ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳ್ಳುಗಳು/ಮುಳ್ಳುಗಳು
೧೯

'ಬರುತ್ತೀರಾ ಶಾಂತಿ?'....'ಬರುತ್ತೀರಾ ಶಾಂತಿ?'
-ಕಿಟಾರನೆ ಕಿರುಚಬೇಕೆನಿಸಿತು ಅವಳಿಗೆ.ಹತ್ತಾಗಿ-ನೂರಾಗಿ ಕೀಸರಿಟ್ಟಿರುವ
ಈ ಅಪರಿಚಿತ ದನಿಗಳು ಎಲ್ಲಿಯವು?ಯಾರು ಹೀಗೆ ಕರೆಯುವವರು?
ಎಲ್ಲಿದ್ದಾರೆ?ಹೀಗೆ ಬಹಿರಂಗವಾಗಿ ತನ್ನ ಅವಮಾನ ಮಾಡಲು ಎಷ್ಟು ಧೈರ್ಯ
ಈ ಅಯೋಗ್ಯರಿಗೆ? ಒಬ್ಬೊಬ್ಬರನ್ನಾಗಿ ಒದ್ದು ಕಳಿಸಬೇಕು ಇವರೆಲ್ಲರನ್ನೂ.
ಮುಳ್ಳು ಚುಚ್ಚಿದಂತಾಗುವ ಈ ಸೊಳ್ಳೆಗಳ ಕಡಿತ ಸಹಿಸಲಾಗುವುದಿಲ್ಲ ಇನ್ನು.
ಎದ್ದು ಸುತ್ತಲೂ ಮಚ್ಛರದಾನಿ ಹಾಕಬೇಕು. ಇಲ್ಲವಾದರೆ ರಾತ್ರಿಯಿಡೀ ಕಣ್ಣಿಗೆ ಕಣ್ಣು
ಹತ್ತಲಿಕ್ಕಿಲ್ಲ.
'ಬರುವುದಿಲ್ಲ ಹಾಳಾಗಿ ಹೋಗಿರೋ' ಎಂದುಕೊಂಡು ಶಾಂತಿ
ಮಚ್ಛರದಾನಿಯನ್ನು ಇಳಿಬಿಟ್ಟಳು. ತುಂಬ ಹೊದ್ದುಕೊಂಡು ಮಲಗಿದಳು.
ದೇಸಾಯಿಯೊಬ್ಬ ವಿಚಿತ್ರ ಮನುಷ್ಯ. ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ
ಹೆಚ್ಚು ಗೂಢವಾಗುತ್ತ ನಡೆದಿದೆ ಅವನ ವ್ಯಕ್ತಿತ್ವ.ಬಹಳ ಮಜಾ ಇದ್ದಾನೆ....
-ಒಂದು ಸೊಳ್ಳೆ ಹೇಗೋ ತಪ್ಪಿಸಿಕೊಂಡು ಒಳಸೇರಿದೆ.ಗುಯ್ನ್ ಎಂದು
ಒಂದೇ ಸಮನೆ ಕಿರಿಚುತ್ತ ಹಾರತೊಡಗಿದೆ. ಇದರಿಂದೇನೂ ನಿದ್ರೆಗೆ ಬಹಳ ಭಂಗ
ಬರಲಾರದು. ಇರಲಿ, ಇಡೀ ದಿನ ಇಷ್ಟು ದಣಿದ ನಂತರ ಯಾರು ಈಗ ಈ ಒಂಟಿ
ಸೊಳ್ಳೆಯನ್ನು ಓಡಿಸಲೆಂದು ಎದ್ದು ದೀಪ ಹಾಕುವ ತ್ರಾಸು ತೆಗೆದುಕೊಳ್ಳಬೇಕು?
-ನಿದ್ರೆಯೇಕೆ ಬರಲೋಲ್ಲದು?ಇದೂ ನನ್ನ ಜೊತೆ ಆಟ ಆಡತೊಡಗಿದೆ.
ಇದಕ್ಕೆ ಸೋಲಬಾರದು. ನಿದ್ರೆ ಬರಿಸಿಕೊಳ್ಳುವ ಸುಲಭ ಸಾಧನ ನನಗೆ
ಗೊತ್ತಿದೆ-ಭವಿಷ್ಯದ ಬಗೆಗೆ ನಿಷ್ಫಲ, ಆದರೆ ಕನಸು ಕಾಣುವುದು....
ಹೌದು, ಒಂದೇ ದಾರಿ.ಮುಳ್ಳುಗಳ ನೆನೆಪಿನಿಂದ ದೂರ ಹೋಗಲು ಇದೊಂದೇ
ದಾರಿ....
ಥಟ್ಟನೇ 'ಅವನ' ನೆನಪು. ಈಗ ರಾತ್ರಿ ಹತ್ತು ಗಂಟೆ. 'ಅವನು' ಏನು
ಮಾಡುತ್ತಿರಬಹುದು?ಮಲಗಿಕೊಂಡಿರಬಹುದು....ತನ್ನ ಹೆಂಡತಿಗೆ, ತನಗೆ ಬಹಳ
ವಿಧೇಯಳಾಗಿರುವಳೆಂದುಕೊಂಡು ಆರಿಸಿ ಮದುವೆಯಾದ ಆ ಎರಡು ಸಾರಿ
ಮ್ಯಾಟ್ರಿಕ್ ನಾಪಾಸಾದ ಹುಡುಗೆಗೆ ಹೇಳುತ್ತಿರಬಹುದು-'ಪ್ರಿಯೆ, ನನ್ನ
ಹೃದಯದಲ್ಲಿ ನಿನ್ನ ಮೂರ್ತಿ ಭದ್ರವಾಗಿ ನೆಲೆಯೂರಿದೆ'. -ಎಂದು.
ಛೇ, ಈ ವಿಚಾರ ಬೇಡವೇ ಬೇಡ.
ಮತ್ತೇನು ವಿಚಾರಿಸುವುದು ಹಾಗಾದರೆ?
-ಮುಂಜಾನೆ, ನಾಳೆಯಲ್ಲ, ಮುಂದೊಂದು ದಿನ ಮುಂಜಾನೆ, ತನ್ನನ್ನೆಬ್ಬಿಸಲು