ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೦
ನಡೆದದ್ದೇ ದಾರಿ

ಬರುವ ಆ ಗಂಡ ಹೇಗಿರಬೇಕು? ಕ್ರಿಕೆಟಿಯರ್ ಸುಧೀರನ ಹಾಗೆ ಬೇಡ. ಅಂಥವರಿಗೆ
ಬಹಳ ಹುಡುಗಿಯರು ಬೆನ್ನು ಹತ್ತುತ್ತಾರೆ. 'ಅವನ' ಹಾಗಂತೂ ಬೇಡವೇ ಬೇಡ.
'ಅವನ' ಕಣ್ಣತುಂಬ ಬರೀ ಚೂಪುಮುಳ್ಳು. ಇನ್ನ್ಯಾರ ಹಾಗೆ?
ಹಾಳಾದವನು ಹೇಗಾದರೂ ಇರಲೊಲ್ಲನೇಕೆ, ಈಗಂತೂ ಪುಣ್ಯಕ್ಕೆ ನಿದ್ರೆ
ಬರತೊಡಗಿದೆ.....
ಏ ದೇಸಾಯಿ, ಈ ಹೊತ್ತಿನಲ್ಲಿ ಸುಳ್ಳೇ ನೆನಪಿಗೆ ಬಂದು ಕಾಡಬೇಡ ಹೋಗು,
ನಡೆ.
-ಶಾಂತಿ ಗಟ್ಟಿಯಾಗಿ ಮುಸುಕೆಳೆದುಕೊಂಡಳು.