ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ನಡೆದದ್ದೇ ದಾರಿ

                             ಹಾಗೆ ಮತ್ತೆ ಹಲವು ತಿಂಗಳುಗಳು ಕಳೆದಿದ್ದವು.ಮದುವೆಗೆ ಮೊದಲು ಅದೆಷ್ಟೋ ಪ್ರೇಮದ ಮಾತನಾಡಿದ್ದ. ನೂರಾರು ಆಶ್ವಾಸನೆಗಳನಿತ್ತ, ಬದುಕೊಂದು ಸುಂದರ ಕನಸು ಎಂಬ  ನಂಬಿಕೆ ಮೂಡಿಸಿದ್ದ. ತೀರಾ ರೋಮ್ಯಾಂಟಿಕ್ - ತೀರಾ ಜೆಂಟಲ್ ಆಗಿದ್ದ ಮನುಷ್ಯ ಈತನೆಯೇ ಅಂತ ಸಂಶಯ ಬರುತ್ತಿತ್ತು. ಲಕ್ಷ್ಮಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ತನಗೆ ಜೀವನದ ಬಗ್ಗೆ ವೈರಾಗ್ಯ ಹುಟ್ಟುವ ಹಾಗೆ, ಯಾತರಲ್ಲೂ ಆಸಕ್ತಿ ಉಳಿಯದ ಹಾಗೆ, ಯಾತರ ಬಗೆಗೂ ಉತ್ಸಹವಿರದ ಹಾಗೆ ಮಾಡಿದನಲ್ಲ ಈ ಮನುಷ್ಯ-ಅಂತ ಅವಳಿಗೆ ಈಗೀಗ ಸಿಟ್ಟು ಬರತೊಡಗಿತ್ತು.ತಾನೇಕೆ ಇಷ್ಟೆಲ್ಲಾ ಅಲಕ್ಷ್ಯ-ನೋವು-ಅಪಮಾನ ತಾಳಿಕೊಳ್ಳುತಿದ್ದೇನೆ, ಅಂತ ತನ್ನ ಬಗೆಗೇ  ಜಿಗುಪ್ಸೆಯಾಗೆ ತೊಡಗಿತ್ತು.
                        ಹಾಗಿದ್ದಾಗೊಂದುಸಲ  ಸತತ ಒಂದು ವಾರ ಸುರೇಶ ಮನೆಗೇ ಬರಲಿಲ್ಲ. ಲಕ್ಷ್ಮಿ ಕಾಯ್ದು-ಕಾಯ್ದು ಸುಸ್ತಾಗಿ ಕೊನೆಗೆ ಗಾಬರಿಯಾಗಿ ಈತನ ಬ್ಯಾಂಕಿಗೆ ಫೋನ್ ಮಾಡಿದಳು.'ಯಾರು ಮಾತನೋಡೋದು?' ಅಂತ ಆಚೆಕಡೆಯಿಂದ ಧ್ವನಿ ಬಂದಾಗ ನಾಲಿಗೆ ತಡವರಿಸಿತು,ಹೆಂಡತಿಗೆ ಹೇಳದೆ ಗಂಡ ನಾಪತ್ತೆಯಾಗಬೇಕೆಂದರೆ ! 'ನಾನು ಅವರ ಫ್ರೆಂಡ್' ಅಂದಳು. ಹಾಗೆ ತಾನು ಹೇಳಬೇಕಾದ ಪ್ರಸಂಗ ತಂದುದಕ್ಕಾಗಿ ಎದುರಿಗಿಲ್ಲದ ಗಂಡನನ್ನು ಶಪಿಸಿದಳು. ಆತ ಹತ್ತು ದಿನ ರಜೆ ಹಾಕಿದ್ದಾನೆಂದು ತಿಳಿದಾಗ ನಿಜವಾಗಿ ಕಂಗಾಲಾದಳು.ಆತನ ಅಕ್ಕನ ಮನೆಗೆ ಹೋಗಿ ವಿಚಾರಿಸಲು ಮನಸ್ಸು ಬರಲಿಲ್ಲ. ಹಾಗೇ ಹಗಲು ಊಟ ಬಿಟ್ಟು ರಾತ್ರಿ ನಿದ್ದೆಗೆಟ್ಟು ಚಿಂತಿಸಿ ಚಿಂತಿಸಿ ಹೈರಾಣಾದಳು.
                           ಒಂದು ವಾರದ ನಂತರ ಆತ ಬಂದ. ಗಡ್ಡ ಬೆಳೆದಿತ್ತು.ಕೂದಲು ಬೆಳೆದಿತ್ತು.ಕಣ್ಣು ಕೆಂಪಾಗಿತ್ತು.ಬಟ್ಟೆಯೆಲ್ಲ ಸುಕ್ಕು-ಸುಕ್ಕು .-ಲಕ್ಸ್ಮಿ ತನ್ನೆಲ್ಲ ಕೋಪ-ಅಸಮಾಧಾನ -ಚಿಂತೆ ಮರೆತು ನಿಜವಾದ ಕಳಕಳಿಯಿಂದ ಆತನ ಕೊರಳ ಸುತ್ತ ಕೈ ಹಾಕಿ ಕೇಳಿದಳು.'ಏನಿದು,ಯಾಕೆ ಹೀಗೆ ? ಎಲ್ಲಿದ್ದಿರಿ ?ಏನು ಮಾಡುತ್ತಿದ್ದಿರಿ ?'ಆತ ಸಹಜವಾಗಿಯೇ ಉತ್ತರಿಸಿದ :'ರೇಖಾಗೆ ಬಹಳ ಕೆಟ್ಟದಾದ ಮಲೇರಿಯಾ ಬಂದಿತ್ತು.ದಾವಾಖಾನೆಗೆ ಹಾಕಬೇಕಾಯಿತು. ರಾತ್ರಿ ಅವಳೊಂದಿಗಿರಲು ಯಾರಾಗದರೂ ಬೇಕಲ್ಲ.ಬಹಳ ಸೀರಿಯಸ್ ಆಗಿತ್ತು.ಇವತ್ತೇ ಜ್ವರ ಬಿಟ್ಟಿದ್ದು. ಹೇಳಿ ಹೋಗಲು ಬಂದೆ .ಸ್ವಲ್ಪ ಹಣವೂ ಬೇಕಾಗಿತ್ತು.'
                         ತಾಳ್ಮೆಗೆಟ್ಟು ಚೀರುವ ಧ್ವನಿಯಲ್ಲಿ ಕೇಳಿದಳು ಲಕ್ಷ್ಮಿ, 'ನೀನು ನನ್ನ ಲಗ್ನಾಗೋ ಬದ್ಲು ,ಹೀಂಗ ನನ್ನನ್ನ ದಿನಾ ಕೊಲ್ಲೋ ಬದ್ಲು , ಆ ರೇಖಾನ್ನೇ ಯಾಕ ಲಗ್ನಾಗಿಲ್ಲ ?' 'ಶಟ್ ಅಪ್ 'ಅಂತ ಕೂಗಿ ಆತ ಬಲವಾಗಿ ಕೈಬೀಸಿ ಆಕೆಯ ಕೆನ್ನೆಯ ಮೇಲೆ