ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಹಸಿವು/ ತಿರುಗಿ ಹೋದಳು ೨೩೫ ರಪ್ಪೆಂದು ಬಾರಿಸಿದ. ಕಣ್ಣು ಕತ್ತಲೆ ಬಂದು ಆಕೆ ಅಲ್ಲೇ ಕುಸಿದು ಕೂತಳು.
ಮುಂದಿನದು ದುಃಖದ ಕತೆಯೇ. ಆಕೆ ಆತನನ್ನು ಹಳಿದಳು. ಬದಲಾಗಿ ಆತ ರೇಖಾ ತನ್ನ ತಂಗಿಯ ಸಮಾನ ಅಂದ. ಹೀಗೆಲ್ಲ ಹೊಲಸು ವಿಚಾರ ನಿನ್ನ ತಲೆಯಲ್ಲಿ ಯಾಕೆ ಬಂತು ಅಂದ. ಅಷ್ಟಕ್ಕೆ ಸುಮ್ಮನಾಗದೆ, ನಿನ್ನ ಇತಿಹಾಸವೇ ಹೊಲಸಾಗಿರಬೇಕು,ಅದಕ್ಕೇ ಬೇರೆಯವರ ಬಗ್ಗೆ ಹೀಗೆಲ್ಲ ಹೊಲಸು ವಿಚಾರ ಮಾಡುತ್ತೀ, ಅಂದುಬಿಟ್ಟ. ಮರುದಿನ ಮುಂಜಾನೆ ಲಕ್ಷ್ಮಿ ಬ್ಯಾಂಕಿಗೆ ಹೋಗಿ ಸಿಕ್ ಲೀವ್ಹ್ ಹಾಕಿ ಮಗುವನ್ನುಕರೆದುಕೊಂಡು ಗಂಡನ ಮನೆ ಬಿಟ್ಟು ಹೊರಟು ಹೋಗಿಬಿಟ್ಟಳು. * * * 'ಬಂದಿಯಾ ಲಕ್ಷ್ಮಿ ? ಬಾ. ಕೂಸಿನ ಮೊದಲ್ನೇ ಹುಟ್ಟಿದ ಹಬ್ಬ ಬಂತು.ಇಲ್ಲೇ ಮಾಡೋಣ,ಬಾ- ಅಂತ ನಾನೇ ಪತ್ರಾ ಬರಿಯಾಕಿ ಇದ್ದೆ. ನೀನೇ ಬಂದಿ. ಛಲೋ ಆತು.'
ಅಂದರು ಲಕ್ಷ್ಮಿ ಯ ತಾಯಿ.
ಲಕ್ಷ್ಮಿಯ ಪಾಲಿಗೆ ತುಂಬ ನೋವಿನ ದಿನಗಳು ಅವು.ಎರಡು ತಿಂಗಳ ರಜೆಹಾಕಿ ಬಂದಿದ್ದಳು. ಆದರೆ ಮುಂದೆ? ಆ ಗಂಡನ ಕೂಡ ಆ ಮನೆಯಲ್ಲಿರುವುದು ಹೇಗೆ? ಗಂಡ ಅಲ್ಲಿರುವಾಗ ಅದೇ ಊರಲ್ಲೇ ಬೇರೆ ಮನೆಯಲ್ಲಿರುವುದಾದರೂ ಹೇಗೆ ? ಬೇರೆ ಕಡೆ ಟ್ರಾನ್ಸ್ ಫರ್ ಕೇಳುವುದಾದರೂ ಹೇಗೆ? ನೌಕರಿಯನ್ನೇ ಬಿಟ್ಟರೆ? ಮುಂದೆ ಬದುಕುವ ದಾರಿಯೇನು? ತಮ್ಮ ವೈಮನಸ್ಯ ತಾಯಿ ತಂದೆಗೆ ತಿಳಿದರೆ ಮುಪ್ಪಿನ ಕಾಲದಲ್ಲಿ ಅವರಿಗೆಂಥ ಶಾಕ್ ಆದೀತು? ಎಲ್ಲಿಗೆ ಹೋಗಲಿ? ಏನು ಮಾಡಲಿ? ನೂರು ಪ್ರಶ್ನೆಗಳು. ಯಾವೋಂದಕ್ಕೂ ಉತ್ತರವಿಲ್ಲ.ತಾಯಿಯ ಮನೆಯಲ್ಲಿ ಆರಾಮವಿದೆ. ಸಂಜೆ ಯಾರಿಗಾಗಿಯೂ ಕಾಯಬೇಕಿಲ್ಲ. ಯಾಕೆ ತಡವಾಗಿ ಬಂದಿ ಅಂತ ಕೇಳಿ ಜಗಳವಾಡುವ ಹಾಗಿಲ್ಲ. ಯಾಕೆ ಬರಲಿಲ್ಲ, ಎಲ್ಲಿ ಹೋಗಿರಬಹುದು, ಎಂದೆಲ್ಲ ಚಿಂತಿಸಬೇಕಾಗಿಲ್ಲ.ಆದರೆ-ಆದರೆ ತನಗೆ ಗಂಡ ಬೇಡವೆ?ಈಗಷ್ಟೇ 'ಅಪ್ಪಾ' ಅನ್ನಲು ಕಲಿತಿರುವ ತನ್ನ ಮಗನಿಗೆ ಅಪ್ಪ ಬೇಡವೆ? ಲಕ್ಷ್ಮಿ ಯೋಚಿಸಿ ಸುಸ್ತಾದಳು. 'ಏನು ವಿಚಾರ ಮಾಡ್ತೀ ಲಕ್ಷ್ಮಿ? ಯಾಕೋ ಒಂಥರಾ ಕಾಣಿಸ್ತೀಯಲ್ಲ?' ಅಂತ ಕೇಳಿದ ತಾಯಿಯನ್ನೇ ಒಂದು ಕ್ಷಣ ದಿಟ್ಟಿಸಿದಳು ಲಕ್ಷ್ಮಿ.ತನ್ನ ಗಂಡ-ಮಕ್ಕಳು- ಸಂಸಾರಕ್ಕಾಗಿ ಜೀವ ತೇಯ್ದು ಹಣ್ಣಾಗಿದ್ದಳು ಆ ತಾಯಿ.ಆಕೆಯ ಕಣ್ಣಲ್ಲಿ, ಮುಖದಲ್ಲಿ, ಇಡೀ ವ್ಯಕ್ತಿತ್ವದಲ್ಲಿ ಒಂದುಬಗೆಯ ಸಾರ್ಥಕ ಭಾವ. ನೋಡುತ್ತಿದ್ದಂತೆ ಓಲಾಡುತ್ತಿದ್ದ ಲಕ್ಷ್ಮಿಯಮನಸ್ಸು ಗಟ್ಟಿಯಾಯಿತು. ಸೋತು ಹೋದ. ಆದರೂ