ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಸಿವು / ತಿರುಗಿ ಹೋದಳು ೨೨೯

    ಹಮೀದಾಬಾನು ಎಂದಿನಂತೆ ಸಣ್ಣಮುಖ ಮಾಡಿ ಏನೂ ಮಾತಾಡದೆ ತಲೆ ತಗ್ಗಿಸಿದಲಳು.
                       
                              ***
  ಮುಂಬಯಿಗೆ ತಿರುಗಿ ಬಂದಾಗ ಗಂಡನ ಬಗೆಗಿನ ಅಸಮಾಧಾನ ಲಕ್ಷ್ಮಿಯಲ್ಲಿ ಭುಗಿಲ್ಲೆಂದಿತ್ತು. ಆತ ಹುಬ್ಬಳ್ಳಿಗೆ ಆಕೆಯ ತಮ್ಮನ ಮದುವೆಗೆ ಬರೀಕೈಯಲ್ಲಿ ಬಂದಿದ್ದ. ಇದೇಕೆ ಹೀಗೆಂದು ಏಕಾಂತದಲ್ಲಿ ಲಕ್ಷ್ಮಿ ಕೇಳಿದಾಗ 'ಏನು ಮಾಡುವುದು, ಹಣದ ಅಡಚಣೆ ಇತ್ತು,' ಅಂದ. 'ಇಷ್ಟಕ್ಕೂ ನೀನು ಹೇಗೂ ಏನಾದರೊಂದು ಕೊಂಡು ಕೊಡುತ್ತೀಯಲ್ಲ, ನಾನು-ನೀನು ಬೇರೆಯೇ ?' ಅಂದ. ತುಟಿ ಮುಚ್ಚಿಕೊಂಡು ಲಕ್ಷ್ಮಿ ತಾನೇ ಮಾರ್ಕೆಟಿಗೆ ಹೋಗಿ ಅಮ್ಮನಿಗೊಂದು ರೇಶಿಮೆ ಸೀರೆ, ಅಪ್ಪನಿಗೆ ಶಲ್ಯೆ, ತಮ್ಮನಿಗೆರಡು ತೊಲದ ಚೈನು ತಂದಳು.'ಎಲ್ಲಾ ನನ್ನ ಯಜಮಾನರು ಮುಂಬಯಿಯಿಂದ ತಂದದ್ದು' ಅಂತ ಹೇಳಿ ನೆಂಟರಿಷ್ಟರಿಂದ 'ಎಷ್ಟು ಉದಾರಿ ಲಕ್ಷ್ಮಿಯ ಗಂಡ!' ಅನ್ನಿಸಿಕೊಂಡು ಗರ್ವಪಟ್ಟಳು. 
   ಮುಂಬಯಿಗೆ ಬಂದ ಒಂದು ವಾರದಲ್ಲಿ ಗಂಡನ ಉದಾರತೆಯ ಪೂರ್ಣ ಪರಿಚಯವಾಯಿತು ಅವಳಿಗೆ. ಒಂದು ದಿನ ಸಂಜೆ ಆಕೆ ಬ್ಯಾಂಕಿನಿಂದ ಮನೆಗೆ ಬಂದಳು.ಸುರೇಶ ಟೂರ್ ಗೆ ಅಂತ ದಿಲ್ಲಿಗೆ ಹೋಗಿದ್ದ.ಆಗ 'ಸುರೇಶಮಾಮಾ ದಿಲ್ಲಿಯಿಂದ ತಿರುಗಿ ಬಂದ್ರೇನು ಕೇಳ್ಕೊಂಡು ಬಾ ಅಂದಳು ರೇಖಕ್ಕ' ಅಂತ ಕೇಳಿಕೊಂಡು ಬಂದಿದ್ದ ಸುರೇಶನ ಅಕ್ಕನ ಮಗ ರವಿ. ರೇಖಾ ಆ ಅಕ್ಕನ ಹಿರಿಯಮಗಳು.ಸುರೇಶನ ಶಿಫಾರಸ್ಸಿನಿಂದಲೇ ಆಕೆಗೆ ಇತ್ತೀಚೆ ಟೈಪಿಸ್ಟ್ ಕೆಲಸ ಸಿಕ್ಕಿತ್ತು ಯಾವುದೋ ಆಫೀಸಿನಲ್ಲಿ.ಮೂವತ್ತರ ಆ ಹುಡುಗಿಗೆ ಇನ್ನು ಮದುವೆ ಏಕಾಗಿಲ್ಲವೆಂದು ಲಕ್ಷ್ಮಿ ಕೇಳಿದಾಗ ಸುರೇಶ 'ಅವಳಿನ್ನೂ ಚಿಕ್ಕ ಹುಡುಗಿ, ಅವಳಿಗೇನು ವಯಸ್ಸಾಗಿದೆ?' ಅನ್ನುತ್ತಿದ್ದ.ಆಕೆಗೇನು ಅಂಥ ಅರ್ಜೆಂಟು ಕೆಲಸವೋ ಸುರೇಶಮಾಮಾನ ಕಡೆಗೆ? ಆತನಿನ್ನೂ ಬಂದಿಲ್ಲವೆಂದು ಲಕ್ಷ್ಮಿ ಹುಬ್ಬು ಗಂಟಿಕ್ಕಿಯೇ ಉತ್ತರಿಸಿದಳು. ರವಿ ಉತ್ಸಾಹದಿಂದ ಹೇಳಿದ್ದ,'ಮಾಮೀ, ನನ್ನ ಹೊಸಾ ಸುವೇಗ ನೋಡಿದ್ರೇನು? ಮೊನ್ನೆ ಸುರೇಶಮಾಮಾ ಕೊಡಿಸಿದ್ರು.ಮೂರೂವರೆ ಸಾವಿರ ಕೊಟ್ರಂತ. ಬರ್ರಿ,ಹೊರಗಿಟ್ಟೀನಿ, ನೋಡಬರ್ರಿ.ವಂಡರ್ ಫುಲ್ ಅದ.' ಲಕ್ಷ್ಮಿಗೆ ತನಗಾದ ಆಘಾತವನ್ನು ತೋರಿಸಿಕೊಳ್ಳದಿರಲು ನಿಜವಾಗಿಯೂ ಕಠಿಣವೆನಿಸಿತು.
   ದಿಲ್ಲಿಯಿಂದ ಮರಳಿ ಬಂದ ಸುರೇಶ ಒಳ್ಳೆಯ ಮೂಡ್ ನಲ್ಲಿದ್ದ.ಹೆಂಡತಿಯನ್ನು ಅಪ್ಪಿ ರಮಿಸಿ 'ನಿನ್ನ ಬಿಟ್ಟಿರೋದು ಭಾಳ ತ್ರಾಸು ಲಕ್ಷ್ಮೀ' ಅಂದ.ಲಕ್ಷ್ಮಿ ಕರಗಿದಳು. ಆತ ಬೇಕಾದವರಿಗೆ ಬೇಕಾದಷ್ಟು ಖರ್ಚು ಮಾಡಲಿ, ತನ್ನನ್ನು ಮಾತ್ರ