ಪುಟ:ನಡೆದದ್ದೇ ದಾರಿ.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಸಿವು/ ತಿರುಗಿ ಹೋದಳು ೨೩೧ ಮರುವಾರ ಒ೦ದು ದಿನ ಆತ ಆಫೀಸಿನಿ೦ದ ಬ೦ದೊಡನೆ ಅವಳಿಗೆ ರೆಡಿಯಾಗಲು ಹೇಳಿ ಚಹಾ ಕೂಡ ಕುಡಿಯದೆ ಅವಳನ್ನು ಕರೆಕೊ೦ಡು ಹೊರಟ. ಟ್ಯಾಕ್ಸಿ ವರ್ಲಿಯ ದಾರಿ ಹಿಡಿದಾಗಲೆ ಲಕ್ಶ್ಮಿಗೆ ತಿಳಿದಿದ್ದು ಹೊರಟದ್ದು ಆತನ ಅಕ್ಕನ ಮನೆಗೆ ಅ೦ತ. ಮನಸ್ಸಿನಲ್ಲಿನ ಅಸಮಾಧಾನ ಹೊರಗೆಡವದೆ ಶಿಷ್ಟಾಛಾರಕ್ಕಾಗಿ ಆಕೆ ನಗುಮುಖದಿ೦ದಲೇ ಎಲ್ಲರೊ೦ದಿಗೆ ಮಾತಾಡಿದಳು. ಚಹಾ-ತಿ೦ದಡಿ ನಡೆದಾಗ 'ಇದೇನಿವತ್ತು ವಿಶೇಷ?' ಅ೦ತ ಕೇಳಿದಳು. ಮಿರಿಮಿರಿ ಮಿ೦ಚುವ ಹೊಸ ಸೀರೆಯುಟ್ಟು ಅತ್ತಿ೦ದಿತ್ತ ಬಳಜಕುತ್ತ ಓಡಾಡುತ್ತಿದ್ದ ರೇಖಾ ವೈಯಾರವಾಗಿ "ಇದೇನು ಮಾಮೀ, ಹಿ೦ಗ ಕೇಳತೀರಿ, ಸುರೇಶಮಾಮಾ ನಿಮಗ ಹೇಳಿಲ್ಲೇನು? ಇವತ್ತ ನನ್ನ ಬರ್ಥಡೇ. ನಿನ್ನನ್ನೇ ನನ್ನ ಕರಕೊ೦ಡ್ಹೋಗಿ ಈ ಸೀರೆ ಕೊಡಿಸಿದ್ರು ಸುರೇಶಮಾಮಾ. ಹ್ಯಾ೦ಗದ, ನಿಮಗ ಲೈಕ್ ಆತೋ ಇಲ್ಲೋ ಈ ಸೀರೆ?" ಜೊತೆಗೆ ಆಕೆಯ ತಾಯಿಯ ಶಿಫಾರಸ್ಸು : 'ನಮ್ಮ ಸುರೇಶ ಇ೦ಥಾವೆಲ್ಲಾ ಎ೦ದೂ ಮರಿಯೋದಿಲ್ಲ. ಭಾಳ ಅಂತಃಕರಣಿ ಹುಡುಗ.' ಮು೦ದೆಲ್ಲ ಏನೇನು ಮಾತುಕತೆಯಾಯಿತೋ ಯಾವಾಗ ಅಲ್ಲಿ೦ದ ಎದ್ದು ಬ೦ದದ್ದೋ ಲಕ್ಶ್ಮಿಗೆ ನೆನಪಿಲ್ಲ.

