246
ಮೊದಲ ಏನೇನ ಮಾಡೀಯೋ ಯಾರಿಗೋತ್ತು.... ಇಕಾ ನೋಡು, ನಾ ಹೇಳಿದ್ದು ನೆನಪಿಟಗೋ, ಹೊರಗಿನ ಗಂಡಸರ ಜೋಡಿ ಖಾಲಿಫುಕಟ ನಕ್ಕೋತ ಮಾತಾಡಿದರ ನಿನ್ನ ಹಲ್ಲs ಮುರೀತೀನಿ...."
"ಏನು, ಹೋಟೇಲಿಗೆ ಹೋಗಬೇಕ ? ಯಾಕ ? ಮಕ್ಕಳು ಹೋಗೋಣಂನತಾರ?
ಆವ್ರಿಗೆ ಸ್ಪಷ್ಟ ಹೇಳು. ಹೋಟೇಲಿನ ತಿಂಡಿ ಆರೋಗ್ಯಕ್ಕ ಛಲೋ ಅಲ್ಲ. ದುಡ್ದೂ ಹಾಳು,ಆರೋಗ್ಯನೂ ಹಾಳು.ಮನ್ಯಾಗ ಏನು ಬೇಕಾಬದ್ದು ತಿನ್ನಿ....ಏನು, ನಿನಗ ಆಡಿಗಿ ಮಾಡ್ಲಿಕ್ಕೆ ಇವತ್ತ ಬೇಜಾರ ? ನಿನಗ ಬೇಜಾರಾದ್ರ ಮಕ್ಕಳಿಗೆ ಮಾಡ್ಲಿಕ್ಕೆ ಹಚ್ಚು.ಅವ್ರೂ ಕಲೀಲಿ.ಬರೇ ಅನ್ನಾ ಮಾಡ್ರಿ,ಚಟ್ನಿಪುಡಿ ಉಪ್ಪಿನಕಾಯಿ ಹಚಿಗೊಂಡು ತಿನ್ರಿ.ಸಿಂಪಲ್ ಊಟಾ ಮಾಡಬೇಕು-ಗಾಂಡಧೀಜಿ ಹೇಳ್ಯಾರ -ಬಾಗಲಾ ಹಾಕ್ಕೋ, ಇವತ್ತ ಕ್ಲಬ್ನ್ಯಾಗ ಡಿನ್ನರ್ ಅದ, ನಾ ರಾತ್ರಿ ತಡಾ ಆಗಿ ಬರ್ತ್ತೀನಿ."
"ಏ ಸರೋಜಿ, ಎಲ್ಲೆ ಸತ್ತೀಯೆ? ಈ ಹುಡುಗರು ಆಳೊದು-ಜಗಳಡೂದು
ಅಂತ ಧಾಂಧಲೆ ನಡಸ್ಯಾರ ನಿನಗ ಕಿವಿ ಕೇಳಸೂದಿಲ್ಲs ? ಇವರ್ನ ಅತ್ಲಾಗ ಎಳಕೊಂಡು ಹೋಗು. ಶನಿವಾರ ಒಮ್ದಿನ ಮಧ್ಯಾಹ್ನ ಒಂದಿಷ್ಟು ಉಂಡು ಮಲಕೊಂದಡೀನಿ, ಒಂದs ಸವನ ಡಿಸ್ಟರ್ಬ್ ಮಾಡ್ಲಿಕ್ಹತ್ಯಾವ ಶನಿಗಳು....ಏನು, ಹಟಾ ಬಂದದ ? ಕಪಾಳಿಗೆ ಒಂಬದೊಂದು ರಪ್ ಅಂತ ಏಟಾ ಕೊಟ್ಟು ಕತ್ತಲಿ ಖೋಲ್ಯಾಗ ಹಾಕಿ ಬಾಗಲಾ ಹಾಕು. ಎರಡ ದಿನಾ ಉಪಾಸ ಹಾಕು. ತಾವs ದಾರಿಗೆ ಬರ್ತಾರ.... ಮಕ್ಕಳ್ನ ಉಪಾಸ ಹಾಕಿ ನೀ ಹ್ಯಾಂಗ ಉಣ್ಣೂದು ಅಂತೀಯಾ ? ಅವರ ಜೋಡಿ ನೀನೂ ಉಪಾಸ ಮಾಡು. ನಿಂದೂ ಆರೋಗ್ಯ ಛಲೋ ಆಗ್ತದ. ಈಗೀಗ ಭಾಳ ದಪ್ಪ ಆಗೀದಿ...."
"ಏ ಸರೋಜೀ, ಇವತ್ತೇನು ರಾತ್ರಿ ಆಡಿಗೀ ಮಾಡೋ ವಿಚಾರ ಇಲ್ಲೇನು ?
ಎಷ್ಟೊತ್ತಾತು ಟೆರೇಸ್ ಮ್ಯಾಲ ಹೋಗಿ ಸುಮ್ನ ದೆವ್ವನ್ಹಾಂಗ ಕೂತು ಬಿಟ್ಟೀಯಲ್ಲ ? ....ಬೆಳದಿಂಗಳು ಅದsನs ? ಇದ್ರೇನಾತು ? ನಿನಗೊಂದು ಈ ಬೆಳದಿಂಗಳ ಹುಚ್ಚು. ಹುಣ್ಣಿವಿ ಬಂದಾಗೊಮ್ಮೆ ನಿನ್ನ ಮೈಯಾಗೀನರೆ ದೆವ್ವ-ಗಿವ್ವ ಬರ್ತದೋ ಏನೋ. ಅದಕ್ಕ ಹಿಂಗ ಕಣ್ಣ ಮುಚಿಗೊಂಡು ಸುಮ್ಮ ಕೂತುಬಿಡ್ತೀ....ಯಾರಿಗರೆ ದೆವ್ವಾ ಬಿಡಿಸವ್ರಿಗೆ ಕೇಳನಬೇಕು...."
"ನೀ ಹೀಂಗ ಬರ್ಥಡೇ ಬಂತು- ಅದು ಬಂತು ಅಂತ ಹೊಸಾ ಸೀರಿ
ತಗೊಳ್ಳೂದು, ಸ್ವೀಟ್ಸ್ ಮಾಡೂದು, ಮಂದಿನ್ನ ಕರದು ಪಾರ್ಟಿ ಕೊಡೂದು ವಗೈರೆ ಎಲ್ಲಾ ಹುಚ್ಚುಚ್ಚಾರ ಬಿಟ್ಟುಬಿಡು. ಮನ್ಯಾಗ ರಗಡ ಸೀರಿ ಅವ. ಸುಮ್ಸುಮ್ನ ಖರ್ಚು ಮಾಡಬಾರದು....ಮನ್ಯಾಗ ಎರಡು ಸೀರಿ-ಹೊರಗ ಹೋರಗ ಹೋಗ್ಲಿಕ್ಕೆ ಎರಡು ಸೀರಿ, ಒಟ್ಟು ನಾಲ್ಕು ಸೀರಿ ಇದ್ದರ ಸಾಕು. ಎಂಥಾ ಸೀರಿ ಉಟ್ಟರೇನು, ಬರಬರತ ಹರೀದಾಕಿ