ಪುಟ:ನಡೆದದ್ದೇ ದಾರಿ.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ನಡೆದದ್ಧೇ ದಾರಿ

ಆರು ತಿಂಗಳು.ಆಂದರೆ ಆತ ಮದುವೆಯಾಗಿ ಹೋಗಿ ಒಂದು ವರ್ಷ ಕಳೆದ ನಂತರ. ಆ ಹೊತ್ತಿಗೆ ಹಮೀದಾಬಾನು ಮೂರುತಿಂಗಳ ಹೆಣ್ಣು ಮಗುವಿನ ತಾಯಿಯಾಗಿದ್ದಳು. ಗೌಸ ಹೆಂಡತಿ-ಮಗುವಿಗೆ ಸೀರೆ-ಬಟ್ಟೆ,ಸಿಹಿತಿಂಡಿ ತಂದ.ಇಮಾಮ್ಬೀಗೆ ಒಂದು ಹೊದೆಯುವ ಕಂಬಳಿ ತಂದ.ಮತ್ತೆ ಒಂದು ತಿಂಗಳ ಮಜವಾಗಿದ್ದ.ನಂತರ ನಾಲ್ಕೇ ದಿನಗಳಲ್ಲಿ ಬೆಳಗಾವಿಗೆ ಹೋಗಿ ತಿರುಗಿ ಬರುವೆನೆಂದೂ ಆಗ ಹೆಂಡತಿ ಮಗುವನ್ನು ಕರೆದೊಯ್ಯುವೆನೆಂದದೂ ಹೇಳಿ ಮುದುಕಿಯ ಕೈಯಲ್ಲಿ ಐವತ್ತು ರೂಪಾಯಿ ಹಾಕಿ ಮತ್ತೆ ಹೋಗಿಬಿಟ್ಟ.

   ಮುದುಕಿ-ಮೊಮ್ಮಗಳು ಕಾಯ್ದುಕೂತರು.ಮಗು ಬೆಳೆಯುತ್ತಿತ್ತು. ವಯಸ್ಸಾಯಿತೆಂದು ಕೆಲಸ ನಿಲ್ಲಿಸಿದ್ದ

ಇಮಾಮ್ಬೀ ಉದರ ನಿರ್ವಹಣೆಗಾಗಿ ಮತ್ತೆ ಕೆಲಸ ಹುಡಿಕಿಕೊಂಡು ಹೋಗಬೇಕಾಯಿತು. ಪ್ಯಾಸೆಂಜರ ಟ್ರೇನುಗಳಲ್ಲಿ ಸಮೀಪದ ಕಾಡುಗಳಿದ್ದ ಊರುಗಳಿಗೆ ಹೋಗಿ ಕಳವಿನಿಂದ ಕಟ್ಟಿಗೆಯ ಹೊರ ತಂದು ಮಾರುವುದು ಅವಳ ನಿತ್ಯ ಕಸುಬಾಯಿತು.ಇಡೀ ದಿನ ದುಡಿದದ್ದಕ್ಕೆ ಸಿಗುವ ಪ್ರತಿಫಲ ಒಂದೂವರೆ- ಎರಡು ರೂಪಾಯಿ,ಬಹಳವೆಂದರೆ ಮೂರು ರೂಪಾಯಿ. ಅಷ್ಟರಲ್ಲಿ ಹಿಟ್ಟು ಬೇಯಿಸಿ ಅಜ್ಜಿ ಮೊಮ್ಮಗಳಿಬ್ಬರೂ ಅರೆಹೊಟ್ಟೆ ಉಂಡು ಲಖನೌದ ಕಡೆಗೆ ಕಣ್ಣುನೆಟ್ಟು ಹೇಗೋ ದಿನ ನುಕುತ್ತಿದ್ದರು.

   ಮರುವರ್ಷ ಸುಮಾರು ಅದೇ ಸೀಝನ್ನಿಗೆ ಗೌಸ ಮತ್ತೆ ಬಂದ. ಆಗಲೆ ಹುಟ್ಟಿ ಮೂರು ತಿಂಗಳಾಗಿದ್ದ 

ಎರಡೆನೆಯ ಮಗುವನ್ನು ಮುದ್ದಿಸಿ ತಾನು ತಂದಿದ್ದ ಜರಿಯ ಅಂಗಿ ತೊಡಿಸಿದ. ಮತ್ತೆ ತಿಂಗಳೂಪ್ಪತ್ತು ಮಜವಾಗಿದ್ದ. ಸಾಲಸೋಲ ಮಾಡಿ ಅಳಿಯನಿಗೆ ಚಪಾತಿ,ಸಿಹಿಸಜ್ಜಿಗೆ,ಬಿರಿಯಾನಿ,ಮೀನಿನಸಾರು ಎಲ್ಲ ಮಡಿದಳು ಇಮಾಮ್ಬೀ. ಆದರೆ ಆತ ಹೊರಟು ನಿಂತಾಗ ಮಾತ್ರ ಖಟ್ಟಿಗೆ ಹಚ್ಚಿ ಕೇಳೆದಳು ಹೆಂಡತಿಯನ್ನೇಕೆ ಕರೆದೊಯ್ಯುತ್ತಿಲ್ಲ ಅಂತ. ಮೊದಲು ಹಾರಿಕೆಯ ಉತ್ತರ ಕೊಟ್ಟು ತಪ್ಪಿಸಿಕೊಳ್ಳಲು ನೋಡಿದ ಗೌಸ ಕೊನೆಗೆ ನಿರ್ವಾಹವಿಲ್ಲದೆ ಸತ್ಯ ಹೇಳಿದ : ಲಕೌನದಲ್ಲಿ ಆತನ ಮೊದಲ ಹೆಂಡತಿ,ಅಕೆಯ ಒಂಬತ್ತು ಮಕ್ಕಳು ಇದ್ದಾರೆ. ಎರಡನೆಯ ಹೆಂಡತಿಯನ್ನು ಆ ಮನೆಗೆ ಕರೆತಂದರೆ ಆತನನ್ನೂ ಆ ಹೆಂಡತಿಯನ್ನೂ ಕೂಡಿಯೇ ಕಡಿದು ಹಾಕುವೆವೆಂದು ಆಕೆಯ ಅಣ್ಣಂದಿರು ಹೇಳಿದ್ದಾರೆ.ಅಂತೆಯೇ ಅನಕಾ ಹಮೀದಾ ಇಲ್ಲೇ ಇರಲಿ. ತಾನೇ ಬಂದು ಹೋಗಿ ಮಾಡುತ್ತೇನೆ. ಮುಂದೆ ಎಲ್ಲ ಪರಿಸ್ಥಿತಿ ಶಾಂತವಾಗಿ ಅನುಕುಲವಾದಾಗ ಕರೆದೊಯ್ಯುತ್ತೇನೆ.ಖರ್ಚಿಗೆ ಹಣ ಬೇಕಲ್ಲವೆ,ಆಗಲಿ,ಕೊಟ್ಟು ಕಳಿಸುತ್ತೇನೆ.

    ಇಮಾಮ್ಬೀ ಮತ್ತೆ ರಂಪ ಮಾಡಿದಳು.ಆತನ ಕುಲಕೋಟಿ ಉದ್ಧಾರ