ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

242 ಮಾಡೂದು, ಹುಡುಗರಿಗೆ ಹೋಮ್ ವರ್ಕ್ ನೂ ನೀನ ಮಾಡಸದೂ,ಹಿಂಗ ಬ್ಯಾಡಾ. ನಾವು ಈ ಎರಡೂ ಕೆಲಸಾ ಹಂಚಿಗೊಳ್ಳೋಣ - ನೀ ಅಡಿಗೆ ಮಾಡಿದ ದಿವ್ಸ ನಾ ಹೋಮವರ್ಕ್ ಮಾಡಿಸ್ತೀನಿ. ನೀ ಹೋಮ್ ವರ್ಕ್ ಮಾಡ್ಸಿದ ದಿವ್ಸ ಅಡಿಗೆ ನಂದು."

                               *****
   "ಸರೂ ,ಏ ಸರೂ,  ಸ್ವಲ್ಪ  ಟೆರೇಸ್ ಮ್ಯಾಲೆ    ಬಂದು ಕೂಡ ಬಾ..... ಇಲ್ಲೆ ಬಾ ,

ನಿನಗ ಆರಾಮ ಕುರ್ಚಿ ಹಾಕಿ ದಿಂಬು ಇಟ್ಟೀನಿ ನೋಡು .ಇವತ್ತ ಹುಣ್ಣಿವಿ.ಬೆಳದಿಂಗಳು ಎಷ್ಟು ಛೆoದ ಅದ. ಎಲ್ಲ ಚಿಂತೀ ಮರತು ಸ್ವಲ್ಪ ಹೊತ್ತು ಕೂಡೋಣ ...ಹಿಂಗ ನಾವಿಬ್ಬರs ಬೆಳದಿಂಗಳದಾಗ ಕೂತರ ಹಿಂದಿನದೆಲ್ಲ ನೆನಪಾಗ್ತಾದ ಅಲ್ಲ ಲಗ್ನಾದ ಹೊಸದಾಗಿ ಬೆಳದಿಂಗಳ ರಾತ್ರಿ ಮಾಳಿಗೀ ಮ್ಯಾಲ ಹಾಸಿಕೊಂಡು ಮಲಗತಿದ್ದೆವಲ್ಲ...." ಬಹಳ ರಸಿಕ ಗಂಡ ಆತ ;ರಸಿಕತೆಯನ್ನು ಕೊನೆವರೆಗೆ ಉಳಿಸಿಗೊಂಡು ಬಂದಿರುವ ಗಂಡ .

     "ಇಷ್ಟ ವರ್ಷದ್ರೂ ನಮ್ಮ ಭಾವನಾ ಇನ್ನೂ ಹಂಗ ಫ್ರೆಶ್ ಉಳಿದಾವಲ್ಲ -

ನಿನ್ನ ಕಣ್ಣಾಗಿನ ಮಿ೦ಚಿ ೦ಗ ...."

                 ಲಗ್ನವಾಗಿ ಹಲವಾರು ವರ್ಷಗಳು ಕಳೆದು ಹೋದ ನಂತರ ಯಾರ 

ಭಾವನೆಗಳೂ ಫ್ರೆಶ್ ಆಗಿ ಉಳಿದಿರುವುದಿಲ್ಲ, ಯಾವ ಹೆಂಡತಿಯ ಕಣ್ಣಮಿಂಚೂ ಉಳಿದಿರುವುದಿಲ್ಲ... ಆದರೂ ಅವು ಉಳಿದಿವೆ ಅಂತ ಗಂಡನಿಗೆ ಅನ್ನಿಸಬೇಕಾದರೆ ಆತ ನಿಜವಾಗಿ ದಿಲ್ ದಾರ್ ಗಂಡನಾಗಿರಬೇಕು .....

                                            **********       
              "ಸರೂ,ನನ್ನ ಜೀವನದಾಗ ನನಗ  ಎಲ್ಲಾ ರೀತಿಯ ಸುಖಾ-ಸಂಪತ್ತು ,ಕೀರ್ತಿ-

ಅಂತಸ್ತು ,ಮಾನ -ಮರ್ಯಾದೆ ಏನೇನು ಬೇಕೋ ಎಲ್ಲ ವೈಭವಾನೂ ಸಿಕ್ಕಿತು. ಅದರ ಈ ಎಲ್ಲಕ್ಕಿಂತಾ ನನಗ ನೀನು ಬಹಳ ಅಮೌಲ್ಯವಾದ ಆಸ್ತಿ ನೋಡು. ನನ್ನ ಜೀವನಕ್ಕ

ಅರ್ಥಾ ಕೊಟ್ಟಾಕಿ  ನೀನು.ನಿನ್ನಂಥಾ  ಹೆಂಡತಿ ಸಿಕ್ಕದ್ದು  ನನ್ನ ಪುಣ್ಯದ ಫಲ ಯಾಕೆಂದರ 

ನೀ ನನಗ ಈ ಬದುಕಿನ ಸುಖದ ಸಾರಾಮೃತವನ್ನs ಕುಡಿಸೀದಿ."

          ಗಂಡನಿಂದ ಈ ಬಗೆಯ ಕೃತಜ್ಞತೆಯ ಸಂತೃಪ್ತಿಯ ವಿಶ್ವಾಸದ ಮಾತು ಕೇಳುವ ಅವಕಾಶ ಅದೆಷ್ಟು ಹೆಂಡಿರಿಗೆ ಒದಗಿ ಬಂದೀತು?
                                       ************

ಸರೋಜಾಗೆ ಅರ್ಧ ಎಚ್ಚರ , ಅರ್ಧ ನಿದ್ದೆ . ರೂಮಿನಲ್ಲಿ ವಿಶಾಲವಾದ ಮಂಚದ ಮೇಲೆ ಆಕೆ ಒಬ್ಬಳೇ ಮಲಗಿದ್ದಾಳೆ .ಆಕೆಗೆ ನಿದ್ದೆ ಹತ್ತಿದೆಯೆಂದು ,ತೊಂದರೆ ಮಾಡಬಾರದೆಂದು , ಉಳಿದವರೆಲ್ಲ ಹೊರಗೆ ಸೇರಿದ್ದಾರೆ. ಮೆಲುದನಿಯಲ್ಲಿ