ಕೊಡಬಹುದು ನಿಮಗ ಏನನಸ್ತದರೀ ಮಿಸ್ ಶಾಂತಿ!"
-ಈತ ಸುಳ್ಳೇ ತನ್ನ ಉದ್ವಿಗ್ನತಗೆ ಮುಸುಕು ಹಾಕುತ್ತಿದ್ದಾನೆ. ಆದರೆ ನನಗೆ
ಗೊತ್ತಾಗುವದಿಲ್ಲವೇ ಇವನಿಗೆ ಈ ಕತ್ತಲೊಳಗೆ ನಿಶೆ ಏರಿದ್ದು? ಏರುತ್ತಲೇ
ಹೊರಟಿದ್ದು?
"ನೀವ್ಯಾಕೋ ಸೀರಿಯಸ್ ಕಾಣಸ್ತೀರೆಲಾ, ಕಾರಣಾ ಕೇಳಬಹುದೇನು ?"
-ಬೇಡವೋ ಮಹಾರ್ರಯ. ನನ್ನ ಮನಸಿನ್ನಲ್ಲಿ ಈ ಕ್ಷಣದಲ್ಲಿ ನಡೆದಿರುವ
ಗೊಂದಲವನ್ನೆಲ್ಲಾ ನಿನಗೆ ಹೇಳಿದರೆ, ಅದನ್ನು ಕೇಳಿ ನಿನಗೆ ಶಾಕ್ ಆಗುವುದು.
'ಛೇ, ಅಸಹ್ಯ' ಅನಿಸುವದು. ನನಗೆ ಗೋತ್ತೋ ದೇಸಾಯಿ-ನೀನೋ ಬೇರೆ
ಎಲ್ಲರಂತ ಒಬ್ಬ ಸಾಮಾನ್ಯ ಮನುಷ್ಯ.'ಅ' ಸಾಮಾನ್ಯವಾದುದ್ದಕ್ಕೇ ಅಂಜುವ
ಮನುಷ್ಯ. ಬೇಡ, ಸುಮ್ಮನೇ ನಡೆ.
ಹತ್ತು ನಿಮಿಷಗಳು ಎಷ್ಟು ಬೇಗ ಕಳೆದು ಹೋದವು! ತಾನೆಣಿಸಿದಂತೆ ಏನೂ
ಅನಾಹುತವಾಗಲಿಲ್ಲ. ದೇಸಾಯಿ ಸುಮ್ಮನೇ ಎದ್ದಾನೆ. ಒಮ್ಮೆ ಸಹ ತನ್ನ ಸವೀಪ
ಕೂಡಾ-ನಡೆಯುವಾಗ ಸಹಜವೆಂಬಂತೆ, 'ಅವನ'ಹಾಗೆ!-ಬರಲಿಲ್ಲ.
-ಹಾಸ್ಟೇಲಿನ ಗೇಟು ಕಂಡಾಗ ಎಂತದೋ ಉದ್ವಿಗ್ನತೆ ಹೃದಯದಲ್ಲಿ ತುಂಬಿ
ಹರಿಯಿತು.
ಸುರಕ್ಷಿತವಾಗಿ ಬಂದೇನಲ್ಲಾ, ಎಂಬ ಸಮಾದಾನವೆ?
-ಇರಬಹುದು.;
ಏನೂ ಮಜಾ ನಡೆಯಲಿಲ್ಲವಲ್ಲಾ, ಎಂಬ ಅಸಮಧಾನವೆ?
-ಯಾಕಿರಬಾರದು?
"ಥ್ಯಾಂಕ್ಸ್, ಗುಡ್ ನೈಟ್" ಎಂದು ಒಳಗೋಡಿದಳು ಶಾಂತಿ.
ಎಂಥದೋ ಅನಿರ್ದಿಷ್ಟ ಮದುರ ಭಾವ. ದೀಪ ಹಾಕಿದರೆ ಅದೆಲ್ಲಿ
ಕಳೆದು ಹೋಗುವುದೋ ಎಂದು ಕತ್ತಲಲೇ ಆಕೆ ಕಾಟಿನ ಮೇಲೆ ಬಿದ್ದುಕೊಂಡಳು.
-ಊಟ? ಇವತ್ತು ಬೇಡ.
ಗುಯ್ಞ್ ಎಂದು ಹಾರಡುತ್ತಿವೆ ಸೊಳ್ಳೆಗಳು. ಪರದೆ ಹಾಕಲು ಬೇಸರ.
'ಬರುತ್ತೀರಾ ಮಿಸ್ ಶಾಂತಿ ನನ್ನ ಜೊತೆ?'
'ಟೀಗೆ ಬರುತ್ತೀರ ಶಾಂತಿ?'
ಬ್ಯಾಡ್ಮಿಂಡನ್ ಆಡ್ಲಿಕ್ಕೆ ಬರುತ್ತೀರಾ ಶಾಂತಿ?'
'ಫಿಲ್ಮ ಶೋ ನೋಡಲಿಕ್ಕೇ ಬರುತೀರಾ ಶಾಂತಿ?'
'ಮ್ಯಾಡಂ, ಪಿಕ್ಚರಿಗೆ ಬರುತೀರಾ?'
ಪುಟ:ನಡೆದದ್ದೇ ದಾರಿ.pdf/೨೫
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೧೮
ನಡೆದದ್ದೇ ದಾರಿ