ಪುಟ:ನಡೆದದ್ದೇ ದಾರಿ.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ಹೀಗೊಂದು ಕತೆ " ಮಗುವಿನ ತಾಯಿಯಾಗಬೇಕಾಗದರೆ ಮೊದಲು ನೀನು ಮದುವೆಯಾಗಬೇಕಿಲ್ಲವೆ ? " " ಛೆ, ಅದಕ್ಕೂ - ಇದಕ್ಕೂ ಏನು ಸಂಬಂಧ ?" "ಅಂದರೆ....ಅಂದರೆ ನೀನು ಅವಿವಾಹಿತ ತಾಯಿ ಆಗಬೇಕೆನ್ನುವಿಯಾ?" ಆತನ ಧ್ವನಿಯಲ್ಲೀಗ ಕ್ಷೋಭೆಯಿತ್ತು. ಚೀತ್ಕಾರವಿತ್ತು. ಹತ್ತು ವರ್ಷ ಜೊತೆಯಲ್ಲಿ ಕಳೆದ ಮನುಷ್ಯ . ಎಲ್ಲ ಸಾಮಾನ್ಯರಿಗಿಂತ ಬೇರೆಯಾಗಿ ತೋರಿ ತನ್ನನ್ನು ಆಕರ್ಷಿಸಿದ್ದ ಮನುಷ್ಯ.ಎಲ್ಲ ಲಕ್ಷ್ಮಣರೇಖೆಗಳಾಚೆ, ಎಲ್ಲ ರೀತಿ ರಿವಾಜುಗಳಾಚೆ, ಎಲ್ಲ ಬಂಧನ - ನಿಯಮಗಳಾಚೆ ಬಂದು ತನ್ನೊಂದಿಗೆ ಬದುಕು ಸವೆಸಿದ್ದ ಮನುಷ್ಯ. ಇವನು ಇಷ್ಟು ಸಾಮಾನ್ಯ ಸ್ತರದಲ್ಲಿ ಯೋಚಿಸಬಹುದೆಂದು ಯಾರಿಗೆ ಗೊತ್ತಿತ್ತು? ವಾದ-ವಿವಾದದಿಂದ ಬೇಸತ್ತಿದ್ದ ಆಕೆ ನಿರ್ಧಾರದ ಧ್ವನಿಯಲ್ಲಿ ಹೇಲಿದಳು,"ನೋಡು,ನಾನು ತಾಯಿಯಾಗಬೇಕು ಅಂದುಕೊಂಡಿದ್ದೇನೆ.ಆಗಬಹುದೇ ಅಂತ ನಿನ್ನನ್ನು ಕೇಳುತ್ತಿಲ್ಲ.ಆದ್ದರಿಂದ ನೀನು ಏನೂ ಉಪದೇಶ - ಮಾರ್ಗದರ್ಶನ-ಸಲಹೆ ಕೊಡಬೇಡ.ನಾನು ಬರೀ'ತಾಯಿ'ಯಾಗಬೇಕು ಅನ್ನುತ್ತಿದ್ದೇನೆ. ಇದಕ್ಕೆ ಯಾವ ವಿಶೇಷಣವನ್ನೂ ಹಚ್ಚಬೇಡ," "ಏನು ಹಾಗಂದರೆ ? ಜನರು-ಜನರು ಏನಂದಾರು ?" "ಜನರು?" -ಆಕೆಗೆ ಮೊದಲು ಬಾರಿಗೆ ಆತನ ಬಗ್ಗೆ ತೀವ್ರ ತಿರಸ್ಕಾರ ಉಂಟಾಯಿತು. ಆತನಿಗೂ ತನ್ನ ತಪ್ಪಿನ ಅರಿವಾಗಿರಬೆಕು. ಬೇರೆ ಯಾವಳಾದರೂ ಆಗಿದ್ದರೆ ಹತ್ತೆಂಟು ಪ್ರಶ್ನೆ ಕೇಳುತ್ತಿದ್ದಳೇನೋ - ಇಷ್ಟು ದಿನ 'ಜನರು' ಇರಲಿಲ್ಲವೆ ?ಈಗ ಎಲ್ಲಿಂದ ಬಂದರು 'ಜನರು' -ಇತ್ಯಾದಿ. ಆದರೆ ಆಕೆ ಸುಮ್ಮನಿದ್ದಳು.ಹೀಗಾಗಿ ಆಕೆಯೆದುರು ತಾನು ಸಣ್ಣವನಾದೆ ಅನ್ನಿಸಿತು ಆತನಿಗೆ. ಸಮಜಾಯಿಷಿ ಕೊಡುವ ಧ್ವನಿಯಲ್ಲಿ ಆತ ಮಾತನಾಡಿದ : "ನೋಡು, ಜನರಿಗೆ ನಾನು ಅಂಜುತ್ತೇನೆ ಅಂತಲ್ಲ. ಆದರೆ ಎಲ್ಲಕ್ಕೂ ಒಂದು ಮಿತಿ ಇರಬೇಕು - ನಿರ್ಭಯತೆಗೂ. ಈಗಿರುವ ಹಾಗೆ ನಾವು ಸುಖವಾಗಿದ್ದೇವೆ. ಯಾಕೆ ಸುಮ್ಮನೆ ಈ ಇಲ್ಲದ ಜಂಜಡ ? ತಲೆನೋವು ?" "ನಾನು ಹೇಳಿದೆನಲ್ಲ . ನೀನು ಈ ತಲೆನೋವು ಹಚ್ಚಿಕೊಳ್ಳಬೇಕಾಗಿಲ್ಲ . "ನಾನು - ನಲಿವು ಏನಿದ್ದರೂ ಪೂರ್ಣವಾಗಿ ಇದು ನನ್ನದೇ .ನೀನು ನಿರಂಬಳವಾಗಿರು." "ಆದರೆ ಹಗಲು-ರಾತ್ರಿ ನಿನ್ನ ಕೂಡ ಇದ್ದು ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತ ನಾನು ನಿರಂಬಳವಾಗಿರಲು ,indifferent ಆಗಿರಲು ಹೇಗೆ ಸಾಧ್ಯ