ಪುಟ:ನಡೆದದ್ದೇ ದಾರಿ.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ನಡೆದದ್ದೇ ದಾರಿ

ಸುಮ್ಮನಿದ್ದಳು. ಆಗ ಮೊದಲ ಬಾರಿಗೆ ಆತನ ನಿಶ್ಚಿಂತೆ ಹಾರಿ ಕಳವಳ ಮೂಡಿತು: "ಏನಿದು? ಯಾಕೆ ಡಾಕ್ಟರ ಕಡೆ ಹೋಗಿ ಕ್ಲಿಯರ್ ಮಾಡಿಸಿಕೊಂಡು ಬರಲಿಲ್ಲ?"

    "ಹಾಗೆ ಮಾಡಬೇಕು ಅನ್ನಿಸಲಿಲ್ಲ, ಅದಕ್ಕೆ."
    ಒಂದು ಕ್ಷಣ ದಿಗ್ಭ್ರಮೆಗೊಂಡರೂ ಮರುಕ್ಷಣ ಸಾವರಿಸಿಕೊಂಡು ನಗುತ್ತ           ಆತನೆಂದ, "ಓಹೋ, ನಾನು  ಬರಲಿ ಅಂತ ಕಾಯ್ದಿದ್ದೆಯಾ?ಸರಿ. ಇವತ್ತು ಸಂಜೆ ಹೋಗೋಣ."  - ಆಕೆ ಸುಮ್ಮನಿದ್ದಳು. ಸಂಜೆಯಾದಾಗ ಆತನೊಂದಿಗೆ ಡಾಕ್ಟರಲ್ಲಿಗೆ ಹೋಗಿ ಖಾಲಿಯಾಗಿ ಬರಲು ಒಲ್ಲೆ ಅಂದಳು. ಅಲ್ಲಿಂದ ಸುರುವಾಯಿತು ಭಿನ್ನಾಭಿಪ್ರಾಯ; ವಾದ; ಚರ್ಚೆ; ವೈಮನಸ್ಯ; ಮನಸ್ತಾಪ.
    "ಇದೆಂತಹ ಹುಚ್ಚು ನಿನಗೆ? ಮಗು ಹಡೆಯುತ್ತೀಯಾ? ಏನು ಮಾಡುವುದು ಮಗು ತೆಗೆದುಕೊಂಡು? ನಮ್ಮ ಎಲ್ಲ ಸ್ವಾತಂತ್ರ್ಯವೇ ಖಲಾಸ್ ಆಗುವುದಿಲ್ಲವೇ? ಇಷ್ಟಕ್ಕೂ ... ಇಷ್ಟಕ್ಕೂ... "ಆತ ಅನುಮಾನಿಸಿದ.
   ಏನು ಇಷ್ಟಕ್ಕೂ?" ಆಕೆ ಬಿರುಸಾಗಿ ಕೇಳಿದಳು.
   "ಮಗು ಹೆರಲು ನಮಗೆ ಅಧಿಕಾರವಿಲ್ಲ. ಕಾನೂನು ಪ್ರಕಾರ ನಾವು ಗಂಡ ಹೆಂಡತಿ ಅಲ್ಲವಲ್ಲ. ನಿನಗಿಷ್ಟೂ ತಿಳಿಯಬಾರದೆ?" ಇಷ್ಟು ಹೇಳಲು ಆತನಿಗೆ ತುಂಬ ಮುಜುಗರವಾಯಿತು.
   ಆಕೆ ನಕ್ಕಳು. "ನೀನೂ ಸಹ ಕಾನೂನಿನ ಬಗ್ಗೆ ಮಾತಾಡುತ್ತೀಯಲ್ಲ ಸಾಮಾನ್ಯ ಮಂದಿಯ ಹಾಗೆ| ಮಗು ಹೆರುವುದು ಹೆಂಗಸಿನ ಜನ್ಮ ಸಿದ್ಧ ಹಕ್ಕು. ಇದು ನನ್ನ ಮರ್ಜಿ. ನಿನ್ನ ಸಲಹ ಅನವಶ್ಯ."
   "ಅಂದರೆ ನಾನು ನಿನ್ನನ್ನ ಮದುವೆಯಾಗಬೇಕು ಅಂತ ಒತ್ತಾಯಿಸುವ ರೀತಿಯೋ ಇದು? "ಕಂಗೆಟ್ಟು ಕೇಳಿದ ಆತ.
   "ಛೀ..." ಆಕೆಗೀಗ ನಿಜವಾಗಿ ಸಿಟ್ಟು ಬರತೊಡಗಿತ್ತು. ಎಂತಹ ಆಪಾದನೆ ಮಾಡುತ್ತಿದ್ದಾನೆ. ಕಷ್ಟಗಳು ಬಂದಾಗ ಮನುಷ್ಯನಿಗೆ ಈ ಪರಿ ಬುದ್ಧಿ ವಿಕಲ್ಪವಾಗು ವುದುಂಟೇ? ತನ್ನ ಬಗೆಗೆ ಈತ ತಪ್ಪು ತಿಳಿದುಕೊಳ್ಳುವುದಕ್ಕೂ ಒಂದು ಮಿತಿ ಬೇಡವೆ? ತನ್ನನ್ನು ನಿಯಂತ್ರಿಸಿಕೊಳ್ಳುತ್ತ ಶಾಂತವಾಗಿಯೇ ಆಕೆ ಹೇಳಿದಳು.
   "ಇಲ್ಲ, ನಾನೆಂದೂ ನಿನ್ನನ್ನು ಯಾತಕ್ಕಾಗಿಯೂ ಒತ್ತಾಯಿಸಿಲ್ಲ. ಈಗಲೂ ಮುಂದೆಯೂ  ಎಂದಿಗೂ ಒತ್ತಾಯಿಸುವುದಿಲ್ಲ."
   "ಮತ್ತೆ? ಏನು ನಿನ್ನ ಈ ಪರಿಯ ಅರ್ಥ?"
   "ಏನಿಲ್ಲ, ಬಹಳ ಸಿಂಪಲ್. ನನ್ನ ಹೊಟ್ಟಯಲ್ಲೊಂದು ಮಗು ರೂಪ ತಳೆಯುತ್ತಿದೆ. ನನಗದು ಜೀವಸಹಿತವಾಗಿಬೇಕು. ಇಷ್ಟೆ,"