ಪುಟ:ನಡೆದದ್ದೇ ದಾರಿ.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೦ ನಡೆದದ್ದೇ ದಾರಿ "ಹಾಯ್ ಸರೂ,ನೀ ಬ್ಯಾಂಕಿನಿಂದ ಬಂದು ಭಾಳೊತ್ತಾತೇನು? ಸಾರಿ, ನನಗ ಲಗೂ ಬರ್ಲಿಕ್ಕೆ ಆಗ್ಲಿಲ್ಲ. ಇವತ್ತ ಪಗಾರದ ದಿವಸ. ಆಫೀಸಿನ್ಯಾಗ ಗದ್ದ ಲೋಗದ್ದಲ.ಎಲ್ಲಾರೂ ಪಗಾರದ ಸಲುವಾಗಿ ಕಾಯ್ಕೊಂಡು ಕೂತಿರ್ತಾರ.ಎಲ್ಲರಿಗೂ ಕೊಟ್ಟು ಬರೂದ್ರಾಗ ತಡಾ ಆತು. ಇವತ್ತ ಶನಿವಾರ.ಹಾಫ್ ಡೇ. ಅದಕ್ಕ ಮಧ್ಯಾಹ್ನ ಲಗೂನೇ ಬಂದು ನಿನ್ನ ಮ್ಯಾಟನಿ ಶೋಕ್ಕ ಕರೊಂಡು ಹೋಗ್ತೀನೀಂತ ಪ್ರಾಮಿಜ್ ಮಾಡಿದ್ದೆನಲ್ಲ,ವ್ಹೆರಿ ವ್ಹೆರಿ ಸಾರಿ"-ತನ್ನದಲ್ಲದ ತಪ್ಪಿಗಾಗಿಯೂ ಆತ ಕ್ಷಮೆ ಕೇಳುತ್ತಿದ್ದ.ಹೆಂಡತಿ ತನಗಾಗಿ ಕಾಯುವಂತೆ ಮಾಡಿದ್ದು,ಆಕೆಯ ಮನಸ್ಸಿಗೆ ಬೇಸರವಾಗಿರಬಹುದಾಗಿದ್ದು,ಸರಿಯಲ್ಲ ಅಂತ ಆತನಿಗೆ ಅನಿಸುತಿತ್ತು.

       ತಾನು ತಪ್ಪು ಮಾಡಿದಾಗ ತಕ್ಷಣ ಅದಕ್ಕೆ ಪರಿಮಾರ್ಜನೆ ಮಾಡುವುದು ಆತನ ಸ್ವಭಾವ."ಹೋಗಲಿ,ನೀ ಬ್ಯಾಸರ ಮಾಡಿಕೋಬ್ಯಾಡ.ಈಗ ಊಟಾ ಮಾಡಿ ರೆಸ್ಟ್ ತಗೊಳ್ಳೋಣ.ಸಂಜೀನ್ಯಾಗ ಹೋಗೋಣಂತ ಸಿನೆಮಾಕ್ಕ.ಯಾವುದದು,ನಿನ್ನ ಪೆಟ್ ಹೀರೋ ಶಮ್ಮಿಕಪೂರ ಇದ್ದಾನಲ್ಲ? ರಾತ್ರಿ ಅಡಗಿ-ಪಡಿಗಿ ಏನೂ ಮಾಡಬ್ಯಾಡ.ಕಾಮತ್ ಹೋಟೆಲ್ ನ್ಯಾಗ ಊಟಾ ಮಾಡೇ ಮನಿಗೆ ಬರೂಣಂತ.ನಿನಗ ಅಲ್ಲಿಯ ಚೈನೀಜ್ ಡಿಶ್ ಸೇರತವಲ್ಲ?"  
     ಸಿನೇಮಾಗೆ ಅಥವ ಹೊರಗೆಲ್ಲಾದರೂ ಹೋಗಿ ತಡವಾಗಿ ಮನೆಗೆ ಬಂದ ನಂತರ ಅಡಿಗೆ ಮಾಡುವುದು ಬೇಸರದ ಕೆಲಸವೆಂದು ಆತನಿಗೆ ಗೊತ್ತು.ಬೇಸರ ಬಂದರೂ ತೊಂದರೆಯಾದರೂ ದಣಿವಾಗಿದ್ದರೂ ಹಾಗಂತ ಹೇಳದೆ ಸಾಮಾನ್ಯವಾಗಿ ಎಲ್ಲ ಹೆಂಗಸರು ಅಡಿಗೆ ಮಾಡಿಯೇ ಮಾಡುತ್ತಾರಲ್ಲ,ತನ್ನ ಹೆಂಡತಿಗೆ ಆ ತಾಪತ್ರಯ ಬೇಡವೆಂದು ಆತನ ಇಚ್ಛೆ.
     ಹಾಗೆಯೇ ಆಕೆಗೆ ಏನೆಲ್ಲ ಬೇಕು ಅನ್ನುವುದನ್ನೂ ಆತ ಎಷ್ಟು ಚೆನ್ನಾಗಿ ಸ್ಟಡೀ ಮಾಡಿ ಆಬ್ದವ್ರ್ ಮಾಡಿ ತಿಳಿದುಕೊಂಡಿದ್ದಾನೆ-ಆಕೆಗೆ ಚ್ಯೆನೀಜ್ ಡಿಶ್ ಸೇರುತ್ತವೆ.ಅಖ್ತರ್ ಬೇಗಮ್ ನ ಗಜಲ್ ಸೇರುತ್ತವೆ.ಬಿಳಿ ಹಾಗೂ ತಿಳಿಗುಲಾಬಿ ಬಣ್ಣ ಸೇರುತ್ತವೆ.ಬೆಳದಿಂಗಳಲ್ಲಿ ತಿರುಗಾಡುವುದು ಸೇರುತ್ತದೆ.ಹೊರಗೆ ಮಳೆ ಬರುತ್ತಿದ್ದಾಗ ಒಳಗೆ ಬೆಚ್ಚಗೆ ಕೂತು ಬಿಸಿ ಚಹಾದೊಡನೆ ಕಾಂದಾಭಜಿ ತಿನ್ನಲು ಸೇರುತ್ತದೆ.ಹಗುರವಾದ ಕಾಟನ್ ಸೀರೆಗಳು ಸೇರುತ್ತವೆ.ರಾತ್ರಿ ಆತನ ಎದೆಯಲ್ಲಿ ಮುಖ ಹುದುಗಿಸಿ ಮಲಗಲು ಸೇರುತ್ತದೆ-ಇದೆಲ್ಲಾ ಆತನಿಗೆ ಗೊತ್ತಿದೆ.ಆಕೆಯ ಈ ಆಸೆಗಳನ್ನು,ಎಂತಹ ಸಿಂಪಲ್ ಆಸೆಗಳು! ಪೊರೈಸಲು ಆತ ಯಾವಾಗಲೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾನೆ.

"ಅಂಧಾಂಗ ಮಹಾರಾಯ್ತಿ,ಮೊದಲ ನನ್ನ ಕಿಸೇದಾಗಿನ ಸ್ಮಾಲರೀ ಅಮೌಂಟು