ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೬೫ ನಡೆದದ್ದೇ ದಾರಿ
ತಾಯಿ ಆಕೆಯನ್ನು ಲಗ‍್ನವಾಗಲು ಒಪ್ಪಿಗೆ ಕೊಟ್ಟಿದ್ದಾಳೆ. ಆಕೆಯನ್ನು ಅಗಲಿರುವುದು ತನಗೆ ಅಸಾಧ್ಯ. ಲಗ್ನವಾಗಿಯೇ ಬಿಡೋಣ. ಅಂದರೆ ಮಗುವಿಗೆ ಸಮಾಜದಲ್ಲೊಂದು ಸ್ಥಾನ- -ಆತನ ಮಾತನ್ನು ಮಧ್ಯದಲ್ಲೇ ತಡೆದು ಕಟ್ಟಿಗೆ ತುಂಡರಿಸಿದಂತೆ ಆಕೆ ನಿಖರವಾಗಿ ಹೇಳಿದಳು : Sorry, ನನಗೀಗ ಯಾರ ಅವಶ್ಯಕತೆಯೂ ಇಲ್ಲ.ಯಾತರ ಅವಶ್ಯಕತೆಯೂ ಇಲ್ಲ.ನನಗೆ ಬೇಕಾದುದೆಲ್ಲಾ ನನಗೆ ಸಿಕ್ಕಿದೆ . ನಿನ್ನ ದಾರಿ ನೀನು ನೋಡಿಕೋ.... (೧೯೮೯)
.........