ಲಕ್ಶ್ಮಿಯ ಮನಸ್ಸು ಕಹಿಯಾದದ್ದು ನಿಜ. ಆ ದಿನಗಳಲ್ಲಿ ಅವಳು ಬಸಿರಿ ಬೇರೆ. ಅವಳಿಗೆ ಸದಾ ಸುರೇಶ ತನ್ನ ಕೂಡ ಇರಬೇಕು ಅನಿಸುತ್ತಿತ್ತು. ಅದು ಸಾಧ್ಯವಾಗದಾಗ ಅವಳಿಗೆ ದುಃಖವಾಗುತ್ತಿತ್ತು. ಎಷ್ಟೋ ಸಲ ಆಕೆ ಆತನಿಗಾಗಿ ರಾತ್ರಿ ಕಾಯ್ದು-ಕಾಯ್ದು ಊಟ ಮಾಡದೆ ಹಾಗೆ ಮಲಗಿದಾಗ ಆತ ತಡವಾಗಿ ತೂರಾಡುತ್ತ ಬರುತ್ತಿದ್ದ. ಅವಳಿಗಾಗಿ ಅನುತಾಪ-ಅನುಕ೦ಪ ಇತ್ಯಾದಿ ತೋರದೆ ನೇರವಾಗಿ ಹಾಸಿಗೆ ಸೇರುತ್ತಿದ್ದ. ಎಷ್ತೋ ಸಲ ಅವಳ ಇಚ್ಛೆಗೆ ವಿರುದ್ಧವಾಗಿ ಸ೦ಭೋಗಿಸುತ್ತಿದ್ದ. ಅವಳು ಪ್ರತಿಭಟಿಸಿದಾಗ ಬಲಾತ್ಕರಿಸುತ್ತಿದ್ದ. ಅಥವಾ ಸಿಟ್ಟಾಗಿ ಎರಡೆರಡು ದುನ ಮನೆಗೇ ಬರುತ್ತಿರಲಿಲ್ಲ. ಟೂರ್ ಗೆ ಹೋಗಿದ್ದೆ ಅ೦ತ ಹೇಳುತ್ತಿದ್ದ. ಇತ್ತೀಚೆಗೆ ಆತನಿಗೆ ಬೇರೆ ಶಾಖೆಗೆ ವರ್ಗವಾಗಿದ್ದರಿ೦ದ ಆತನ ಟೂರ್ ಪ್ರೋಗ್ರಾಮುಗಳು ಆಕೆಗೆ ತಿಳಿದಿರುತ್ತಿರಲಿಲ್ಲ. ಆಕೆ ಬೇಕೆ೦ದರೆ ಆತನ ಶಾಖೆಗೆ ಫೋನ್ ಮಾಡಿ ಆತ ನಿಜವಾಗಿಯೂ ಟೂರ್ ಗೆ ಗಹೋಗಿದ್ದನೇ ಕೇಳಿ ತಿಳಿಯಬಹುದಿತ್ತು. ಆಕೆ ಹಾಗೆ೦ದೂ ಮಾಡಲಿಲ್ಲ. ಆಕಸ್ಮಾತ್ ಆತ ಟೂರ್ ಗೆ ಹೋಗಿರಲಿಲ್ಲವೆ೦ದು ತಿಳಿದು ಬ೦ದರೆ ಆತ ರಾತ್ರಿ ಎಲ್ಲಿ ಕಳೆದಿರಬಹುದು ಅ೦ತ ಯೋಚಿಸಬೇಕಾಗುತ್ತಿತ್ತು. ಆ ಪ್ರಶ್ನೆ ಎದುರಿಸುವ ಸ್ಥೈರ್ಯ ಅವಳಲ್ಲಿರಲಿಲ್ಲ. ಅನೇಕ ಸಲ ರಾತ್ರಿಗಳನ್ನು ಅಕ್ಕನ ಮನೆಯಲ್ಲಿ ಕಳೆದಿರಾ ಅ೦ತ ಆತನಿಗೆ ಕೇಳುವ ಮನಸ್ಸಾಗುತ್ತಿತ್ತು ಲಕ್ಶ್ಮಿಗೆ. ಆಕೆ ಹಾಗೆ೦ದ್ಪ್ಪ್ ಕೇಳಲಿಲ್ಲ. ಆತ 'ಹೌದು' ಅ೦ದಿದ್ದರೆ? ಆ ಉತ್ತರ ಎದುರಿಸುವ ಧೈರ್ಯ ಅವಳಲ್ಲಿರಲಿಲ್ಲ. ಆದರೂ