ಪುಟ:ನಡೆದದ್ದೇ ದಾರಿ.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿಡುಗಡೆ | ಅನಾಥ ೨೬೧ ಕೆಟ್ಟಿದ್ದ ಮಕ್ಕಳಿಗೆ ಇಂದು ತುಂಬ ಖುಷಿ. ಮಧ್ಯಾಹ್ನದ ಊಟಕ್ಕೂ ಇಂದು ಎಂದಿನಂತೆ ದಪ್ಪ ರೊಟ್ಟಿ - ಬೇಳೆಯ ಸಾರಿನ ಬದಲು ಅನ್ನ ಹಾಗೂ ಏನಾದರೂ ಸಿಹಿ ಸಿಗುತ್ತದೆಂದು ಅವರಿಗೆ ಮೊದಲೇ ಗೊತ್ತಿದ್ದುದರಿಂದ ಅವರೆಲ್ಲ ತುಂಬ ಹುರುಪಿನಿಂದಿದ್ದಾರೆ. ಮತ್ತೊಂದು ವಿಶೇಷವೆಂದರೆ ಅವರಿಗೆ ಇಂದು ಸ್ಕೂಲಿಲ್ಲ. ಆರ್ಥಾತ್ ಹೆಣ್ಮಾಸ್ತರರಿಂದ ಬಡಿಗೆ ಏಟು, ಕಿವಿ ಹಿಂಡಿಸಿಕೊಳ್ಳುವುದು. ಒಂಟಿಗಾಲಲ್ಲಿ ಸ್ಕೂಲು ಸುತ್ತು ಹಾಕುವುದು, ಇದ್ಯಾವುದೂ ಇಲ್ಲ. ದೊಡ್ಡ ಹುಡುಗಿಯರಿಗೆ ತುಸು ಹೆಚ್ಚಿನ ಸಮಾಧಾನ. ಆಕಾರಣವಾಗಿ ಕ್ಲಾಸಿನಲ್ಲಿ ಈ ಹೆಣ್ಮಾಸ್ತರು ಅವರ ಮೈಗೆಎದೆಗೆ ಕೈ ತಾಗಿಸುವುದು, ಗಲ್ಲ ತಿವಿಯುವುದು, ನಿಂದೆಯ ಮಾತಾಡುವುದು ಇತ್ಯಾದಿಗಳಿಂದ ಒಂದು ದಿನ ಅವರಿಗೆ ಬಿಡುಗಡೆ. ಅದೂ ಅಲ್ಲದೆ ಇಂಥ ವಿಶೇಷ ಕಾರ್ಯಕ್ರಮಗಳಿದ್ದಾಗ ಹೊರಗಿನಿಂದ ಯಾರಾದರೂ ಆಮಂತ್ರಿತ ಗಣ್ಯ ಅತಿಥಿಗಳು ಬರುವುದರಿಂದ ಅವರ ಆದರ ಸತ್ಕಾರದಲ್ಲೇ ಹಗಲು-ರಾತ್ರಿ ಎಲ್ಲ ಕಳೆಯುತ್ತಾಳೆ ಕಮಲಮ್ಮ. ಆದ್ದರಿಂದ ಆಕೆ ಹುಡುಗಿಯರ ಕೋಣೆಗಳಿಗೆ ರಾತ್ರಿಯ ರೌಂಡ್ತಿಗೆ ಬರುವ ಭಯವಿಲ್ಲ. ಇಂದು ಆಕೆ ಯಾವ ಹುಡುಗಿಯನ್ನು ಹಠಾತ್ತಾಗಿ ಆಕ್ರಮಿಸಿ, ಹೆದರಿಸಿ ತನ್ನ ಕೋಣೆಗೆ ಎಳೆದುಕೊಂಡು ಹೋಗಿ ತನ್ನ ಮಂಚದಲ್ಲಿ ತನ್ನೊಂದಿಗೆ ರಾತ್ರಿ ಕಳೆಯಲು ಒತ್ತಾಯಿಸುತ್ತಾಳೊ ಎಂಬ ಎದೆಗುದಿಯಿಲ್ಲ. ಇದು ಕಮಲಮ್ಮನಿಗೆ ಇತ್ತೀಚೆ ಬಂದಿರುವ ರೋಗ. ಹುಡುಗಿಯರ ಭಾಷೆಯಲ್ಲಿ ರಾತ್ರಿ ದೆವ್ವ". ವಯಸ್ಕಳಾದ ಯಾವುದಾದರೊಬ್ಬ ಹುಡುಗಿಯನ್ನು ಎಳೆದುಕೊಂಡು ಹೋಗಿ 'ಏನೋ' ಮಾಡುತ್ತಾಳಂತೆ- ಅಂತ ಎಲ್ಲರ ಬಾಯಲ್ಲಿ ಪಿಸುಮಾತು. ಏನೋ ಅಂದರೆ ಏನೆಂದು ತಿಳಿದುಕೊಳ್ಳುವ ಕುತೂಹಲ ಹಲವರಿಗೆ, ಏನು ಅಂತ ಆ ಅನುಭವವಾದ ಹುಡುಗಿಯರಿಗೆ ಕೇಳಿದರೆ ಸಿಗುವ ಉತ್ತರ ಕಿಸಿ ಕಿಸಿ ನಗು, ಒಮ್ಮೊಮ್ಮೆ 'ಛೀ ನಾಚಿಕೆಗೇಡು'. ಅಂತೂ ಕಮಲಮ್ಮನ ರಾತ್ರಿಯ ರೌಂಡ್ ಅವರಿಗೆಲ್ಲ ಹೆದರಿಕೆಯ ವಿಚಿತ್ರ ಕಾತರದ ನಿರೀಕ್ಷಣೆ. ಇಂದು ಅದಿಲ್ಲವೆಂದು ಅವರಿಗೆ ಸಮಾಧಾನ. ಎಲ್ಲ ಹುಡುಗಿಯರೂ ಗುಂಪು ಗುಂಪಾಗಿ ಆಡುತ್ತ, ಹಾಡುತ್ತ, ನಗುತ್ತ ಹೊರಗೆ ಮರಗಳ ಕೆಳಗಡೆ ಇದ್ದಾರೆ. ಆದರೆ ಮಹಡಿಯ ಮೇಲಿನ ಕೊನೆಯ ರೂಮಿನಲ್ಲಿ ಕೋಮಲಾ ಒಬ್ಬಳೇ ಕೂತಿದ್ದಾಳೆ. ಅವಳ ಪಾಲಿಗೆ ಏಕೋ ಈ ಉತ್ಸಾಹ, ಸಂಭ್ರಮ ಸಂತಸ ಇಂದು ಇಲ್ಲವಾಗಿದೆ. ಯಾವಾಗಲೂ ತುಂಟಾಟದಲ್ಲಿ, ಅಭ್ಯಾಸದಲ್ಲಿ ಎಲ್ಲ ಚಟುವಟಿಕೆಗಳಲ್ಲಿ ಉಳಿದವರಿಗಿಂತ ಮುಂದಿರುತ್ತಿದ್ದ ಹುಡುಗಿಗೆ ಇಂದೇನೋ ದಿಗೃಮೆ. ಮುಂಜಾನೆ ಎದ್ದಾಗ ಅವಳೂ ಎಲ್ಲರಂತೆ ಆನಂದದಲ್ಲಿದ್ದಳು. ಬೆಳಗಿನ ನಾಲ್ಕು ಗಂಟೆಗೇ ಆರೆನಿದ್ರೆಯಲ್ಲೇ ಏಳಬೇಕಾಗಿದ್ದರೂ ಎಂದಿನಂತೆ ಇಂದು