಮ್ಮಗಳನ್ನು ಗಂಡನ ಕೂಡ ಕಳಿಸುವುದಿಲ್ಲ, ಅಂತ ತಿರುಗಿ ಹುಬ್ಬಳ್ಳಿಗೇ ಕರಕೊಂಡು ಬಂದು ಬಿಟ್ಟಿದ್ದಳು. - ಲಕ್ಷ್ಮೀಯ ಆಮ್ಮ-ಅಪ್ಪ ಅಯ್ಯೋ ಪಾಪ ಅಂದರು, ಹೀಗಾಗಬಾರದಿತ್ತು ಅಂದರು. ಆದರೆ ಆಗಿ ಹೋದ ಮೇಲೆ ಏನು ಮಾಡುವುದು, ಗಂಡನ ಮನೆಗೆ ಅವಳನ್ನು ಕಳಿಸುವುದೇ ಯೋಗ್ಯ ಅಂದರು. ನೆರೆಹೊರೆಯ ಹಿತೈಷಿಗಳೂ ಅದನ್ನೇ ಅಂದರು. ಇಷ್ಟೊತ್ತಿಗೆ ಇಮಾಮ್‌ಬೀಯ ಸಿಟ್ಟು ಇಳಿದು ವಿವೇಕೋದಯವಾಗಿದ್ದರಿಂದ ಆಕೆ ಗೌಸನನ್ನು ಕಳಿಸಿಕೊಡುವಂತೆ ಹುಸೇನಸಾಬನಿಗೆ ಕಾಗದ ಬರೆಸಿ ಹಾಕಿದಳು. ಮೊಮ್ಮಗಳನ್ನು ಲಖನೌಗೆ ಕಳಿಸಲು ತಯಾರಿ ನಡೆಸಿದಳು. ಇನ್ನೂ ಬೆಳಗಾವಿಯಲ್ಲೇ ಇದ್ದ ಗೌಸ ಕಾಗದ ಸಿಕ್ಕೊಡನೆ ಓಡಿ ಬಂದ. ಹೊಸ ಹೆಂಡತಿಯ ಕೂಡ ತಿಂಗಳೊಪ್ಪತ್ತು ಅತ್ತೆಯ ಮನೆಯಲ್ಲಿದ್ದು ಮಜಾ ಮಾಡಿದ. ಮುಂದೆ ವ್ಯಾಪಾರಕ್ಕಾಗಿ ಮುಂಬೈ-ಪುಣೆ ಕಡೆಗೆ ಹೋಗಬೇಕೆಂದೂ, ನಂತರ ಲಖನೌಗೆ ಹೋಗಿ ಎಲ್ಲ ವ್ಯವಸ್ಥೆ ಮಾಡಿ ತಿರುಗಿ ಬಂದು ಹೆಂಡತಿಯನ್ನು ಕರೆದೊಯ್ಯುವೆನೆಂದೂ ಹೇಳಿ ಒಂದು ದಿನ ಸೂಟ್‌ಕೇಸ್ ಹೊತ್ತು ನಡೆದುಬಿಟ್ಟ. ಮುಂದೆ ಆರು ತಿಂಗಳಾದರೂ ಅವನ ಸುದ್ದಿಯೇ ಇಲ್ಲ. ಇಮಾಮ್ ಬೀ ಕಂಗಾಲಾಗಿ ಬೆಳಗಾವಿಗೆ ಹೋಗಿ ಹುಸೇನಸಾಬನನ್ನು ತರಾಟೆಗೆ ತೆಗೆದುಕೊಂಡಳು. ಗೌಸ ತನ್ನ ಬಹಳ ವರ್ಷಗಳ ಮಿತ್ರ, ಲಖನೌದಲ್ಲಿದ್ದುದು ನಿಜ, ಆದರೆ ಆತನ ವಿಳಾಸ ತನಗೂ ಗೊತ್ತಿಲ್ಲ, ಆದರೆ ಗಾಬರಿಯಾಗುವ ಕಾರಣವಿಲ್ಲ, ಆತ ಇವತ್ತಲ್ಲ ನಾಳೆ ತಿರುಗಿ ಬಂದೇ ಬರುತ್ತಾನೆ, ಎಂದೆಲ್ಲ ಅಕ್ಕನನ್ನು ಸಂತೈಸಿದ ಹುಸೇನಸಾಬ. ಇಮಾಮ್‌ಬೀ ಸಪ್ಪೆ ಮುಖ ಹಾಕಿಕೊಂಡು ಹುಬ್ಬಳ್ಳಿಗೆ ತಿರುಗಿ ಬಂದಳು. ಹೇಳಿದಂತೆ ಮಹಮ್ಮದಗೌಸ ತಿರುಗಿ ಬಂದೇ ಬಂದ. ಆದರೆ ಅದು ಮತ್ತೆ