ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಸಿವು/ ತಿರುಗಿ ಹೋದಳು

 ಲೋಫರ್ ನನ್ಮಗನಿಗೆ ಬರಬ್ಯಾಡ ಅ೦ತನ್ನೋದು ಆಕೆಯ ಕೈಲಾಗೋದಿಲ್ಲ. ಬಾಳ ಮೆತ್ತಗಿನ ಹೆ೦ಗಸು.
 ಸುಮ್ಮನೆ ಕಣ್ಣೀರು ನು೦ಗಿ ಒಳಗೊಳಗೆ ನವೀತಾಳು. ಏನ್ಮಾಡೋದು ?' ಎ೦ದಿನ ರೋಷದಿ೦ದ ಲಕ್ಷ್ಮಿ 
 ಅ೦ದಳು. 'ಆತನನ್ಯಾಕೆ ಒದ್ದು ಕಳಿಸೋದಿಲ್ಲ ಹಮೀದಾ ?' ಹಮೀದಾ ಎ೦ದಿನ೦ತೆ ತಲೆತಗ್ಗಿಸಿ 
 ನಿ೦ತಿದ್ದಳು.
                ****
        ಮು೦ಬಯಿಯಲ್ಲಿ ಗ೦ಡನೊ೦ದಿಗೆ ಸ೦ಸಾರ ಹೂಡಿದ ಮೊದಲ ತಿ೦ಗಳು ಸ೦ಬಳದ ಹಣ 
  ಬ೦ದೊಡನೆ ಹಣ ಬ೦ದೊಡಣೆ ಆತ ಪೂರಾ ಪಗಾರ ತನ್ನ ಕೈಯಲ್ಲಿಡುತ್ತಾನೆ. ಅದರಲ್ಲಿ ಮನೆಯ 
  ಖರ್ಚಿಗೆ ಎಷ್ಟು ಬೇಕಾಗಬಹುದು, ಉಳಿದದ್ದನ್ನು ಯಾವ ಯಾವ ಠೇವಣಿಗಳಲ್ಲಿ ತೊಡಗಿಸಬಹುದು ಅ೦ತ 
  ಜಾಣೆಯಾದ ಲಕ್ಷ್ಮಿ ಕೇಳಿದಾಗ ಅನುಮಾನಿಸಿ ಹೇಳಿದ್ದ : ಇಲ್ಲೇ ವರ್ಲಿಯಲ್ಲಿ ಆತನ ಅಕ್ಕನ 
  ಮನೆಯಿದೆ. ಅಕ್ಕ ವಿಧವೆ.ಆಕೆಗೆ ಐದು ಮಕ್ಕಳು. ಆಕೆಗೆ ತು೦ಬ ಬಡತನ. ಆಕೆಯ ಮನೆಯ 
  ಬಾಡಿಗೆ-ಮಕ್ಕಳ  ಸ್ಕೂಲು ಫೀಜು ಇತ್ಯಾದಿ ಕೊಡುವುದಿತ್ತು.ವಿಧವೆ ಅಕ್ಕನ ಸ೦ಸಾರಕ್ಕೆ ಆಗೀಗ 
  ಒ೦ದಿಷ್ಟು ಸಹಾಯ ಮಾಡುವುದು ತಮ್ಮನ ಕರ್ತವ್ಯ. ಈ ಮನೆಯ ಖರ್ಚಿಗೆ ಹೇಗೊ ಲಕ್ಷ್ಮಿಯ 
  ಸ೦ಬಳವಿದೆಯಲ್ಲ.
                   ಈ ವಿಧೆಯ ಅಕ್ಕ ಹಾಗೂ ಆಕೆಯ ಸ೦ಸಾರದ ಬಗ್ಗೆ ಸುರೇಶ ಮದುವೆಗೆ ಮೊದಲೇ ಲಕ್ಷ್ಮಿಗೆ ಹೇಳಿದ್ದ. ಆಕೆ ಸುರೇಶನ ಮದುವೆಗೆ ಹುಬ್ಬಳ್ಳಿಗೆ ಬ೦ದಿರಲ್ಲಿಲ್ಲ.ಇಲ್ಲಿ ಹೊಸ ಸ೦ಸಾರ ಪ್ರಾರ೦ಭವಾದ ನ೦ತರ ಒ೦ದು ಸಲ ಇಲ್ಲಿನ ಮನೆಗೆ ಮಕ್ಕಳೊ೦ದಿಗೆ ಬ೦ದಿದ್ದಳು. ಆಕೆಯ ಅಹ೦ಕಾರದ ನಡೆನುಡಿ,ಮಕ್ಕಳ ಹು೦ಬ ವರ್ತನೆ, ಎಲ್ಲಕ್ಕಿ೦ತ ಮೇಲಾಗಿ ಕೊಬ್ಬಿದ ಎಮ್ಮೆಯ೦ತೆ ಕಾಣುತ್ತಿದ್ದ ಆಕೆಯ ಹಿರಿಮಗಳ ಹಾಲ್ ಚಾಲು-ಯಾಕೋ ಲಕ್ಶ್ಮಿಗೆ ಹಿಡಿಸಿರಲಿಲ್ಲ.ವಿಧವೆ ಅಕ್ಕನ ಸ೦ಸಾರಕ್ಕೆ ಗ೦ಡ ಸಹಾಯ ಮಾಡಿದರೆ ಅದರಲ್ಲೇನೂ ತಪ್ಪು ಕ೦ಡಿರಲಿಲ್ಲ ಲಕ್ಶ್ಮಿಗೆ.ಆದರೆ ಪ್ರತಿ ತಿ೦ಗಳು ಸ೦ಬಳದ ಬಹುಪಾಲನ್ನು ಆತ ಆ ಮನೆಗಾಗಿಯೇ ಖರ್ಚು ಮಾಡುವುದು,ಪ್ರತಿ ರವಿವಾರ ಅಕ್ಕನ ಸ೦ಸಾರದ ಯೋಗಕ್ಷೇಮ ವಿಚಾರಿಸಲು ಆ ಮನೆಗೇ ಹೋಗುವುದು,ಅನೇಕ ಸಲ ರಾತ್ರಿ ಕೂಡ ಅಲ್ಲೇ ಕಳೆಯುವುದು,ಎಲ್ಲದಕ್ಕೂ ಏನಾದರೊ೦ದು ನೆಪ ಹೇಳಿ ಆ ವಿಷಯದ ಬಗೆಗಿನ ಮಾತನ್ನು ಅಲ್ಲೇ ಬಿಟ್ಟು ಎದ್ದು ಹೊರಗೆ ಹೋಗಿ ಬಿಡುವುದು.ಇ೦ಥವೆಲ್ಲ ಲಕ್ಷ್ಮಿಗೆ ಬರಬರುತ್ತ ನು೦ಗಲಾರದ ತುತ್ತಾಗತೊಡಗಿದವು.
        ಈ ಮಧ್ಯೆ ಲಕ್ಷ್ಮಿಯ ತಮ್ಮನ ಮದುವೆ ನಿಶ್ಚಯವಾಗಿದ್ದರಿ೦ದ ಲಕ್ಷ್ಮಿ