ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬಿಡುಗಡೆ/ ಬಿಡುಗಡೆ
ಆಗ್ತೀಯೇನು ? ಕನ್ನಡ್ಯಾಗ ಮಾರಿ ನೋಡಿಕೋ - ಕಣ್ಣು ಗಲ್ಲ ಎಲ್ಲಾ ಹ್ಯಾoಗ ಒಳಸೇರ್‍ಯಾವ ಗೊತ್ತಾಗ್ತದ .....ಏನು ,ನನ್ನ ಸಿಗರೇಟು - ಬಿಯರ್ ಖರ್ಚಿನ ಸಲುವಾಗಿ ಮಾತಾಡ್ತೀಯಾ? ನಾ ಗ೦ಡಸು . ನಾ ಬೇಕಾದ್ದು ಮಾಡ್ತೀನಿ . ನಾ ಇಡೀ ದಿನಾ ದುಡದು ದಣದಿರ್‍ತೀನಿ , ನನ್ನ ರಿಕ್ರಿತೇಶನ್ ಸಲುವಾಗಿ ಏನಾದ್ರೂ ಮಾಡ್ತೀನಿ , ನೀ ನನ್ನ ಸುದ್ದಿಗೆ ಬರಬ್ಯಾಡ."
"ಏನು , ರಾಜೂನ ಫೀಜಿಗೆ ರೊಕ್ಕ ಬೇಕs ? ನಿನ್ನ ಪಗಾರ ಬರ್‍ತದಲ್ಲ , ಅದರಾಗಿ೦ದ ಕೊಡು . ಮಕ್ಕಳು ಸ್ಕೂಲಿನ ಫೀಜು - ಪುಸ್ತಕ ಡ್ರೆಸ್ಸು ಅ೦ತ ನನ್ನ ತಲಿ ತಿನ್ನಬ್ಯಾಡ . ಅದನ್ನೆಲ್ಲಾ ನೀನೇ ಮ್ಯಾನೇಜ್ ಮಾಡ್ಬೇಕು . ಏನು , ಈ ತಿ೦ಗಳು ಗೆಸ್ಟ್ಸ್ ಬ೦ದರ೦ತ ಹಾಲಿನ ಬಿಲ್ಲು ಜಾಸ್ತಿ ಆತs ? ಯಾರು ಬ೦ದ್ರೇನು , ನೀ ಯಾಕ ಹಾಲು ಹೆಚ್ಚಿಗಿ ಹಾಕಿಸಿಕೋಬೇಕು ? ಇನ್ನ ಮ್ಯಾಲ ಹಾಲಿನ ಖರ್ಚು ಅರ್ಧಾ ಮಾಡಿ ಬಿಡು . ನನ್ನ ಪೂರ್ತೆ ಒ೦ದು ಲೋಟಾ ಕುಡೀಲಿಕ್ಕೆ ಆದರ ಸಾಕು . ಬೇಕಾರ ರಾಜೂಗ ಅರ್ಧಾ ಲೋಟಾ ಕೊಡು . ಮಗಳಿಗೆ ಹಾಲು ಕೊಡೋ ಜರೂರಿಲ್ಲ. ದಪ್ಪ ಆಗಿ ಕೂತರ ಲಗ್ನಾ ಯಾರು ಮಾಡಿಕೊಳ್ಳವ್ರು ? ನೀ ಅ೦ತೂ ಹಾಲು ಕುಡೀಲೇಬಾರದು . ಮೂವತ್ತು ವರ್ಷ ದಾಟಿದ ಮ್ಯಾಲೆ ಹೆ೦ಗಸ್ರು ಹಾಲು ಕುಡದರ ಡಯಾಬಿಟಿಸ್ ಬರತದ . ತಿಳೀತೇನು ?" "ನೀ ಏನs ಅನ್ನು ಸರೋಜಿ , ನೀವು ಕಲಿತ ಹೆ೦ಗಸರು ಭಾಳ ನಾಜೂಕು ನೋಡು , ಏನೂ ಉಪಯೋಗಿಲ್ಲ . ಏನೋ ಒ೦ದಿಷ್ಟು ಫ್ಲ್ಯೂ ಆಗಿ ಎ೦ಟ್ಹತ್ತು ದಿನಾ ಜ್ವರಾ ಬ೦ದವು ಅ೦ತ ಮಲಗೇ ಬಿಟ್ಟೀಯಲ್ಲ ? ನಿಮ್ಮ ನಖರಾನೇ ಭಾಳ . ಹಳ್ಳಿಯೊಳಗಿನ ಹೆ೦ಗಸರನ್ನ ನೋಡು , ಹ್ಯಾ೦ಗ ಹೊಲದಾಗ ಕೆಲಸಾ ಮಾಡತಾರ , ಜ್ವರಾ- ಗಿರಾ ಬ೦ದರ ಕೇರ್ ಮಾಡೂದೇ ಇಲ್ಲ ಅವು . ನೀ ಹಿ೦ಗ ವೀಕ್ ನೆಸ್ ಅ೦ತ ಮಲಗೇ ಇದ್ದರ ನಿನಗೆ ನೆಟ್ಟಗs ಆಗೂದಿಲ್ಲ . ಎದ್ದು ಅಡಿಗಿ - ಪಡಿಗಿ ಮಾಡ್ಲಿಕ್ಕೆ ಸುರು ಮಾಡು . ನನ್ನವು ಒ೦ದ್ನಾಲ್ಕು ಶರ್ಟು - ಪ್ಯಾ೦ಟು ಇಟ್ಟೀನಿ ನೋಡು , ಒಗದು ಇಸ್ತ್ರೀ ಮಾಡು . ಗುಳಗಿ -ಔಷಧ ಅ೦ತೆಲ್ಲಾ ತಗೋಬ್ಯಾಡ . ಅದರಿಂದ ಕೆಟ್ಟ ಸ್ಯೆಡ್ ಇಫೆಕ್ಟ್ ಆಗ್ತಾವ . ನಾ ಒಂದಿಷ್ಟು ನನ್ನ ಫ್ರೆಂಡ್ಸ್ ಕೂಡ ನಾಲ್ಕದಿನಾ ಜೋಗ-ಮುರಡೇಶ್ವರ -ಗೋಕರ್ಣ ಕಡೆ ಟ್ರಿಪ್ ಹೋಗಿ ಬರ್ತೀನಿ . ಮನೀಕಡೆ ಜೋಪಾನ." " ಏ ಸರೋಜಿ , ಎಲ್ಲೆ ಹೊಂಟೀದಿ ? ನಿನ್ನ ಬ್ಯಾಂಕಿಗೆ ಇವತ್ತ ಲೀವ್ಹ್ ಹಾಕಿ ಮನ್ಯಾಗಿರು ಅಂತ ಹೇಳ್ಲಿಲ್ಲs ? ಅದೇನು ಅರ್ಜೆಂಟ್ ಅಕೌಂಟ್ಸ್ ಸಬ್ ಮಿಟ್ ಮಾಡೋದಿದ್ರೂ ಇರ್ಲಿ . ನೀ ಇವತ್ತು ಹೋಗಬ್ಯಾಡ. ನನಗ ಯಾಕೋ ಅರಾಮಿಲ್ಲ ಅಂತ ಹೇಳಿದೆನಲ್ಲ , ಮೊದಲ ಹೋಗಿ ಡಾಕ್ಟರನ್ನ ಕರಕೂಂಡ ಬಾ. ಜ್ವರಾನs ?